Corona Vaccine ಪಡೆಯುವವರಿಗೆ ಬಿಯರ್-ಐಸ್ ಕ್ರೀಮ್ ಉಚಿತ!

Sat, 10 Apr 2021-7:40 am,

ಸ್ಯಾಮ್ಯುಯೆಲ್ ಆಡಮ್ಸ್ ಬಿಯರ್ (Samuel Adams beer) ಎಂಬ ಕಂಪನಿಯು ಅಮೆರಿಕದ ಓಹಿಯೋದಲ್ಲಿ ಲಸಿಕೆ ಪಡೆಯುವವರಿಗೆ ಬಿಯರ್ ನೀಡಲು ಮುಂದಾಗಿದೆ. ಇದಕ್ಕಾಗಿ, ವ್ಯಾಕ್ಸಿನೇಷನ್ ನಂತರ ಪಡೆದ ಪ್ರಮಾಣಪತ್ರವನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ. ಪ್ರಮಾಣಪತ್ರವನ್ನು ತೋರಿಸುವ ಮೂಲಕ ನೀವು ಉಚಿತ ಬಿಯರ್ ಪಡೆಯಬಹುದು.

ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ, ಕರೋನಾವೈರಸ್ (Coronavirus) ಮತ್ತೆ ತಲ್ಲಣ ಸೃಷ್ಟಿಸಿದೆ. ಈ ದೃಷ್ಟಿಯಿಂದ ಸರ್ಕಾರವು ವ್ಯಾಕ್ಸಿನೇಷನ್ ಅಭಿಯಾನವನ್ನು ಚುರುಕುಗೊಳಿಸಲು ಆದೇಶಗಳನ್ನು ನೀಡಿದೆ. ಆದರೆ ಇಂದಿಗೂ ಕೆಲವರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ ಎಂದು ಕಂಡು ಬಂದಿದ್ದು, ಇಂತಹ ಪರಿಸ್ಥಿತಿಯಲ್ಲಿ ಅಮೆರಿಕದ ಖಾಸಗಿ ಕಂಪನಿಯೊಂದು ಲಸಿಕೆ ಪಡೆಯುವವರಿಗೆ ಉಚಿತ ಬಿಯರ್ ನೀಡುವ ಯೋಜನೆಯನ್ನು ಪ್ರಾರಂಭಿಸಿದೆ.

ಇದಲ್ಲದೆ ಅಮೆರಿಕದ ಮಿಚಿಗನ್‌ನಲ್ಲಿರುವ ಗಾಂಜಾ ಉತ್ಪಾದನಾ ಕಂಪನಿಯೂ ಯುವಕರಿಗೆ ಗಾಂಜಾ ನೀಡುತ್ತಿದೆ. ಕ್ರಿಸ್ಪಿ ಕ್ರೀಮ್ ಡೊನಟ್ಸ್ ಹೆಸರಿನ ಕಂಪನಿಯು ಕರೋನಾವೈರಸ್ ವ್ಯಾಕ್ಸಿನೇಷನ್ (Corona Vaccine)  ನಂತರ ಉಚಿತ ಡೋನಟ್ ಅನ್ನು ನೀಡುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ - Indian Railways: ಈ 6 ನಿಲ್ದಾಣಗಳಲ್ಲಿ ಸಿಗಲ್ಲ ಪ್ಲಾಟ್‌ಫಾರ್ಮ್ ಟಿಕೆಟ್‌

ಯುಎಸ್ ಟುಡೆ ವರದಿಯ ಪ್ರಕಾರ, ಖಾಸಗಿ ಕಂಪನಿಯ ಈ ಕೊಡುಗೆಗಳ ಪರಿಣಾಮ ಲಸಿಕೆ ಕೇಂದ್ರಗಳಲ್ಲಿಯೂ ಕಂಡುಬಂದಿದೆ. ಲಸಿಕಾ ಕೇಂದ್ರಗಲ್ಲಿ ಲಸಿಕೆ ಪಡೆಯಲು ಜನರ ಗುಂಪು ಹೆಚ್ಚಾಗಿ ಸೇರುತ್ತಿದ್ದ ಕಾರಣ ಆಡಳಿತವು ಕೆಲವು ಸ್ಥಳಗಳಲ್ಲಿ ಲಸಿಕೆ ಕೇಂದ್ರದಲ್ಲಿ ಶುಲ್ಕವನ್ನು ತೆಗೆದುಹಾಕಿದೆ.  ವರದಿಗಳ ಪ್ರಕಾರ, ಅನೇಕ ಖಾಸಗಿ ಕಂಪನಿಗಳು ವ್ಯಾಕ್ಸಿನೇಷನ್ ಪಡೆಯುವ ಸಲುವಾಗಿ ತಮ್ಮ ಉದ್ಯೋಗಿಗಳಿಗೆ ರಜೆ ನೀಡುತ್ತಿವೆ.

ಇದನ್ನೂ ಓದಿ - Does sunlight kill the coronavirus?: ಬಿಸಿಲಿನಲ್ಲಿ ಶಕ್ತಿ ಕಳೆದುಕೊಳ್ಳುತ್ತದೆಯೇ ಕೊರೊನಾ ವೈರಸ್

ಅದೇ ಸಮಯದಲ್ಲಿ, ಕೆಲವು ನಗರಗಳಲ್ಲಿ ಕಡ್ಡಾಯ ವ್ಯಾಕ್ಸಿನೇಷನ್ ಆದೇಶವನ್ನು ಹೊರಡಿಸಲಾಗಿದೆ. ರಾಜಧಾನಿ ಬೀಜಿಂಗ್‌ನ ಅನೇಕ ಲಸಿಕೆ ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ಪಡೆಯುವವರಿಗೆ ಉಚಿತ ಐಸ್ ಕ್ರೀಂ ನೀಡಲಾಗುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link