Free Cylinder: ರಾಜ್ಯದ ಜನರಿಗೆ ಬಂಪರ್‌ ಆಫರ್‌! ಸಾಲು ಹಬ್ಬಗಳ ಸಲುವಾಗಿ ಮನೆ ಮನೆಗೂ ಉಚಿತ ಸಿಲಿಂಡರ್‌?

Sat, 24 Aug 2024-9:14 am,

 ನೀವು ನಿಮ್ಮ ಮನೆಯಲ್ಲಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬಳಕೆ ಮಾಡುತ್ತಿದ್ದೀರಾ? ಬೆಲೆ ಏರಿಕೆ ನಿಮಗೆ ತಲೆನೋವಾಗಿ ಪರಿಣಮಿಸಿದೆಯಾ? ಇಲ್ಲಿದೆ ನೋಡಿ ನಿಮಗಾಗಿ ಗುಡ್‌ ನ್ಯೂಸ್‌...  

ಎಲ್‌ಪಿಜಿ ಸಿಲಿಂಡ್‌ ದಿನೇ ದಿನೇ ದುಬಾರಿಯಾಗುತ್ತಿದೆ. ಮಧ್ಯಮ ವರ್ಗದ ಕುಟುಂಬಗಳಿಗೆ ಈ ಬೆಲೆ ಏರಿಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಹೀಗಿರುವಾಗ ಇದೀಗ ಎಲ್‌ಪಿಜಿ ಬಳಕೆದಾರರಿಗೆ ಭರ್ಜರಿ ಗುಡ್‌ ನ್ಯೂಸ್‌ ಸಿಕ್ಕಿದೆ.  

ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಪ್ರತಿ ಒಂದು ಹಳ್ಳಿಯಲ್ಲೂ ದೇಶದ ಪ್ರತಿಯೊಂದು ಮೂಲೆಯಲ್ಲೂ ಸಿಲಿಂಡರ್‌ ಬಳಕೆ ಕಾಣಬಹುದು.   

ಸಿಲಿಂಡರ್‌ ಅನ್ನು ಎಲ್ಲರಿಗೂ ತಲುಪುವಂತೆ ಮಾಡಲು ಕೇಂದ್ರ ಸರ್ಕಾರ ಹಲವು ಯೋಜನೆಗಳೊಂದಿಗೆ ಜನರ ಮುಂದೆ ಬರುತ್ತಿರುವುದು ಗೊತ್ತೇ ಇದೆ.  

ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ಜನರನ್ನು ಆಕರ್ಷಿಸಲು ವಿಭಿನ್ನ ಯೋಜನೆಗಳೊಂದಿಗೆ ಮುಂದೆ ಬರುತ್ತಿದೆ. ಇತ್ತೀಚೆಗಷ್ಟೆ ಮಹಾರಾಷ್ಟರ ಹಾಗೂ ಮಧ್ಯಪ್ರದೇಶ ರಾಜ್ಯ ಸರ್ಕಾರಗಳು ರಕ್ಷಾ ಬಂಧನದ ಪ್ರಯುಕ್ತ ಜನರನ್ನು ಆಕರ್ಷಿಸಲು ಅವರಿಗೆ ಉಚಿತ ಸಿಲಿಂಡರ್‌ ನೀಡುವಂತೆ ಘೋಷಣೆ ಮಾಡಿತ್ತು.  

ಇನ್ನೂ ಕರಾನಾಟಕ ಸರ್ಕಾರ ಕೂಡ ಚುನಾವಣೆಗೂ ಮುನ್ನ ರಾಜ್ಯದ ಜನರಿಗೆ ವರ್ಷಕ್ಕೆ ಐದು ಸಿಲಿಂಡರ್‌ ಉಚಿತವಾಗಿ ಕೊಡುವುದಾಗಿ ಈ ಮುಂಚೆ ಘೋಷನೆ ಮಾಡಿತ್ತಾದರೂ, ಈ ವರೆಗೂ ಈ ಯೋಜನೆ ಜಾರಿಗೆ ಬಂದಿಲ್ಲ.  

ನಗರಗಳಷ್ಟೆ ಅಲ್ಲದೆ ಹಳ್ಳಿಗಳಲ್ಲಿಯೂ ಸಿಲಿಂಡರ್‌ಗೆ ಡಿಮ್ಯಾಂಡ್‌ ಹೆಚ್ಚಗಿದೆ. ಈ ಹೆಚ್ಚುತ್ತಿರುವ ಸಿಲಿಂಡರ್‌ ಬೆಲೆ ಕಂಡು ಜನರು ಕಂಗಾಲಾಗಿದ್ದಾರೆ. ನಮಗೂ ಕೂಡ ಉಚಿತ ಸಿಲಿಂಡರ್‌ ಕೊಡಲ್ವಾ ಅಂತಾ ಕಾಯುತ್ತಾ ಕೂತಿದ್ದಾರೆ.   

ರಕ್ಷಾ ಬಂಧನದ ಪ್ರಯುಕ್ತ ತಾವು ಮಾಡಿದ ಘೋಷಣೆಯಂತೆ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ಈಗಾಗಲೇ ಉಚಿತ ಸಿಲಿಂಡರ್‌ ವಿತರಣೆ ಮಾಡಲು ಆರಂಭಿಸಿವೆ. ಇದೀಗ ರಾಜ್ಯ ಸರ್ಕಾರ ಕೂಡ ಉಚಿತ ಸಿಲಿಂಡರ್‌ ವಿತರಣೆ ಮಾಡಲು ಸಜ್ಜಾಗಿದೆ.  

ಇನ್ನೂ, ಕೇವಲ ಮಧ್ಯಪ್ರದೇಶ ಅಷ್ಟೆ ಅಲ್ಲ ಉತ್ತರ ಪ್ರದೇಶ ಸರ್ಕಾರ ಕೂಡ ಉಚಿತ ಸಿಲಿಂಡರ್‌ ವಿತರಿಸುವುದಾಗಿ ಘೋಷಣೆ ಮಾಡಿತ್ತಾದರೂ. ಈ ರಾಜ್ಯದಲ್ಲಿ ಸಿಲಿಂಡರ್‌ ಪಡೆಯಲು ಜನ ಇನ್ನೂ ಎರಡು ತಿಂಗಳು ಕಾಯಬೇಕಾಗುತ್ತದೆ.  

ಯೋಗಿ ಸರ್ಕಾರ ಕೂಡ ವರ್ಷದ ಎರಡು ಭಾರಿ ಉಚಿತ ಸಿಲಿಂಡರ್‌ ನೀಡುವುದಾಗಿ ಘೋಷಣೆ ಮಾಡಿದ್ದು, ಹೋಳಿ ಹಾಗೂ ದೀಪಾವಳಿ ಸಮಯದಲ್ಲಿ ಈ ಸಿಲಿಂಡರ್‌ಗಳನ್ನು ವಿತರಿಸುವುದಾಗಿ ಹೇಳಿ ಕೊಂಡಿತ್ತು.  

ಇನ್ನೂ ಹೀಗೆ ತಾವು ಹೇಳುರುವಂತೆ ಎಲ್ಲಾ ರಾಜ್ಯಗಳಲ್ಲಿಯೂ ಇದೀಗ ಉಚಿತ ಸಿಲಿಂಡರ್‌ ವಿತರಣೆ ಈಗಾಗಲೇ ಶುರುವಾಗಿದ್ದು, ಕರ್ನಾಟಕ ರಾಜ್ಯದಲ್ಲಿಯೂ ಈ ಪ್ರಣಾಲಿಕೆ ಶೀಘ್ರವೇ ಜಾರಿಗೆ ಬರುವಂತೆ ಕಾಣುತ್ತಿದೆ.  

ಇತರ ರಾಜ್ಯಗಳಂತೆ ಚುಣಾವಣೆಯ ಮುನ್ನ ರಾಜ್ಯದ ಜನರಿಗೆ ಮಾತು ಕೊಟ್ಟಂತೆ ರಾಜ್ಯ ಸರ್ಕಾರ ತನ್ನ ಮಾತನ್ನು ಉಳಿಸಿಕೊಳ್ಳುತ್ತಾ ಇಲ್ಲವಾ ಎನ್ನುವುದನ್ನು ಇನ್ನಷ್ಟೆ ಕಾದು ನೋಡಬೇಕಿದೆ.   

ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link