ಇನ್ನು ಮುಂದೆ ಸರ್ಕಾರಿ ನೌಕರರ ವೇತನ ಹೆಚ್ಚಾಗುವುದು ಈ ಆಧಾರದಲ್ಲಿ! ಹಾಗಾದರೆ ವೇತನ ಆಯೋಗವನ್ನು ಕೈ ಬಿಡಲಿದೆಯಾ ಸರ್ಕಾರ ?
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 2025-26ನೇ ಹಣಕಾಸು ವರ್ಷದ ಬಜೆಟ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಮಹತ್ವದ ಘೋಷಣೆಗಳು ಬರಲಿವೆ ಎನ್ನುವ ಭರವಸೆ ಅವರದ್ದು.
ನಿರ್ದಿಷ್ಟವಾಗಿ ಹೇಳುವುದಾದರೆ, ಹೊಸ ವೇತನ ಆಯೋಗ ರಚನೆ ಬಗ್ಗೆ ಸರ್ಕಾರೀ ನೌಕರರ ದೃಷ್ಟಿ ನೆಟ್ಟಿದೆ. ಹೀಗಾಗಿ ಫೆಬ್ರವರಿ 1, ರಂದು ಮಂಡನೆಯಾಗುವ ಬಜೆಟ್ ಸರ್ಕಾರಿ ನೌಕರರಿಗೆ ಬಹಮ ಮುಖ್ಯವಾಗಿದೆ.
ಇತ್ತೀಚೆಗೆ ಬಜೆಟ್ ಪೂರ್ವ ಸಮಾಲೋಚನೆಯಲ್ಲಿ 8ನೇ ವೇತನ ಆಯೋಗದ ಕುರಿತು ಪ್ರಮುಖವಾಗಿ ಚರ್ಚಿಸಲಾಗಿದೆ. ಪ್ರಸ್ತುತ 7ನೇ ವೇತನ ಆಯೋಗವನ್ನು ಜಾರಿಗೊಳಿಸಿ 10 ವರ್ಷಗಳು ಕಳೆದಿವೆ.ಇದರ ಅವಧಿ 2025 ರಲ್ಲಿ ಕೊನೆಗೊಳ್ಳುತ್ತದೆ. ಹೀಗಾಗಿ 8ನೇ ವೇತನ ಆಯೋಗ ರಚನೆ ಅನಿವಾರ್ಯ ಎನ್ನುವ ಬಗ್ಗೆ ಚರ್ಚೆ ನಡೆದಿದೆ.
ನೌಕರರ ವೇತನ ಮತ್ತು ಪಿಂಚಣಿದಾರರ ಪಿಂಚಣಿಯನ್ನು ಸುಧಾರಿಸಲು ಸಮಯಕ್ಕೆ ಸರಿಯಾಗಿ ವೇತನ ಆಯೋಗವನ್ನು ಸ್ಥಾಪಿಸುವ ಅಗತ್ಯವನ್ನು ಯೂನಿಯನ್ ಪ್ರತಿನಿಧಿಗಳು ಒತ್ತಿ ಹೇಳಿದ್ದಾರೆ.
ಆದರೆ ಹೊಸ ವೇತನ ಆಯೋಗದ ಬದಲು ಹೊಸ ವ್ಯವಸ್ಥೆಯನ್ನು ಜಾರಿ ತರುವ ಸಿದ್ದತೆಯಲ್ಲಿದೆ ಸರ್ಕಾರ. ಖಾಸಗಿ ವಲಯದಂತೆ ಪ್ರತಿ ವರ್ಷವೂ ವೇತನ ಪರಿಷ್ಕರಣೆ ಮಾಡುವ ಹೊಸ ಪದ್ಧತಿ ಜಾರಿಗೆ ಬರಲಿದೆ ಎನ್ನಲಾಗಿದೆ. ಪರ್ಫಾರ್ಮೆನ್ಸ್ ಬೇಸ್ಡ್ ಪೇ ಸಿಸ್ಟಮ್ ಎಂಬ ಹೊಸ ವ್ಯವಸ್ಥೆಯಲ್ಲಿ, ಉದ್ಯೋಗಿಗಳ ಕಾರ್ಯಕ್ಷಮತೆ ಮತ್ತು ಹಣದುಬ್ಬರವನ್ನು ಆಧರಿಸಿ ನೌಕರರ ವೇತನವನ್ನು ನಿರ್ಧರಿಸಬಹುದು.
ಒಂದು ವೇಳೆ ಈ ಹೊಸ ಪದ್ಧತಿ ಜಾರಿಗೆ ಬಂದರೆ iCreot ಸೂತ್ರವನ್ನು ಬಳಸುವ ಮೂಲಕ ವೇತನ ಹೆಚ್ಚಳ ಲೆಕ್ಕಾಚಾರ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆಯಂತೆ. ಈ ಹೊಸ ಸೂತ್ರದ ಮೂಲಕ ವೇತನ ಹೆಚ್ಚಳ ಮಾಡುವುದಾದರೆ ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿದಾರರ ಪಿಂಚಣಿಯಲ್ಲಿ ಭಾರಿ ಏರಿಕೆಯಾಗಲಿದೆ ಎನ್ನಲಾಗಿದೆ.