ಶಕೀಲಾ ನೀಲಿ ಚಿತ್ರಗಳ ದಾರಿ ಹಿಡಿಯಲು ಕಾರಣ ಏನು ಗೊತ್ತಾ..? ನಟಿಯ ಜೀವನದುದ್ದಕ್ಕೂ ಬರೀ ಕಣ್ಣೀರ ಕಥೆ..!
ನಟಿ ಶಕೀಲಾ ಅವರ ಹೆಸರು ಕೇಳಿದ್ರೇನೆ ನಮಗೆ ಮೊದಲು ನೆನಪಾಗೋದು ಅವರು ನಟಿಸುತ್ತಿದ್ದ ಬೋಲ್ಡ್ ಪಾತ್ರಗಳು. ಹೆಣ್ಣೆಂದರೆ ಸೀರೆಯನ್ನುಟ್ಟು ಜಡೆಗೆ ಮಲ್ಲಿಗೆ ಮುಡಿದು ಜನರನ್ನು ರಂಜಿಸುತ್ತಿದ್ದ ಕಾಲದಲ್ಲಿ ನಟಿ ಶಕಿಲಾ ಬೋಲ್ಡ್ ಪಾತ್ರದಲ್ಲಿ ನಟಿಸುವ ಮೂಲಕ ಹಲವಾರು ಹುಡುಗರ ಮನ ಗೆದ್ದಿದ್ದರು. ಶಕಿಲಾ ಸಿನಿಮಾ ನೋಡಲೆಂದೇ ಥಿಯೇಟರ್ ಮುಂದೆ ಹುಡುಗರು ಕ್ಯೂ ನಿಲ್ಲುತ್ತಿದ್ದರು.
ಬಿಗ್ರೇಡ್ ಮೂವಿಗಳಲ್ಲಿಯೇ ಅಭಿನಯಿಸುತ್ತ ಭಾರೀ ಪ್ರೇಕ್ಷಕರ ಮನ ಗೆದ್ದ ನಟಿ ಆಗಿನ ಕಾಲದಲ್ಲಿ ನೀಲಿ ಚಿತ್ರಗಳ ರಾಣಿ ಎಂದೇ ಪ್ರಖ್ಯಾತಿ ಪಡೆದುಕೊಂಡವರು. ಜನರನ್ನು ರಂಜಿಸಲು ನಟಿ ಆ ಪಾತ್ರಗಳಲ್ಲಿ ಮಾಡಲು ಒಪ್ಪಿಲ್ಲ ಆದರೆ ಅವರು ಆ ದಾರಿ ಹಿಡಿಯಲು ಒಂದು ದೊಡ್ಡ ಕಾರಣವೇ ಇತ್ತು.
ಆಗಿನ ಕಾಲದಲ್ಲಿ ಸಿನಿಮಾದಲ್ಲಿ ಭಾರಿ ಡಿಮ್ಯಾಂಡ್ ಗಿಟ್ಟಿಸಿಕೊಂಡಿದ್ದ ಶಕಿಲಾ ಈಗ ಎಲ್ಲಿದ್ದಾರೆ..? ಏನು ಮಾಡುತ್ತಿದ್ದಾರೆ..? ಅಷ್ಟಕ್ಕೂ ಅವರು ನೀಲಿ ಚಿತ್ರಗಳ ದಾರಿ ಹಿಡಿಯಲು ಕಾರಣ ಏನು..? ತಿಳಿಯಲು ಮುಂದೆ ಓದಿ...
ಕನ್ನಡ ಅಷ್ಟೆ ಅಲ್ಲ ತೆಲುಗು, ತಮಿಳು ಮಲಯಾಳಂ ಅಂತಾ ನಟಿ ಶಕಿಲಾ ತಮ್ಮ ನಟನೆಯ ಪಯಣವನ್ನು ಶುರು ಮಾಡಿದ್ದರು. ಆಗಿನ ಕಾಲಕ್ಕೆ ನಟಿ ಪಡೆಯುತ್ತಿದ್ದ ಸಂಭಾವನೆ ಲಕ್ಷ ರೂಪಾಯಿ. ಹೀಗೆ ಸುಖವಾಗಿ ಜೀವನ ಕಟ್ಟಿಕೊಂಡಿದ್ದ ನಟಿಯ ಬಾಳಿನಲ್ಲಿ ಪೂರ್ತಿ ಇದ್ದದ್ದೇ ನೋವಿನ ಕಥೆ..
ನಟಿ ಶಕಿಲಾ ಬೇಕೆಂದೇ ಇಚ್ಚಾಪೂರಕವಾಗಿಯೇ ನೀಲಿ ಚಿತ್ರಗಳಲ್ಲಿ ನಟಿಸಬೇಕೆಂಬ ನಿರ್ಧಾರ ಮಾಡಿರಲಿಲ್ಲ. ತಮ್ಮ ಜೀವನದಲ್ಲಿನ ಅನಿವಾರ್ಯತೆಗಳು ಅವರನ್ನು ನೀಲಿ ಚಿತ್ರಗಳಲ್ಲಿ ನಟಿಸುವತ್ತ ದೂಡಿದ್ದವು. ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ತಂದೆಯನ್ನು ನಟಿ ಕಳೆದುಕೊಳುತ್ತಾರೆ. ಶಕೀರ ಅವರ ತಾಯಿಗೆ ಆರು ಮಕ್ಕಳ ಜವಾಬ್ದಾರಿ ತಲೆಯ ಮೇಲೆ ಬೀಳುತ್ತೆ. ತಮ್ಮ ತಾಯಿಗೆ ಸಹಾಯ ಮಾಡಬೇಕು ಎಂದು ಆ ಜವಾಬ್ದಾರಿಯನ್ನು ತನ್ನ ತಲೆಯ ಮೇಲೆ ಹೊತ್ತುಕೊಳ್ಳುತ್ತಾರೆ ಶಕೀಲಾ.
1994ರಲ್ಲಿ ನಟಿ ಶಕೀಲಾ ಅವರಿಗೆ ಸಿನಿಮಾದಲ್ಲಿ ನಟಿಸುವ ಚ್ಯಾನ್ಸ್ ದೊರೆಯುತ್ತದೆ. ಹೆಚ್ಚಿನ ಹಣವನ್ನು ಕೂಡ ದುಡಿಯಲು ಶುರುಮಾಡುತ್ತಾರೆ. ಬಿಗ್ರೇಡ್ ಮೂವಿಗಳಲ್ಲಿ ನಟಿಸುವುದರಿಂದ ಹೆಚ್ಚಿನ ಹಣ ಸಂಪಾದಿಸಬಹುದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂಬ ನಿರ್ಧಾರಕ್ಕೆ ಬರುತ್ತಾರೆ ನಟಿ ಶಕೀಲಾ.
ಸಾಲು ಸಾಲು ಸಿನಿಮಾಗಳ್ಲಲಿ ನಟಿ ಶಕಿಲಾ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ, ಒಂದು ಸಿನಿಮಾದಲ್ಲಿ ನಟಿ ಶಕಿಲಾ ನಟಿಸುತ್ತಿದ್ದಾರೆ ಅಂದ್ರೆ ಸಾಕು ಆ ಸಿನಿಮಾಗೆ ಜನ ಕಿಕ್ಕಿರುದು ಸೇರಲು ಆರೊಂಭಿಸುತ್ತಾರೆ, ನಟಿ ಶಕಿಲಾ ನಟಿಸಿದ ಸಿನಿಮಾಗಳೆಲ್ಲಾ ಭಾರಿ ಹಿಟ್ ಕಾಣಲು ಶುರುವಾಗುತ್ತೆ. ಸಾಗರದಷ್ಟು ಅಭಿಮಾನಿಗಳನ್ನು ಶಕಿಲಾ ಗಳಿಸಿಕೊಳ್ಳುತ್ತಾರೆ.
2012 ರಲ್ಲಿ ಶಕಿಲಾ ತಾವು ಇನ್ನು ಮುಂದೆ ಬಿಗ್ರೇಡ್ ಮೂವಿಗಳಲ್ಲಿ ನಟಿಸುವುದಿಲ್ಲ ಅಂತಾ ಅಧಿಕೃತವಾಗಿ ಘೋಷಣೆ ಮಾಡುತ್ತಾರೆ. ಹೀಗೆ ತನ್ನ ಕುಟುಂಬದ ಪರಿಸ್ಥತಿಗಳಿಂದ ನೀಲಿ ಚಿತ್ರಕ್ಕೆ ಕಾಲಿಟ್ಟ ಶಕಿಲಾರನ್ನು ಜನರು ನಿಂದಿಸುತ್ತಾರೆ, ಕುಟುಂಬದವರಿಂದ ಹಿಡಿದು, ಸ್ನೇಹಿತರ ತನಕ ಶಕಿಲಾ ಅವರನ್ನು ಅವಮಾನಿಸಲು ಆರಂಭಿಸುತ್ತಾರೆ.
ಎಲ್ಲರಿಗಾಗಿಯೂ ತಾನು ದುಡಿದ ಹಣವನ್ನು ಖರ್ಚು ಮಾಡುತ್ತಾರೆ. ಅವರ ಕನಸುಗಳನ್ನು ಬದಿಗಿಟ್ಟು, ತನ್ನ ಕುಟುಂಬದವರಿಗಾಗಿಯೇ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ ನಟಿ ಎಲ್ಲರಿಂದಲೂ ಮೋಸ ಹೋಗಿ ಕೊನೆಗೆ ಈಹ ತ್ರಿ ಲಿಂಗ ಹೆಣ್ಣು ಮಗಳನ್ನು ದತ್ತು ಪಡೆದು ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.