ನವರಾತ್ರಿಯಿಂದ ಈ ರಾಶಿಯವರ ಬದುಕು ಬಂಗಾರ.. ಹಣದ ಹೊಳೆ ಸಕಲೈಶ್ವರ್ಯ ಪ್ರಾಪ್ತಿ, ಧನ ಸಂಪತ್ತಿನ ಮಳೆ, ಇನ್ನೇನಿದ್ದರೂ ಗೆಲುವಿನದ್ದೇ ರಾಯಭಾರ !

Sun, 29 Sep 2024-6:45 am,

ಶಾರದೀಯ ನವರಾತ್ರಿ ಎಂದೂ ಸಹ ಈ ಹಬ್ಬವನ್ನು ಕರೆಯುತ್ತಾರೆ. ಈ ಹಬ್ಬವು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಯುದ್ಧ ಸಂಕೇತವಾಗಿದೆ. ತಾಯಿ ದುರ್ಗೆಯನ್ನು ಶಕ್ತಿ ಮತ್ತು ಬುದ್ಧಿವಂತಿಕೆಯ ದೇವತೆಯಾಗಿ ಪೂಜಿಸಲಾಗುತ್ತದೆ. 

ಈ ವರ್ಷ ಗುರುವಾರ 03 ಅಕ್ಟೋಬರ್ 2024 ರಂದು ನವರಾತ್ರಿ ಹಬ್ಬ ಪ್ರಾರಂಭವಾಗುತ್ತದೆ. ಶನಿವಾರ 12 ಅಕ್ಟೋಬರ್ 2024 ರಂದು ವಿಜಯ ದಶಮಿ ಹಬ್ಬವನ್ನು ಆಚರಿಸಲಾಗುತ್ತಿದೆ.

ಅಕ್ಟೋಬರ್ 3 ರಂದು ಒಂದೇ ದಿನ ಹಸ್ತಾ ನಕ್ಷತ್ರ ಮತ್ತು ಚಿತ್ರ ನಕ್ಷತ್ರಗಳು ಬರಲಿವೆ. ದುರ್ಗಾ ದೇವಿಯನ್ನು ಒಂಬತ್ತು ವಿಭಿನ್ನ ರೂಪಗಳಲ್ಲಿ ಪೂಜಿಸಲಾಗುತ್ತದೆ.

ಕನ್ಯಾ ರಾಶಿ: ಈ ರಾಶಿಯವರಿಗೆ ಶುಭಕರ ಸಮಯ ಆರಂಭವಾಗಲಿದೆ. ಜೀವನದಲ್ಲಿ ಸಂತೋಷ ನೆಲೆಸಲಿದೆ. ಆರ್ಥಿಕ ಸ್ಥಿತಿಯು ಸುಧಾರಿಸಲಿದೆ. ದಿಢೀರ್‌ ಧನಲಾಭ ಪಡೆಯುವಿರಿ. ಅದೃಷ್ಟವು ನಿಮ್ಮ ಪರವಾಗಿಯೇ ಇರುತ್ತದೆ.

ವೃಷಭ ರಾಶಿ: ಈ ರಾಶಿಯವರು ಒಳ್ಳೆಯ ಸುದ್ದಿ ಕೇಳುತ್ತಾರೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಗಳು ಪೂರ್ಣಗೊಳ್ಳುತ್ತವೆ. ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಆತ್ಮವಿಶ್ವಾಸವನ್ನು ಹೆಚ್ಚಾಗಲಿದೆ. ವೃತ್ತಿಯಲ್ಲಿ ಪ್ರಗತಿ ಕಾಣಬಹುದು. 

ಧನಸ್ಸು ರಾಶಿ: ಹೊಸ ಕಾರು, ಮನೆ ಅಥವಾ ಆಸ್ತಿ ಖರೀದಿ ಯೋಗವಿದೆ. ವೃತ್ತಿಜೀವನದಲ್ಲಿ ಪ್ರಗತಿ ಕಾಣುವಿರಿ. ಯಶಸ್ಸು ನಿಮ್ಮನ್ನೇ ಹುಡುಕಿಕೊಂಡು ಬರುತ್ತದೆ. ಶತ್ರುಗಳನ್ನು ಸೋಲಿಸಿ, ಗೆಲುವಿನ ಶಿಖರ ಏರುವಿರಿ. ಇದು ನಿಮ್ಮ ಜೀವನದ ಗೋಲ್ಡನ್‌ ಟೈಮ್.

ಮೀನ ರಾಶಿ: ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣಬಹುದು. ಉದ್ಯೋಗದಲ್ಲಿರುವವರಿಗೆ ಅನೇಕ ಹೊಸ ಅವಕಾಶಗಳು ಹುಡುಕಿ ಬರಲಿವೆ. ಹಳೆಯ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ಸಂಪತ್ತಿನಲ್ಲಿ ವೃದ್ಧಿಯಾಗಲಿದೆ.

ತುಲಾ ರಾಶಿ: ತುಂಬಾ ಅದ್ಭುತ ಸಮಯ ನಿಮ್ಮದಾಗಲಿದೆ. ನಿಮ್ಮ ಪ್ರಾಮಾಣಿಕತೆಗೆ ಬೆಲೆ ಸಿಗುವ ಸಂದರ್ಭ. ಜೀವನದಲ್ಲಿ ಸಂತೋಷದ ದಿನಗಳು ಬರಲಿವೆ. ಕೆಲಸದ ಸ್ಥಳದಲ್ಲಿ ವಿಶೇಷ ಯಶಸ್ಸು ಮತ್ತು ಪ್ರಗತಿ ನಿಮ್ಮ ಪಾಲಾಗಲಿದೆ. ಹೊಸ ಆದಾಯದ ಮೂಲ ಸಿಗಲಿದೆ.

ಸಿಂಹ ರಾಶಿ: ಈ ರಾಶಿಯ ಜನರು ವೃತ್ತಿಯಲ್ಲಿ ಯಶಸ್ಸು ಕಾಣುವರು. ಜೀವನದಲ್ಲಿ ಬರುವ ಸವಾಲುಗಳನ್ನು ಜಯಿಸುತ್ತೀರಿ. ಸುಖ ಸಂತೋಷ ಮನೆಯಲ್ಲಿ ನೆಲೆಸುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯುವಿರಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link