Bollywood : ಅನುಷ್ಕಾದಿಂದ ಆಲಿಯಾವರೆಗೆ, ಉದ್ಯಮಿಗಳಾಗಿ ಬದಲಾದ ಬಾಲಿವುಡ್ ಸೆಲೆಬ್ರಿಟಿಗಳು
ಪ್ರಿಯಾಂಕಾ ಚೋಪ್ರಾ : ಬಾಲಿವುಡ್‌ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್ ನಗರದಲ್ಲಿ ರೆಸ್ಟೋರೆಂಟ್ ಹೊಂದಿದ್ದಾರೆ. ಭಾರತೀಯ ಖಾದ್ಯಗಳನ್ನು ಬಡಿಸುವ ಭಾರತೀಯ ರೆಸ್ಟೋರೆಂಟ್‌ಗೆ ಪ್ರಿಯಾಂಕಾ ಸೋನಾ ಎಂದು ಹೆಸರಿಟ್ಟಿದ್ದಾರೆ. ಕೆಲವೇ ವಾರಗಳ ಹಿಂದೆ ಅವರು ಭಾರತದಲ್ಲಿ ತಮ್ಮ ಹೇರ್‌ಕೇರ್ ಬ್ರ್ಯಾಂಡ್ ಅನಾಮಲಿಯನ್ನು ಬಿಡುಗಡೆ ಮಾಡಿದ್ದಾರೆ.
ಆಲಿಯಾ ಭಟ್ : ಬಾಲಿವುಡ್ ನಟಿ ಆಲಿಯಾ ಭಟ್ ಯಾವಾಗಲೂ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. 2013 ರಲ್ಲಿ, ಆಲಿಯಾ ಜನರನ್ನು ಸ್ಟೈಲ್ ಮಾಡಲು ಸ್ಟೈಲ್ ಕ್ರ್ಯಾಕರ್ ಎಂಬ ಸ್ಟಾರ್ಟಪ್ ಅನ್ನು ಪ್ರಾರಂಭಿಸಿದರು. ಇದಲ್ಲದೆ, 2020 ರಲ್ಲಿ, ಆಲಿಯಾ ತನ್ನ ಹೊಸ ಕಂಪನಿಯನ್ನು ಆಡ್-ಇ-ಮಮ್ಮಾ ಎಂಬ ಹೆಸರಿನಲ್ಲಿ ಪ್ರಾರಂಭಿಸಿದ್ದಾರೆ. ಇದು ಮಕ್ಕಳ ಫ್ಯಾಶನ್ ಬ್ರ್ಯಾಂಡ್ ಆಗಿದ್ದು, 4-12 ವರ್ಷ ವಯಸ್ಸಿನ ಮಕ್ಕಳಿಗೆ ಬೇಕಾದ ವಸ್ತುಗಳನ್ನು ತಯಾರಿಸಿ ಮಾರುಕಟ್ಟೆರೆಗೆ ಬಿಡುಗಡೆ ಮಾಡುತ್ತಾರೆ.
ಅನುಷ್ಕಾ ಶರ್ಮಾ : ಕೆಲವು ವರ್ಷಗಳ ಹಿಂದೆ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ನುಶ್ ಎಂಬ ಹೆಸರಿನ ಉಡುಪುಗಳನ್ನು ಪ್ರಾರಂಭಿಸಿದರು. ಇದಲ್ಲದೆ, ಅನುಷ್ಕಾ ತನ್ನ ಸಹೋದರನೊಂದಿಗೆ ಕ್ಲೀನ್ ಸ್ಲೇಟ್ ಫಿಲ್ಮ್ ಪ್ರೊಡಕ್ಷನ್ ಹೌಸ್ ಅನ್ನು ಸಹ ಪ್ರಾರಂಭಿಸಿದ್ದಾರೆ. ಈ ಪ್ರೊಡಕ್ಷನ್ ಹೌಸ್‌ನಿಂದ ಇಲ್ಲಿಯವರೆಗೆ ಎನ್‌ಎಚ್ 10, ಫಿಲೌರಿ ಮತ್ತು ಪರಿಯಂತಹ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಈ ನಿರ್ಮಾಣದ ಪಾತಾಳ ಲೋಕ್ ಎಂಬ ವೆಬ್ ಸೀರೀಸ್ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು.
ಕತ್ರಿನಾ ಕೈಫ್ : ಟೈಗರ್ ಜಿಂದಾ ಹೈ ಮತ್ತು ಭಾರತ್‌ನಂತಹ ಅನೇಕ ಬೆಸ್ಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಕತ್ರಿನಾ ಕೈಫ್ ಯಶಸ್ವಿ ಉದ್ಯಮಿಯು ಹೌದು, ಕತ್ರಿನಾ ತನ್ನ ಸೌಂದರ್ಯ ವರ್ಧಕ ಬ್ರಾಂಡ್ ಅನ್ನು 2019 ರಲ್ಲಿ 'ಕೇ ಬ್ಯೂಟಿ' ಎಂಬ ಹೆಸರಿನಲ್ಲಿ ಪ್ರಾರಂಭಿಸಿದರು. ಇದಕ್ಕಾಗಿ, ಕತ್ರಿನಾ ಮೇಕಪ್ ಬ್ರಾಂಡ್ ನೈಕಾ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಕತ್ರಿನಾ ಕಳೆದ ವರ್ಷ ಪ್ರಾರಂಭಿಸಿದ ಈ ವ್ಯವಹಾರಕ್ಕಾಗಿ ಕಳೆದ ಹಲವಾರು ವರ್ಷಗಳಿಂದ ತಯಾರಿ ನಡೆಸುತ್ತಿದ್ದರು. ಕತ್ರಿನಾ ಅವರ ಮೇಕಪ್ ಬ್ರ್ಯಾಂಡ್ ಅನ್ನು ಜನ ಕೂಡ ಇಷ್ಟಪಟ್ಟಿದ್ದಾರೆ.
ದೀಪಿಕಾ ಪಡೋಕೋಣೆ : ದೀಪಿಕಾ ಪಡುಕೋಣೆ ಹಲವು ವರ್ಷಗಳಿಂದ ಬಟ್ಟೆ ಬಿಸಿನೆಸ್ ಮಾಡುತ್ತಿದ್ದಾರೆ. ದೀಪಿಕಾ ಮಿಂತ್ರಾ ಸಹಯೋಗದೊಂದಿಗೆ 2015 ರಲ್ಲಿ ಆಲ್ ಅಬೌಟ್ ಯು ಎಂಬ ಬಟ್ಟೆ ಬ್ರಾಂಡ್ ಅನ್ನು ಪ್ರಾರಂಭಿಸಿದರು. ಇದಕ್ಕೂ ಮೊದಲು, ದೀಪಿಕಾ ವ್ಯಾನ್ ಹುಸೇನ್ ಸಹಯೋಗದೊಂದಿಗೆ 2013 ರಲ್ಲಿ ಮಹಿಳಾ ಫ್ಯಾಷನ್ ಬ್ರ್ಯಾಂಡ್ ಅನ್ನು ಪ್ರಾರಂಭಿಸಿದ್ದಾರೆ. ದೀಪಿಕಾ ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ತನ್ನ ಬಟ್ಟೆ ಬ್ರಾಂಡ್ ಆಲ್ ಅಬೌಟ್ ಯು ಅನ್ನು ಪ್ರಚಾರ ಮಾಡುವುದನ್ನು ಹಲವಾರು ಸಂದರ್ಭಗಳಲ್ಲಿ ಮಾಡಿರುವುದನ್ನ ಕಾಣಬಹುದು.