ಇಂದಿನಿಂದ ಈ ರಾಶಿಯವರಿಗೆ ರಾಜ ಯೋಗ ! ಇನ್ನು ಕೈಯಲ್ಲಿ ನಲಿದಾಡುವಳು ಲಕ್ಷ್ಮೀ
ವೃಷಭ ರಾಶಿ - ವೃಷಭ ರಾಶಿಯವರ ಅಧಿಪತಿ ಶುಕ್ರ. ಹೀಗಾಗಿ ಶುಕ್ರನ ಸಂಕ್ರಮಣವಾಗುತ್ತಿರುವುದು ಈ ರಾಶಿಯವರಿಗೆ ಮಂಗಳಕರವಾಗಿರಲಿದೆ. ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಇರುತ್ತದೆ. ಇಲ್ಲಿಯವರೆಗೆ ಕೈ ತಪ್ಪುತ್ತಿದ್ದ ಕೆಲಸಗಳೆಲ್ಲವೂ ಈಗ ಕೈ ಗೂಡಲಿದೆ. ಜಾತಕದಲ್ಲಿ ಶುಕ್ರನ ಸ್ಥಾನದಿಂದಾಗಿ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ ದೊರೆಯಲಿದೆ.
ಕರ್ಕಾಟಕ ರಾಶಿ - ಶುಕ್ರನು ತನ್ನ ರಾಶಿಯನ್ನು ಬದಲಾಯಿಸಿದ ನಂತರ ಕರ್ಕ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಹಾಗಾಗಿ ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಲಿದೆ. ನೀವು ಮಾಡಲು ಹೊರಟಿರುವ ಕೆಲಸಗಳೆಲ್ಲಾ ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳುವುದು. ಗೌರವ ಮತ್ತು ಸಂಪತ್ತು ಪಡೆಯುವ ಸಾಧ್ಯತೆಗಳಿವೆ.
ಕನ್ಯಾ ರಾಶಿ - ಶುಕ್ರನ ಸಂಕ್ರಮಣವು ಕನ್ಯಾ ರಾಶಿಯ ಜನರ ಜೀವನವನ್ನು ಪ್ರೀತಿಯಿಂದ ತುಂಬುತ್ತದೆ. ಈ ರಾಶಿಯವರು ಜನರು ಬಹಳ ಸಂತೋಷದಿಂದ ಸಮಯ ಕಳೆಯುತ್ತಾರೆ. ನಿಮ್ಮ ಆಪ್ತರೊಂದಿಗೆ ಉತ್ತಮ ಸಮಯವನ್ನು ಕಳೆಯುವುದು ಸಾಧ್ಯವಾಗುತ್ತದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ವೃಶ್ಚಿಕ ರಾಶಿ- ಶುಕ್ರ ಸಂಚಾರವು ವೃಶ್ಚಿಕ ರಾಶಿಯವರಿಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸಿ ನೆಮ್ಮದಿಯ ಜೀವನ ನಿಮ್ಮದಾಗುವುದು. ಆದಾಯ ಹೆಚ್ಚಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಒಲವು ಹೆಚ್ಚಾಗುವುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ.
ಮಕರ ರಾಶಿ- ಶುಕ್ರನ ರಾಶಿಯು ಮಕರ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಬರಬಹುದು. ಪ್ರೇಮ ಸಂಬಂಧಗಳು ಗಟ್ಟಿಯಾಗುತ್ತವೆ ಮತ್ತು ಪ್ರೇಮ ವಿವಾಹವಾಗಲು ಬಯಸುವವರ ಆಸೆಗಳು ಈಡೇರುತ್ತವೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)