ಸೈಟಿಂಸ್ಟ್ ಆಗಬೇಕು ಎಂದು ಕನಸುಕಂಡಿದ್ದ ಕಾಶಿನಾಥ್ ಬಣ್ಣದ ಲೋಕದತ್ತ ವಾಲಿದ್ದು ಏಕೆ ಗೊತ್ತಾ..?
ಕಾಶಿನಾಥ್... ಈ ಹೆಸರು ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ನಿರ್ದೇಸಕರಾಗಿ, ನಿರ್ಮಾಪಕರಾಗಿ ಅಷ್ಟೆ ಅಲ್ಲದೆ ನಾಯಕ ನಟನಾಗಿ ಖ್ಯಾತಿ ಪಡೆದ ಕಾಶಿನಾಥ್ ಸಿನಿಮಾ ರಂಗಕ್ಕೆ ಬಂದ ಕಥೆಯೇ ರೋಚಕ. ಆ ಒಂದೇ ಒಂದು ಘಟನೆ ಕಾಶಿನಾಥ್ ಅವರನ್ನು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವಂತೆ ಮಾಡುತ್ತದೆ.
ಸಿನಿಮಾ ಅಂದರೆ ಒಂದು ರೂಲ್ಸ್ ರೆಗುಲೇಷನ್ಸ್ ಅನ್ನು ಜನ ಫಾಲೋ ಮಾಡ್ತಾ ಇದ್ದರು. ಆ ಕಾಲದಲ್ಲಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದವರು ಕಾಶಿನಾಥ್. ಸಿನಿಮಾ ಮಾಡಲು ರೂಲ್ಸ್ ಬೇಕು ಎನ್ನುವ ನಿಯಮ ಪಕ್ಕಕ್ಕಿಟ್ಟು ಸಿನಿಮಾ ಎನ್ನುವ ಪದಕ್ಕೆ ಹೊಸ ಅರ್ಥ ನೀಡಿದವರೇ ಕಾಶಿನಾಥ್.
ಕಾಶಿನಾಥ್ ಮೊದಲು ತಾವು ಸೈಟಿಂಸ್ಟ್ ಆಗಬೇಕೆಂಬ ಕನಸು ಹೊತ್ತು ಕಾಲೇಜಿಗೆ ಸೇರಿಕೊಳ್ಳುತ್ತಾರೆ. ಮೊದಲ ವರ್ಷದ ಕಾಲೇಜಿನಲ್ಲಿ ಒಳ್ಳೆ ಅಂಕ ಗಳಿಸಿ ಉತ್ತೀರ್ಣರಾಗುತ್ತಾರೆ. ಆದರೆ ವರ್ಷ ಕಳೆದಂತೆ ಕಾಶಿನಾಥ್ ಅವರಿಗೆ ಓದಿನ ಮೇಲೆ ಇನ್ಟ್ರೆಸ್ಟ್ ಕಡಿಮೆಯಾಗುತ್ತೆ.
ಓದು ಬಿಟ್ಟ ಕಾಶಿನಾಥ್‌ರನ್ನು ಅವರ ತಂದೆ ಬ್ಯೂಸಿನೆಸ್ ನೋಡಿಕೊಳ್ಳುವಂತೆ ಹೇಳುತ್ತಾರೆ. ಆದರೆ ಕಾಶಿನಾಥ್ ಅದಕ್ಕೆ ಒಪ್ಪುದೆ. ಸಿನಿಮಾದ ಕಡೆಗೆ ಎಂಟ್ರಿ ಕೊಡುತ್ತಾರೆ. ಇದು ಅವರ ತಂದೆ ತಾಯಿಗೆ ಇಷ್ಟವಿರುವುದಿಲ್ಲ. ಆದರೂ ತಂದೆ ತಾಯಿಯ ವಿರುದ್ಧ ಹೋಗಿ ಹುಡುಗರ ತಂಡ ಒಂದನ್ನು ಕಟ್ಟಿಕೊಂಡು ಕಾಶಿನಾಥ್ ಒಂದು ಕಿರು ಚಿತ್ರ ನಿರ್ಮಾಣ ಮಾಡ್ತಾರೆ ಅದುವೇ ʻಸ್ಲಿಪ್ʼ
ಇವರು ಮಾಡಿದ ಮೊದಲ ಕಿರು ಚಿತ್ರವೇ ಹಿಟ್ ಆಗುತ್ತೆ ಒಳ್ಳೆ ಒಳ್ಳೆ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ, ಸ್ಯಾಂಡಲ್‌ವುಡ್‌ನಲ್ಲಿ ಕಾಶಿನಾಥ್ ಹಿಟ್ ಸಿನಿಮಾಗಳನ್ನು ನೀಡುತ್ತಾರೆ ಅವರ ಕನ್ನಡದ ಹಿಟ್ ಸಿನಿಮಾಗಳ ಐಡಿಯಾ ಪರಭಾಷೆ ಅರಿಗೂ ಇಷ್ಟ ಆಗುತ್ತೆ, ಹಲವು ಚಿತ್ರಗಳು ಬಾಲಿವುಡ್‌ನಲ್ಲಿ ರೀಮೇಕ್ ಕೂಡ ಆಗುತ್ತವೆ. ಹೀಗೆ ಕಾಶಿನಾಥ್ ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಸಿನಿಮಾ ಎನ್ನುವ ಪದಕ್ಕಿ ಒಂದು ಹೊಸ ವ್ಯಾಕರಣವನ್ನು ನೀಡುತ್ತಾರೆ. ಹೀಗೆ ಸೈಟಿಂಸ್ಟ್ ಆಗಬೇಕೆಂದು ಕನಸು ಕಂಡಿದ್ದ ಕಾಶಿನಾಥ್ ಸಿನಿಮಾರಂಗದಲ್ಲಿ ತಮ್ಮ ಚಾಪು ಮೂಡಿಸಿ ಮುದ್ರೆ ಹಾಕುತ್ತಾರೆ.