ದೀಪಾವಳಿ ದಿನದಿಂದಲೇ ಈ ರಾಶಿಯವರ ಬಾಳಲ್ಲಿ ಸಂತಸದ ಹೊನಲು ! ಸಂಪತ್ತಿನ ಹೊಳೆ ಹರಿಸಲಿದ್ದಾರೆ ಶನಿ - ಶುಕ್ರರು

Wed, 18 Oct 2023-11:19 am,

ಮೇಷ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವೆಂಬರ್ ತಿಂಗಳು ಮೇಷ ರಾಶಿಯವರಿಗೆ ತುಂಬಾ ಒಳ್ಳೆಯದು. ಈ ತಿಂಗಳು ಮೇಷ ರಾಶಿಯವರ ಜೀವನದಲ್ಲಿ ಹಣದ ಹರಿವು ಅಧಿಕವಾಗಿರುತ್ತದೆ. ವ್ಯಾಪಾರದಲ್ಲಿ ಲಾಭವಾಗಲಿದೆ. ಈ ಸಮಯದಲ್ಲಿ ಅನೇಕ ದೊಡ್ಡ ಬದಲಾವಣೆಗಳು ಸಂಭವಿಸಬಹುದು. ಹಣಕಾಸಿನ ಸಮಸ್ಯೆ ಬಗೆಹರಿಯುವುದು. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಹೊಸ ಉದ್ಯೋಗ ದೊರೆಯಲಿದೆ.

 ವೃಷಭ ರಾಶಿ:  ನವೆಂಬರ್‌ನಲ್ಲಿ ದೀಪಾವಳಿಗೆ ಮುಂಚಿತವಾಗಿ ವೃಷಭ ರಾಶಿಯವರ ಜೀವನದಲ್ಲಿ ಸಂತೋಷದ ಅಲೆ ಬೀಸುವುದು. ಈ ರಾಶಿಯವರ ಅದೃಷ್ಟ ನವೆಂಬರ್ ತಿಂಗಳಿಂದ ಆರಂಭವಾಗುತ್ತದೆ. ಈ ಅವಧಿಯಲ್ಲಿ ಜೀವನದ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಆದಾಯವು ಹೆಚ್ಚಾಗುತ್ತದೆ.  

 ಕನ್ಯಾ ರಾಶಿ : ನವೆಂಬರ್ ಕನ್ಯಾ ರಾಶಿಯವರಿಗೆ ಶುಭ ಫಲ ನೀಡಲಿದೆ. ಈ ಅವಧಿಯಲ್ಲಿ ಕೆಲಸಕ್ಕೆ ಸಂಬಂಧಿಸಿದ ಉದ್ದೇಶಗಳಿಗಾಗಿ ವಿದೇಶಿ ಪ್ರವಾಸ ಕೈಗೊಳ್ಳಬಹುದು. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. 

 ಕುಂಭ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವೆಂಬರ್ ತಿಂಗಳು ಕುಂಭ ರಾಶಿಯವರಿಗೆ ಹಲವು ಶುಭವನ್ನು ತರುತ್ತದೆ. ಈ ಸಮಯದಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ಕುಂಭ ರಾಶಿಯವರಿಗೆ ಈ ಸಮಯವು ಅತ್ಯಂತ ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ. ಅನಿರೀಕ್ಷಿತ ಹಣವನ್ನು ಗಳಿಸುವಿರಿ.  ಕುಟುಂಬದಲ್ಲಿ ಸಂತೋಷ ಇರುತ್ತದೆ. 

 ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link