ಸಹೋದರನಿಂದ ಇನ್‌ಸ್ಪೈರ್‌ ಆಗಿದ್ದ ಈ ಚೆಲುವೆ ಇಂದು RCB ಸ್ಟಾರ್‌ ಕ್ರಿಕೆಟರ್‌... ಯಾರು ಗೊತ್ತಾ?

Thu, 18 Jul 2024-10:57 am,

ಭಾರತೀಯ ಮಹಿಳಾ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ ಗುರುವಾರ, ಜುಲೈ 18 ರಂದು ತಮ್ಮ 28 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 18 ಜುಲೈ 1996 ರಂದು ಮುಂಬೈನಲ್ಲಿ ಜನಿಸಿದರು.ಮಂಧಾನ ಅವರ ತಂದೆಯ ಹೆಸರು ಶ್ರೀನಿವಾಸ್ ಮಂಧಾನ ಮತ್ತು ತಾಯಿಯ ಹೆಸರು ಸ್ಮಿತಾ ಮಂಧಾನ. ಇದಲ್ಲದೆ, ಸ್ಮೃತಿ ಮಂಧಾನ  ಅವರಿಗೆ ಸಹೋದರ ಕೂಡ ಇದ್ದಾರೆ. ಸ್ಮೃತಿ ತನ್ನ ಸಹೋದರನನ್ನು ನೋಡಿದ ನಂತರವೇ ಕ್ರಿಕೆಟ್ ಆಡುವ ಆಸಕ್ತಿಯನ್ನು ಬೆಳೆಸಿಕೊಂಡಿದ್ದೇನೆ ಎಂದು ಅನೇಕ ಬಾರಿ ಹೇಳಿದ್ದಾರೆ.  

5 ಏಪ್ರಿಲ್ 2013 ರಂದು ಬಾಂಗ್ಲಾದೇಶದ ಮಹಿಳಾ ತಂಡದ ವಿರುದ್ಧ T20 ಸರಣಿಯಲ್ಲಿ ಮಂಧಾನ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲಿ ಅವರು 36 ಎಸೆತಗಳಲ್ಲಿ 39 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದ್ದರು.  

ಈ ಅವಧಿಯಲ್ಲಿ, ಅವರ ಬ್ಯಾಟ್‌ನಿಂದ ನಾಲ್ಕು ಅತ್ಯುತ್ತಮ ಬೌಂಡರಿಗಳನ್ನು ಭಾರಿಸಿದ್ದರು. 19 ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾದಾಗ ಸ್ಮೃತಿ ಮಂಧಾನ ಅವರಿಗೆ 11 ವರ್ಷ. ಅಕ್ಟೋಬರ್ 2013 ರಲ್ಲಿ ಗುಜರಾತ್ ವಿರುದ್ಧ 150 ಎಸೆತಗಳಲ್ಲಿ ಔಟಾಗದೆ 224 ರನ್ ಸಿಡಿಸಿದ್ದರು.  

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಾಧ್ಯವಾಗದ್ದನ್ನು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸ್ಮೃತಿ ಮಂಧಾನ ನೇತೃತ್ವದ ತಂಡ ಮಾಡಿದೆ. ಮಂಧಾನ ನಾಯಕತ್ವದಲ್ಲಿ, RCB ತಂಡವು ಮೊದಲ ಬಾರಿಗೆ 2024ರಲ್ಲಿ  ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ, ಆದರೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ, RCB 2016 ರಲ್ಲಿ IPL ನ ಫೈನಲ್‌ಗೆ ತಲುಪಿತು ಆದರೆ ಪ್ರಶಸ್ತಿಯನ್ನು ಪಡೆಯುವಲ್ಲಿ ವಿಫಲವಾಯಿತು. WPL ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ RCB ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿತು.  

ಸ್ಮೃತಿ ಮಂಧಾನ 2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೋಬರ್ಟ್‌ನಲ್ಲಿ 109 ಎಸೆತಗಳಲ್ಲಿ 102 ರನ್ ಗಳಿಸಿದಾಗ ತಮ್ಮ ಮೊದಲ ODI ಶತಕವನ್ನು ಗಳಿಸಿದರು. ಸುಮಾರು ಐದು ವರ್ಷಗಳ ನಂತರ, ಆಸ್ಟ್ರೇಲಿಯಾದಲ್ಲಿ ನಡೆದ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಮಂಧಾನ 216 ಎಸೆತಗಳಲ್ಲಿ 127 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 22 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು. ಭಾರತ ಪರ ಮಂಧಾನ ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಳು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಏಕದಿನ ಮತ್ತು ಟಿ20ಯಲ್ಲಿ 3000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link