ತನಗಿಂತ 6 ವರ್ಷ ಕಿರಿಯ ಕ್ರಿಕೆಟಿಗನನ್ನು ಪ್ರೀತಿಸಿ, ರಹಸ್ಯವಾಗಿ ಆತನ ನಂಬರ್ ಪಡೆದಯ ಕರೆ ಮಾಡಿದ್ದ ಸ್ಟಾರ್ ಕ್ರಿಕೆಟಿಗನ ಪತ್ನಿ ಯಾರು ಗೊತ್ತಾ..?
ಸಚಿನ್ ತೆಂಡೂಲ್ಕರ್ ತಮ್ಮ ಆನ್-ಫೀಲ್ಡ್ ದಾಖಲೆಗಳಿಗೆ ಹೆಸರುವಾಸಿಯಾಗಿದ್ದಾರೆ, ಆದರೆ ಮೈದಾನದ ಹೊರಗಿನ ಅವರ ಪ್ರೇಮ ಕಥೆ ಅಷ್ಟೆ ಆಸಕ್ತಿದಾಯಕವಾಗಿದೆ. ಅಂತೆಯೇ ಸಚಿನ್ ತೆಂಡೂಲ್ಕರ್ ಅವರ ಪ್ರೇಮಕಥೆಯು 17 ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು.
ಅಂಜಲಿ ಮೆಹ್ತಾ ಅವರನ್ನು ಮೊದಲ ಬಾರಿಗೆ ವಿಮಾನ ನಿಲ್ದಾಣದಲ್ಲಿ ನೋಡಿದ ತಕ್ಷಣ ಅಂಜಲಿ ಹೃದಯ ಕಳೆದುಕೊಂಡು ಸಚಿನ್ ಅವರ ಹಿಂದೆ ಓಡಲು ಪ್ರಾರಂಭಿಸಿದರು.
ಸಚಿನ್‌ಗಿಂತ 6 ವರ್ಷ ದೊಡ್ಡವರಾಗಿದ್ದ ಅಂಜಲಿ, ಪ್ರೀತಿಯ ಮೇಲೆ ನಂಬಿಕೆ ಕಳೆದುಕೊಳ್ಳದೆ ಸಚಿನ್ ಅವರನ್ನು ಪ್ರೀತಿಸಲು ಆರಂಭಿಸಿದ್ದರು.
ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ಮೆಹ್ತಾ ಮೊದಲ ಬಾರಿಗೆ 1990 ರಲ್ಲಿ ವಿಮಾನ ನಿಲ್ದಾಣದಲ್ಲಿ ಭೇಟಿಯಾದರು. ಆಗ ಸಚಿನ್ ತೆಂಡೂಲ್‌ಕರ್ ಅವರಿಗೆ 17 ವರ್ಷ.
ಸಚಿನ್ ಇಂಗ್ಲೆಂಡ್ ವಿರುದ್ಧ ಆಡಿದ ನಂತರ ಭಾರತಕ್ಕೆ ಮರಳುತ್ತಿದ್ದರು. ಆಗ ಸಚಿನ್ ತೆಂಡೂಲ್ಕರ್ ಯಾರು ಮತ್ತು ಅವರು ಏನು ಮಾಡುತ್ತಾರೆ ಎಂದು ಅಂಜಲಿಯವರಿಗೆ ಗೊತ್ತಿರಲಿಲ್ಲವಂತೆ, ಇದನ್ನೂ ಸ್ವತಹಃ ಅಂಜಲಿಯವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.
ಇದರ ನಂತರ ಸಚಿನ್ ತೆಂಡೂಲ್ಕರ್ ಅವರ ಫೋನ್ ಸಂಖ್ಯೆಯನ್ನು ಕಂಡುಹಿಡಿದು ಅವರಿಗೆ ಕರೆ ಮಾಡಿದೆ ಎಂದು ಅಂಜಲಿ ಹೇಳಿದ್ದಾರೆ. ಸಚಿನ್ ಅವರೇ ಫೋನ್ ಕೈಗೆತ್ತಿಕೊಂಡಿದ್ದು ಅದೃಷ್ಟ. ಆಗ ಅಂಜಲಿ ಸಚಿನ್ ತೆಂಡೂಲ್ಕರ್‌ಗೆ ನಾನು ಅಂಜಲಿ ಮತ್ತು ನಾನು ನಿಮ್ಮನ್ನು ವಿಮಾನ ನಿಲ್ದಾಣದಲ್ಲಿ ನೋಡಿದ್ದೇನೆ ಎಂದು ನಿಮ್ಮ ಬಳಿ ಮಾತನಾಡಲು ಓಡೋಡಿ ಬಂದೆ ಆದರೂ ಮಿಸ್ ಆಗೋದ್ರಿ ಎಂದು ಸಚಿನ್ ಅವರಿಗೆ ಅಂಜಲಿ ಹೇಳಿದ್ದರಂತೆ.
ಈ ಫೋನ್ ಕರೆ ನಂತರ ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ಮೆಹ್ತಾ ಅವರ ಪ್ರೇಮಕಥೆ ಪ್ರಾರಂಭವಾಯಿತು. 24 ಮೇ 1995 ರಂದು ಇಬ್ಬರೂ ವಿವಾಹವಾದರು.
ಭಾರತ ತಂಡ ಆಡುತ್ತಿದೆ ಶತಕ ಬಾರಿಸಿದ ಹುಡುಗನನ್ನು ನಿನಗೆ ಪರಿಚಯಿಸಲು ಬಯಸುತ್ತೇನೆ ಎಂದು ನನ್ನ ತಂದೆ ಹೇಳಿದ್ದರು, ಆದರೆ ಕ್ರಿಕೆಟ್‌ನಲ್ಲಿ ಆಸಕ್ತಿ ಇಲ್ಲದ ಕಾರಣ ನಾನೇ ನಿರಾಕರಿಸಿದ್ದೆ ಎಂದು ಅಂಜಲಿ ಸಂದರ್ಸನದಲ್ಲಿ ಹೇಳಿಕೊಂಡಿದ್ದಾರೆ.