Red Carpet: ಜಾನ್ವಿ ಕಪೂರ್‌ನಿಂದ ಆಲಿಯಾ ಭಟ್‌ವರೆಗೆ, ಬಾಲಿವುಡ್ ತಾರೆಯರ ಮನಮೋಹನ ನೋಟ!
ಪ್ರಶಸ್ತಿ ಸಮಾರಂಭಕ್ಕಾಗಿ ಜಾಹ್ನವಿ ಕಪೂರ್ ನೇರಳೆ ಬಣ್ಣದ ಅತ್ಯಂತ ಸುಂದರವಾದ ಆಫ್-ಶೋಲ್ಡರ್ ಗೌನ್ ಧರಿಸಿದ್ದರು. ಆಳವಾದ ಕುತ್ತಿಗೆ ತೋರಿಸುತ್ತಾ, ನಟಿ ತನ್ನ ಫ್ಯಾಶನ್ ಸೆನ್ಸ್ ಪ್ರದರ್ಶಿಸಿದರು. ಜಾನ್ವಿ ಕಪೂರ್ ತನ್ನ ಕೂದಲನ್ನು ಸೈಡ್-ಪಾರ್ಟಿಂಗ್ ಮಾಡುವ ಮೂಲಕ ತುಂಬಾ ಸ್ಟೈಲಿಶ್ ಲುಕ್ ನೀಡಿದ್ದರು. ಕುತ್ತಿಗೆಗೆ ಡೈಮಂಡ್ ಚೋಕರ್ ಧರಿಸಿದ್ದರು.
ಆಲಿಯಾ ಭಟ್ ಸಂಪೂರ್ಣ ಕಪ್ಪು ಡ್ರೆಸ್‍ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಸೆಳೆದರು. ಆಲಿಯಾ ಡ್ರೆಸ್‌ನ ಮೇಲಿನ ಭಾಗವು ಸೀಕ್ವಿನ್ ಆಗಿದ್ದರೆ, ಗೌನ್‌ನ ಕೆಳಗಿನ ಭಾಗವು ಮಿನುಗುವ ಕಪ್ಪು ಬಟ್ಟೆಯಿಂದ ಮಾಡಲ್ಪಟ್ಟಿದೆ. ಆಲಿಯಾ ಮತ್ತೊಮ್ಮೆ ತನ್ನ ಮೇಕ್ಅಪ್ ನೋಟ ಪ್ರದರ್ಶಿಸುವ ಮೂಲಕ ಸಾಕಷ್ಟು ಗಮನ ಸೆಳೆದರು.
ಪ್ರಶಸ್ತಿ ಸಮಾರಂಭದಲ್ಲಿ ನೋರಾ ಫತೇಹಿ ವಿಭಿನ್ನ ಶೈಲಿನ ಪಾರದರ್ಶಕ ಬಟ್ಟೆಯನ್ನು ಧರಿಸಿದ್ದರು. ನೋರಾ ಸ್ಟೈಲ್ ನೋಡಿದ್ರೆ ಯಾರಿಗೆ ಬೇಕಾದ್ರೂ ಮನಸೋಲುತ್ತೆ!
ಹಿನಾ ಖಾನ್ ಸ್ಟ್ರೈಲಿಶ್ ನೆಕ್‌ಲೈನ್ ಮತ್ತು ಸಿಜ್ಲಿಂಗ್ ಹೈ ಸ್ಲಿಟ್ ಹೊಂದಿರುವ ಉಡುಪು ಧರಿಸಿದ್ದರು. ನಟಿ ತನ್ನ ಕೂದಲನ್ನು ಚೆನ್ನಾಗಿ ಸ್ಟೈಲ್ ಮಾಡಿಕೊಂಡಿದ್ದರು. ಹಿನಾ ಖಾನ್ ಅವರ ಮನಮೋಹಕ ನೋಟವು ಜನರ ಗಮನ ಸೆಳೆಯಿತು.
ಅಲಯಾ ಎಫ್ ಸ್ಟೈಲಿಶ್ ಶಾರ್ಟ್ ಟಾಪ್ ಜೊತೆಗೆ ಹೈ ಸ್ಲಿಟ್ ಸ್ಕರ್ಟ್ ಧರಿಸಿದ್ದರು. ಅಲಯಾ ಎಫ್ ತನ್ನ ಕೂದಲನ್ನು ಮಧ್ಯದಲ್ಲಿ ಮೇಕ್ಅಪ್‍ನೊಂದಿಗೆ ವಿಭಜಿಸುವ ಮೂಲಕ ತನ್ನ ವಿಭಿನ್ನ ನೋಟದಲ್ಲಿ ಗಮನ ಸೆಳೆದರು.