IPL Mega Auction 2022: ಈ ಬಾರಿ ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರರಿವರು

Mon, 14 Feb 2022-4:58 pm,

ಟೀಂ ಇಂಡಿಯಾ ವೇಗಿ ಪ್ರಸಿದ್ಧ್ ಕೃಷ್ಣ 10 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಪಾಲಾದರು. ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೃಷ್ಣ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು.

(ಫೋಟೋ: ANI)

IPL 2022 ಹರಾಜಿನಲ್ಲಿ ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗುಸನ್ ಗುಜರಾತ್ ಟೈಟಾನ್ಸ್‌ಗೆ ಮಾರಾಟವಾಗಿದ್ದಾರೆ. ಲಾಕಿ ಫರ್ಗುಸನ್ ಅವರನ್ನು ರೂ.10 ಕೋಟಿಗೆ ಖರೀದಿಸಲಾಯಿತು. (ಫೋಟೋ: BCCI/IPL)

ವೆಸ್ಟ್ ಇಂಡೀಸ್ ODI ನಾಯಕ ನಿಕೋಲಸ್ ಪೂರನ್ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಸೇರಿದ್ದಾರೆ. ನಿಕೋಲಸ್ ಪೂರನ್ ಅವರನ್ನು 10.75 ಕೋಟಿ ರೂ.ಗೆ ಖರೀದಿಸಲಾಗಿದೆ. (ಮೂಲ: Twitter)

ಶ್ರೀಲಂಕಾದ ಆಲ್ ರೌಂಡರ್ ವನಿಂದು ಹಸರಂಗ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮರಳಿದ್ದಾರೆ. ಹಸರಂಗ 10.75 ಕೋಟಿ ರೂ. (ಮೂಲ: Twitter)

ಆಲ್ ರೌಂಡರ್ ಮತ್ತು ಐಪಿಎಲ್ 2021 ರ ಪರ್ಪಲ್ ಕ್ಯಾಪ್ ವಿಜೇತ ಹರ್ಷಲ್ ಪಟೇಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 10.75 ಕೋಟಿ ರೂ.ಗೆ ಖರೀದಿಸಿದೆ. (ಫೋಟೋ: IANS)

ಟೀಂ ಇಂಡಿಯಾ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ದೆಹಲಿ ತಂಡ ಸೇರಿದ್ದಾರೆ. ಠಾಕೂರ್ ಅವರನ್ನು 10.75 ಕೋಟಿ ರೂ.ಗೆ ಖರೀದಿಸಲಾಯಿತು.  (ಫೋಟೋ: BCCI/IPL)

ಇಂಗ್ಲೆಂಡ್ ಆಲ್ ರೌಂಡರ್ ಲಿಯಾಮ್ ಲಿವಿಂಗ್ ಸ್ಟೋನ್ ಅವರನ್ನು ಪಂಜಾಬ್ ಕಿಂಗ್ಸ್ 11.5 ಕೋಟಿ ರೂ.ಗೆ ಖರೀದಿಸಿದೆ. ಲಿವಿಂಗ್‌ಸ್ಟೋನ್ ಹರಾಜಿನ 2 ನೇ ದಿನದಂದು ಅತ್ಯಂತ ದುಬಾರಿ ಖರೀದಿಯಾಗಿದೆ. (ಫೋಟೋ: IANS)

ಟೀಮ್ ಇಂಡಿಯಾ ಮತ್ತು ಮುಂಬೈ ಬ್ಯಾಟರ್ ಶ್ರೇಯಸ್ ಅಯ್ಯರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೇರಿದ್ದಾರೆ. ಅಯ್ಯರ್ ಅವರನ್ನು 12.25 ಕೋಟಿ ರೂ.ಗೆ ಖರೀದಿಸಲಾಗಿದೆ. (ಫೋಟೋ: BCCI/IPL)

ಟೀಂ ಇಂಡಿಯಾ ಆಲ್‌ರೌಂಡರ್ ದೀಪಕ್ ಚಾಹರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 14 ಕೋಟಿ ರೂ.ಗೆ ವಾಪಸ್ ಖರೀದಿಸಿದೆ. (ಮೂಲ: Twitter)

ಜಾರ್ಖಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಎರಡು ದಿನಗಳ ಐಪಿಎಲ್ 2022 ಮೆಗಾ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಮುಂಬೈ ಇಂಡಿಯನ್ಸ್ 15.25 ಕೋಟಿ ರೂ.ಗೆ ಕಿಶನ್ ಖರೀದಿಸಿದೆ. (ಫೋಟೋ: BCCI/IPL)

ZEENEWS TRENDING STORIES

By continuing to use the site, you agree to the use of cookies. You can find out more by Tapping this link