ಒಂದು ಕಾಲದಲ್ಲಿ ಸಮೋಸಾ ಮಾರುವವನ ಮಗಳು.. 50 ರೂಪಾಯಿಗೆ ಪರದಾಡಿದ್ದ ಈಕೆ ಇಂದು ಬಾಲಿವುಡ್‌ನ ಸ್ಟಾರ್.. ನೂರಾರು ಕೋಟಿ ಆಸ್ತಿಗೆ ಒಡತಿ !
ಮದುವೆ ಸಮಾರಂಭಗಳಲ್ಲಿ ಹಾಡುತ್ತಿದ್ದ ಆ ಹುಡುಗಿ ಇಂದು ಜನಪ್ರಿಯ ಗಾಯಕಿಯಾಗಿದ್ದಾರೆ. ಕೋಟಿಗಟ್ಟಲೆ ಆಸ್ತಿ ಸಂಪಾದಿಸಿದ್ದಾರೆ. ಆಕೆ ಬೇರೆ ಯಾರೂ ಅಲ್ಲ, ಬಾಲಿವುಡ್‌ನ ಖ್ಯಾತ ಗಾಯಕಿ ನೇಹಾ ಕಕ್ಕರ್.
ನೇಹಾ ಕಕ್ಕರ್ ಅವರ ಜೀವನ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. ಚಿಕ್ಕ ವಯಸ್ಸಿನಲ್ಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ನೇಹಾ ಕಕ್ಕರ್ ತಮ್ಮ 4ನೇ ವಯಸ್ಸಿನಲ್ಲಿಯೇ ಹಾಡಲು ಆರಂಭಿಸಿದ್ದರು. ಆ ಸಮಯದಲ್ಲಿ ಅವರ ಕುಟುಂಬ ಬಡತನದಲ್ಲಿತ್ತು. ಇಡೀ ಕುಟುಂಬ ಚಿಕ್ಕ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು.
ನೇಹಾ ಕಕ್ಕರ್ ಬಾಲ್ಯದಲ್ಲಿ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸಲು ಕೆಲಸ ಮಾಡಬೇಕಾಗಿತ್ತು. ಆದರೆ ದೊಡ್ಡ ಮಟ್ಟದ ಕನಸು ಕಂಡಿದ್ದರು. ಕಷ್ಟಪಟ್ಟು ಕೆಲಸ ಮಾಡುತ್ತಲೇ ಸಂಗೀತ ಕಲಿತರು. 2005 ರಲ್ಲಿ "ಇಂಡಿಯನ್ ಐಡಲ್" ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದರು.
ರಿಷಿಕೇಶದಲ್ಲಿ ಜನಿಸಿದ ನೇಹಾ ಕಕ್ಕರ್ 1990 ರ ದಶಕದ ಆರಂಭದಲ್ಲಿ ದೆಹಲಿಗೆ ಬಂದರು. ನಾಲ್ಕನೇ ವಯಸ್ಸಿನಲ್ಲಿ ಮದುವೆ ಕಾರ್ಯಕ್ರಮಗಳಲ್ಲಿ ಹಾಡಲು ಪ್ರಾರಂಭಿಸಿದರು. ಪ್ರತಿ ಇವೆಂಟ್‌ಗೆ 50 ರೂಪಾಯಿ ಪಡೆಯುತ್ತಿದ್ದರು.
ಯಾವುದೇ ವೃತ್ತಿಪರ ತರಬೇತಿಯನ್ನು ತೆಗೆದುಕೊಳ್ಳದೆ "ಇಂಡಿಯನ್ ಐಡಲ್" ಆಡಿಷನ್ ನಲ್ಲಿ ಆಯ್ಕೆಯಾದರು. ಶೋ ನಲ್ಲಿ ಸ್ಪರ್ಧಿಯಾದರು. ಆದರೆ ಬೇಗನೆ ಎಲಿಮಿನೇಟ್ ಆಗಿದ್ದರು. ಆದರೂ ಆಕೆ ಎದೆಗುಂದಲಿಲ್ಲ.
ಕುಟುಂಬವನ್ನು ನಿರ್ವಹಿಸಲು ನನ್ನ ತಂದೆ ಶಾಲೆಯ ಹೊರಗೆ ಸಮೋಸ ಮಾರುತ್ತಿದ್ದರು. ಸಾಕಷ್ಟು ಹಣವಿಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆವು. ನಾಬು ಎದುರಿಸಿದ ತೊಂದರೆಗಳು ಮತ್ತು ಆರ್ಥಿಕ ಸಮಸ್ಯೆಗಳು ಹೇಳಲಾಗದಷ್ಟಿವೆ ಎಂದು ನೇಹಾ ಕಕ್ಕರ್ ಹೇಳಿದರು.
ನೇಹಾ ಕಕ್ಕರ್ ಅವರ ಪ್ರತಿಭೆಗೆ ಜನಪ್ರಿಯ ಸಂಗೀತ ನಿರ್ದೇಶಕ ಪ್ರೀತಮ್ ಅವರ ಬೆಂಬಲ ದೊರೆಯಿತು. "ಕಾಕ್ಟೈಲ್" ಚಿತ್ರದ ಹಾಡು ಬಿಡುಗಡೆಯಾಯಿತು. ಚಾರ್ಟ್ಬಸ್ಟರ್ ಆಯಿತು. ಈ ಯಶಸ್ಸಿನ ನಂತರ ನೇಹಾ ಹಿಂತಿರುಗಿ ನೋಡಲಿಲ್ಲ.
ಅನೇಕ ಸೂಪರ್ ಹಿಟ್ ಹಾಡುಗಳಿಗೆ ನೇಹಾ ಕಕ್ಕರ್ ಧ್ವನಿ ಆದರು. ಇಂದು ನೇಹಾ ಭಾರತದ ಅತ್ಯಂತ ಜನಪ್ರಿಯ ಗಾಯಕರಲ್ಲಿ ಒಬ್ಬರು. ಇಂದು ಅದೇ "ಇಂಡಿಯನ್ ಐಡಲ್" ಶೋನಲ್ಲಿ ತೀರ್ಪುಗಾರರಾಗಿದ್ದಾರೆ.
ನೇಹಾ ಈಗ ಅತ್ಯಂತ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. 1.50 ಕೋಟಿ ಮೌಲ್ಯದ ಮನೆಯಲ್ಲಿ ವಾಸಿಸುತ್ತಿದ್ದಾರೆ. ವರದಿಗಳ ಪ್ರಕಾರ, ಆಕೆಯ ಆಸ್ತಿ 104 ಕೋಟಿ ರೂ. ಆಗಿದೆ.