ಎಂತಾ ಕಾಲ ಬಂತಪ್ಪಾ..! ಇನ್ಮುಂದೆ ಉಸಿರಾಡುವ ಗಾಳಿಯನ್ನು ಕೂಡ ದುಡ್ಡು ಕೊಟ್ಟು ಕೊಳ್ಳಬೇಕು!! ಬೆಲೆ ಕೇಳಿದ್ರಂತು ನೀವು ಶಾಕ್‌ ಆಗ್ತೀರ

Mon, 18 Nov 2024-7:23 am,

Air For Sale: ಮನಷ್ಯನಿಗೆ ಊಟ, ತಿಂಡಿ, ನೀರು ಅಲ್ಲದೆ ಮುಖ್ಯವಾಗಿ ಬೇಕಾಗಿರುವುದು ಉಸಿರಾಡುವ ಗಾಳಿ, ಕೆಲವು ವರ್ಷಗಳ ಹಿಂದೆ ನೀರನ್ನು ಜನರು ಬೇಕಾ ಬಿಟ್ಟಿ ಬಳಸುತ್ತಿದ್ದರು, ಆದರೆ ಈಗ ಎಂತಹ ಕಾಲ ಬಂದಿದೆ ಅಂದ್ರೆ ನೀರನ್ನು ಕಾಸು ಕೊಟು ಕರೀದಿಸಬೇಕು, ಇದೀಗ ಇದಕ್ಕೂ ಮೀರಿ ನಾವು ಜೀವಿಸಲು ಮುಖ್ಯವಾಗಿರುವ ಉಸಿರಾಡುವ ಗಾಳಿಯನ್ನು ಕೂಡ ಮಾರಾಟ ಮಾಡಲಾಗುತ್ತಿದೆ.   

ಹೌದು, ಜನ ದಿನ ಕಳೆದಂತೆ ಆಧುನಿಕ ಜೀವನ ಶೈಲಿಗೆ ಬದಲಾಗುತ್ತಿದ್ದಾರೆ, ಕುಡಿಯುವ ನೀರನ್ನು ಹೇಗಿ ಈ ನಡುವೆ ಕಜನರು ಸರ್ವೇ ಸಾಮಾನ್ಯವಾಗಿ ಕರೀದಿಸುತ್ತಾರೋ, ಅದೇ ರೀತಿ ಉಸಿರಾಡುವ ಗಾಳಿಯನ್ನು ಕೂಡ ದುಡ್ಡು ಕೊಟ್ಟು ಕರೀದಿಸುವ ಸಮಯ ಬಂದಿದೆ.  

ಇದೇನಿದು ಆಶ್ಚರ್ಯ ಅನಿಸುತ್ತಿದೆ ಅಲ್ವಾ? ಹೀಗೆನಿಸಿದರೂ ಇದೇ ಸತ್ಯ, ಕೋವಿಡ್‌ ಸಂದರ್ಭದಲ್ಲಿ ಆಕ್ಸಿಜನ್‌ಗೆ ಫುಲ್‌ ಡಿಮ್ಯಾಂಡ್‌ ಬಂದಿತ್ತು, ಆಕ್ಸಿಜನ್‌ ಕೊರತೆಯಿಂದಾಗಿ ಅದೆಷ್ಟೋ ಕೋವಿಡ್‌ ರೋಗಿಗಳು ಆಸ್ಪತ್ರೆಯ ಹಾಸಿಗೆ ಮೇಲೆ ತಮ್ಮ ಪ್ರಾಣ ಬಿಟಿದ್ದರು.   

ಆದರೆ, ಇದೀಗ ಪರಿಶುದ್ಧ ಗಾಳಿಯನ್ನು ಮಾರಾಟ ಮಾಡುವ ಯೋಜನೆಯನ್ನು ನಡೆಸಿರುವ ಖಾಸಗಿ ಕಂಪನಿಯೊಂದು, ಉಸಿರಾಡುವ ಗಾಳಿ ಮಾರಾಟಕ್ಕೆ ಮುಂದಾಗಿದೆ.  

ಮೊದಲಿಗೆ ನೀರು ಎಂಬುದು ಎಲ್ಲರಿಗೂ ಸಿಗುವಂತಹ ಸಾಮಾನ್ಯ ಸೌಕರ್ಯವಾಗಿತ್ತು, ಆದರೆ ಈಗ ಹೇಗಾಗಿದೆ ಎಂದರೆ ನೀರನ್ನು ಕೂಡ ದುಡ್ಡು ಕೊಟ್ಟು ಕರೀದಿಸಬೇಕಾಗಿದೆ, ಅದರಲ್ಲೂ ಪರಿಶುದ್ದ ನೀರು ಸಿಗದೆ ಜನರು ಬಿಸ್ಲರಿ ನೀರು ಹಾಗೂ ಮನೆಯಲ್ಲಿ ಫಿಲ್ಟರ್‌ಗಳನ್ನು ಅಳವಡಿಸಿಕೊಂಡು ನೀರನ್ನು ಬಳಸುತ್ತಿದ್ದಾರೆ.  

ನೀರಾಯ್ತು, ಇದೀಗ ಗಾಳಿಯ ಸಮಯ, ನಾವು ಉಸಿರಾಡುತ್ತಿರುವ ಗಾಳಿ ವಾಯು ಮಾಲಿನ್ಯ ಹಾಗೂ ಕಲುಷಿತ ವಿಷಕಾರಿ ಅಂಶಗಳನ್ನು ಒಳಗೊಂಡಿದೆ ಎಂಬುದು ನಮಗೆ ಗೊತ್ತಿದೆ, ಇಂತಹ ಗಾಳಿಯನ್ನು ನಾವು ಉಸಿರಾಡುವುದರಿಂದ ಕ್ಯಾನ್ಸರ್‌ ಹಾಗೂ ಸ್ವಾಶಕೋಶದ ಸಮಸ್ಯೆಯಂತಹ ರೋಗಗಳು ಮನುಷ್ಯನ ದೇಹವನ್ನು ಆವರಿಸಿಕೊಳ್ಳುತ್ತಿದೆ.  

ಇದೇ ಕಾರಣದಿಂದಾಗಿ ಖಾಸಗಿ ಕಂಪನಿಯೊಂದು ಇದೀಗ ಸ್ವಚ್ಚ ಉಸಿರಾಡುವ ಗಾಳಿಯನ್ನು ಮಾರಾಟ ಮಾಡಲು ಮುಂದಾಗಿದೆ.  

ಅರ್ರೆ ಗಾಳಿಯನ್ನು ಅದ್ಯಾರು ದುಡ್ಡು ಕೊಟ್ಟು ಕೊಂಡುಕೊಳ್ಳುತ್ತಾರೆ ಎಂಬ ಯೋಚನೆ ನಿಮಗೂ ಕೂಡ ಬರಬಹುದು, ಆದರೆ ಅದು ತಪ್ಪು ಕಲ್ಪನೆ, ಗಾಳಿಯನ್ನು ಕೂಡ ಜನರು ದುಡ್ಡು ಕೊಟ್ಟು ಕೊಂಡುಕೊಳ್ಳುವ ಕಾಲ ಬರುತ್ತದೆ, ಏಕೆಂದರೆ ಮೊದಲಿಗೆ ಒಂದು ಕಾಲದಲ್ಲಿ ನೀರನ್ನು ಮಾರಾಟ ಮಾಡಲು ಶುರು ಮಾಡಿದಾಗ, ನೀರನ್ನು ಯಾರು ಕೊಳ್ಳುತ್ತಾರೆ ಎಂಬ ಪ್ರಶ್ನೆ ಇತ್ತು, ಇದೀಗ ನೀರಿಗೆ ಇರುವ ಡಿಮ್ಯಾಂಡ್‌ ಬೇರಾವುದಕ್ಕೂ ಇಲ್ಲ.   

ಈ ಗಾಳಿಯನ್ನು ಮಾರಟಕ್ಕಾಗಿ ಮಾರುಕಟ್ಟೆಗೆ ಈಗಾಗಲೆ ಬಿಡಲಾಗಿದೆ, ಇದು ಬರೋಬ್ಬರಿ 400 ಎಮ್‌ಎಲ್‌ ಇದ್ದು ಇದಕ್ಕೆ 907 ರೂ ಬೆಲೆ ನಿಗದಿಯಾಗಿದೆ. ಇನ್ನೂ ಒಂದು ಲೀಟರ್‌ ಗಾಳಿಯ ಬೆಲೆ 2267 ರೂಪಾಯಿ ಆಗಿದೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link