ಇಂದಿನಿಂದ ಈ ರಾಶಿಯವರ ಜೀವನದಲ್ಲಿ ಹರಿದು ಬರುವುದು ಧನ! ಸಿಗುವುದು ಎಲ್ಲಾ ಕಷ್ಟಗಳಿಗೂ ಪರಿಹಾರ
ಮೇಷ ರಾಶಿ :ಉದ್ಯೋಗವನ್ನು ಬದಲಾಯಿಸುವ ಆಲೋಚನೆಯಲ್ಲಿರುವವರಿಗೆ ಇದು ಸುಸಂದರ್ಭ. ಬುಧ ಸಂಕ್ರಮಣದಿಂದಾಗಿ ಉತ್ತಮ ಉದ್ಯೋಗಾವಕಾಶ ಎದುರಾಗಲಿದೆ. ಆರೋಗ್ಯ ಮತ್ತು ವೃತ್ತಿ ಜೀವನದಲ್ಲಿ ಎದುರಾಗುತ್ತಿದ್ದ ತೊಂದರೆ ನಿವಾರನೆಯಾಗಬಹುದು. ತುಳಸಿ ಗಿಡಕ್ಕೆ ಪ್ರತಿದಿನ ನೀರು ಅರ್ಪಿಸಿದರೆ ಇನ್ನೂ ಶುಭ ಫಲ ಸಿಗುವುದು.
ತುಲಾ ರಾಶಿ : ಮಾಧ್ಯಮ ಮತ್ತು ಬರವಣಿಗೆಗೆ ಸಂಬಂಧಿಸಿದ ಕ್ಷೇತ್ರದಲ್ಲಿರುವವರಿಗೆ ಸುವರ್ಣ ಅವಧಿಯು ಪ್ರಾರಂಭವಾಗಲಿದೆ. ಬುಧಗ್ರಹದ ಹಿಮ್ಮುಖ ಚಲನೆಯಿಂದಾಗಿ, ಈ ರಾಶಿಯವರು ಇಲ್ಲಿವರೆಗೆ ತಮ್ಮ ಗುರಿಯನ್ನು ಸಾಧಿಸುವಲ್ಲಿ ತೊಂದರೆ ಎದುರಿಸುತ್ತಿದ್ದರು. ಮತ್ತೆ ಅವರು ಮಾಡುವ ಕೆಲಸ ಉತ್ತಮ ಫಲಿತಾಂಶ ನೀಡಲಿದೆ. ಮನೆಯಲ್ಲಿ ಒಡಹುಟ್ಟಿದವರ ಜೊತೆ ಇದ್ದ ವಿವಾದಗಳು ಬಗೆಹರಿಯುತ್ತವೆ. ಮನೆಯಲ್ಲಿ ತುಳಸಿ ಗಿಡ ನೆಟ್ಟು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಪೂಜೆ ಮಾಡಿದರೆ ಹೆಚ್ಚಿನ ಪ್ರಯೋಜನವಾಗುವುದು.
ಕುಂಭ ರಾಶಿ : ಈ ರಾಶಿಯವರು ಹೂಡಿಕೆ ಅಥವಾ ಬಡ್ಡಿಯ ಮೇಲೆ ನೀಡಿದ ಹಣದ ಮೂಲಕ ಹೆಚ್ಚಿನ ಗಳಿಕೆ ಮಾಡುವುದು ಸಾಧ್ಯವಾಗುತ್ತದೆ. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ದೊರೆಯುವುದು. ಬರವಣಿಗೆ, ಸಮೂಹ ಸಂವಹನ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ.
ಮಿಥುನ ರಾಶಿ :ಈ ರಾಶಿಯವರ ಜೀವನದಲ್ಲಿ ಒಳ್ಳೆಯ ಸಮಯ ಪ್ರಾರಂಭವಾಗಲಿವೆ. ಮದುವೆಗೆ ಸೂಕ್ತ ಜೀವನ ಸಂಗಾತಿಯನ್ನು ಹುಡುಕುತ್ತಿರುವವರ ಹುಡುಕಾಟ ಕೊನೆಯಾಗಲಿದೆ. ನೀವು ಮಾಡುವ ಕೆಲ್ಸಕ್ಕೆ ತಾಯಿಯ ಪ್ರೋತ್ಸಾಹ ಸಿಗುವುದು. ನೀವು ಯಾರನ್ನಾದರೂ ಇಷ್ಟಪಡುತ್ತಿದ್ದರೆ ಅವರನ್ನು ಪೋಷಕರಿಗೆ ಪರಿಚಯಿಸಬಹುದು. ಸಂಗಾತಿಗಳ ಮಧ್ಯೆ ಮೂಡಿರುವ ಬಿರುಕು ಸರಿಯಾಗಬಹುದು.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)