4ನೇ ವಯಸ್ಸಿನಿಂದಲೇ ನಟನೆ.. ಸ್ಟಾರ್ ಹೀರೋಗಳಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಈ ನಟಿ ಯಾರು ಗೊತ್ತಾ..?
ಸಿನಿಮಾ ಎಂಟ್ರಿ ಕೊಡುವ ನಾಯಕಿಯರು ಕ್ಲಿಕ್ ಆಗೋಕೆ ಸ್ವಲ್ಪ ಸಮಯ ತೆಗೆದು ಕೊಳ್ಳುತ್ತಾರೆ. ಆದರೆ ನಾಲ್ಕನೇ ವಯಸ್ಸಿನಿಂದಲೇ ನಟನೆ ಆರಂಭಿಸಿ ಸ್ಟಾರ್ ಹೀರೋಗಳಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಈ ನಟಿ ನಿಮಗೂ ಗೊತ್ತು...ಗೆಸ್ ಮಾಡಿ, ಇನ್ನೂ ಗೊತ್ತಾಗಿಲ್ವಾ..? ಹಾಗಾದರೆ ಯಾರೆಂದು ತಿಳಿಯಲು ಮುಂದೆ ಓದಿ..
ಟಾಲಿವುಡ್, ಬಾಲಿವುಡ್, ಕಾಲಿವುಡ್ ಅಂತಾ ಸೌತ್ ಅಷ್ಟೆ ಅಲ್ಲ ದಕ್ಷಿಣ ಫಿಲಿಂ ಇಂಡಸ್ಟ್ರಿಯಲ್ಲಿಯೂ ತಮ್ಮ ಸೌಂದರ್ಯ ನಟನೆಯಿಂದ ಸಿನಿಮಾ ರಂಗವನ್ನು ಆಳಿದ ನಟಿ ಶ್ರೀದೇವಿ.
ಶ್ರೀದೇವಿ ಅವರು ಜನಸಿಸಿದ್ದು 13 ಆಗಸ್ಟ್ 1963 ರಂದು,ಆಗಿನ ಕಾಲದಲ್ಲಿ ಸಿನಿಮಾ ರಂಗದಲ್ಲಿ ನಾಯಕಿಯರ ನಡುವೆ ಹೆಚ್ಚು ಕಾಂಪಿಟೇಶನ್ ಇದ್ದರೂ ಕೂಡ, ಎಲ್ಲ ನಾಯಕೀಯರನ್ನೂ ಬದಿಗಿಟ್ಟು, ಸ್ಟಾರ್ ಹೀರೋಗಳಿಗಿಂತಲೂ ಹೆಚ್ಚು ಸಂಭಾವನೆ ಪಡೆದ ನಟಿ ಶ್ರೀದೇವಿ.
1979ರಲ್ಲಿ ಸಿನಿಮಾ ರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ಶ್ರೀದೇವಿ, ತಮಿಳು ಸಿನಿಮಾಗಳಲ್ಲಿ ಚ್ಯಾನ್ಸ್ ಗಿಟ್ಟಿಸಿಕೊಂಡರು. ನಂತರ ಹಿಟ್ ಆಗುತ್ತಿದ್ದಂತೆ ಬಾಲಿವುಡ್‌ನಲ್ಲಿ ಆಫರ್‌ಗಳು ಅರಸಿ ಬಂದಿದ್ದವು, ಸಿನಿಮಾಗೆ ನಾಯಕಿಯಾಗಿ ಎಂಟ್ರಿ ಕೊಟ್ಟ ಒಂದು ವರ್ಷದಲ್ಲಿಯೇ ಹಿಟ್ ಆದ ಶ್ರೀದೇವಿ 1980ರ ಹೊತ್ತಿಗೆ ಟಾಪ್ ಹೀರೋಹಿನ್ ಆಗಿ ಫಿಲಿಂ ಇಂಡಸ್ಟ್ರಿಯಲ್ಲಿ ಹೆಸರು ಗಲಿಸಿದರು.
ಶ್ರೀದೇವಿಗೆ ಆಗಿನ ಕಾಲಕ್ಕೆ ಎಷ್ಟು ಡಿಮ್ಯಾಂಡ್ ಇತ್ತು ಎಂದರೆ, ನಟಿ ಒಂದು ಚಿತ್ರಕ್ಕೆ ಒಂದು ಕೋಟಿ ರೂ. ಚಾರ್ಜ್ ಮಾಡುತ್ತಿದ್ದರು, ಯಾವ ಸ್ಟಾರ್ ಆಕ್ಟರ್ ಕೂಡ ಆಗಿನ ಕಾಲಕ್ಕೆ ಇಷ್ಟು ಸಂಭಾವನೆ ಪಡೆಯುತ್ತಿರಲಿಲ್ಲ.
ವೃತ್ತಿಜೀನದ ಉತ್ತುಂಗದಲ್ಲಿದ್ದಾಗ, ಶ್ರೀದೇವಿ ಬಾಲಿವುಡ್‌ನ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು. ಅದರ ನಂತರ ಅವರು ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ, ನಿಧಾನವಾಗಿ ಅವರು ಸಿನಿಮಾಗಳಿಂದ ದೂರ ಉಳಿಯಲು ಆರಂಭಿಸಿದರು.
ಮದುವೆಯಾದ ನಂತರ ಆಗೊಂದು, ಈಗೊಂದು ಸಿನಿಮಾ ಮಾಡಿದರೂ ಕೂಡ ಆ ಸಿನಿಮಾಗಳು ಹೆಚ್ಚು ಪ್ರಶಂಸೆ ಪಡೆಯಲಿಲ್ಲ, ಅದರ ಕಾರನ ಶ್ರೀದೇವಿ ಸಿನಿಮಾ ಮಾಡುವುದನ್ನು ಬಿಟ್ಟರು.
ಅನಿರೀಕ್ಷಿತವಾಗಿ ಸ್ಟಾರ್ ಹೋಟೆಲ್‌ನ ಬಾತ್‌ರೂಂನಲ್ಲಿ ನಟಿ ಜಾರಿ ಬಿದ್ದು ಸಾವನಪ್ಪಿದ್ದರು, ಇವರ ಸಾವಿನ ಕುರಿತು ಇಂದಿಗೂ ಕೂಡ ಹಲವಾರು ಅನುಮಾನಗಳಿದ್ದರೂ, ಪೋಸ್ಟ್ ಮಾರ್ಟಮ್ ರಿಪೋರ್ಟ್ ಇವರದ್ದು ಸಹಜ ಸಾವು ಎಂದು ವರದಿ ನೀಡಿತ್ತು.