ನಿರಾಕರಣೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಈಕೆ ಇಂದು ಸ್ಟಾರ್ ನಟಿ..ಅಂದದಲ್ಲೂ, ಆಸ್ತಿಯಲ್ಲೂ ಕೋಟಿಯ ಒಡತಿ..!
ಇತ್ತೀಚೆಗೆ ಜಾಸ್ಮಿನ್ ಭಾಸಿನ್ ತಮ್ಮ ಕಣ್ಣಿಗೆ ಹಾನಿಯಾದ ಸುದ್ದಿಯಿಂದ ಭಾರಿ ಚರ್ಚೆಯಲ್ಲಿರುವುದು ಗೊತ್ತೇ ಇದೆ. ಕಂಟ್ಯಾಟ್ ಲೆನ್ಸ್ ಧರಿಸಿ ಕಾಣ್ಣಿಗೆ ಹಾನಿಯಾದ ಕಾರಣ ಜಾಸ್ಮಿನ್ ಈ ನಡುವೆ ಭಾರಿ ಚರಚೆಯಲ್ಲಿದ್ದಾರೆ. ಇಂತಹ ನಟ ಒಂದು ಕಾಲದಲ್ಲಿ ನಿರಾಕರಣೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದರಂತೆ.
ಜಾಸ್ಮಿನ್ ಭಾಸಿನ್ ತನ್ನ ವೃತ್ತಿಜೀವನದ ಆರಂಭದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದಳು. ಈ ವಿಷಯವನ್ನು ಸ್ವತಃ ಅವರೇ 'ಬಿಗ್ ಬಾಸ್ ಸೀಸನ್ 14' ರಲ್ಲಿ ಸ್ಪರ್ಧಿಯಾಗಿದ್ದಾಗ ಹೇಳಿಕೊಂಡಿದ್ದಾರೆ.
ತಮ್ಮ ವೃತ್ತಿಜೀವನದ ಆರಂಭದಲ್ಲಿ ಜಾಸ್ಮಿನ್ ಯಾವುದೇ ಆಡಿಷನ್ ಗೆ ಹೋದರೂ ಮತ್ತೆ ಮತ್ತೆ ರಿಜೆಕ್ಟ್ ಆಗ್ತಿದ್ದರಂತೆ. ಸೋಲನ್ನೆ ಜೀವನ ಎಂದು ಒಪ್ಪಿಕೊಂಡ ಕಾಲವೊಂದಿತ್ತು ಎಂದು ಜಾಸ್ಮಿನ್ ಈ ಮುಂಚೆ ಕೂಡ ಹೇಳಿಕೊಂಡಿದ್ದಾರೆ.
ಆಡಿಷನ್‌ಗಳಲ್ಲಿ ರಿಜೆಕ್ಟ್ ಆಗಿ ಬೇಸತ್ತಿದ್ದ ಜಾಸ್ಮಿನ್‌ಗೆ ಒಂದು ಕಾಲದಲ್ಲಿ ತಾನು ಯಾವುದಕ್ಕೂ ಅರ್ಹರಲ್ಲ, ಜೀವನದಲ್ಲಿ ತಾನು ಏನನ್ನೂ ಕೂಡ ಮಾಡಲು ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದರಂತೆ.
ಹೀಗೆ ಜೀವನದಲ್ಲಿ ಸೋಲುಗಳಿಂದಲೇ ಬೇಸತ್ತಿದ್ದ ಜಾಸ್ಮಿನ್, ಒಮ್ಮೆ ತಮ್ಮ ಜೀವವನ್ನು ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿದ್ದರಂತೆ. ಮಿತಿಗೂ ಹೆಚ್ಚು ಔಷಧಿಗಳನ್ನು ಸೇವಿಸುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಹೀಗೆ ಒಂದು ಕಾಲದಲ್ಲಿ ತಮ್ಮ ಪ್ರಾಣ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದ ನಟಿ ಇಂದು 41 ಕೋಟಿ ರೂ. ಆಸ್ತಿಯ ಒಡತಿ.