ಇಂದಿನಿಂದ ಧನಿಕರಾಗುವರು ಮೂರು ರಾಶಿಯವರು ! ಫಲ ನೀಡುವುದು ತ್ರಿಗ್ರಾಹಿ ಯೋಗ

Thu, 16 Mar 2023-9:16 am,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಮಯದಲ್ಲಿ ಮೀನ ರಾಶಿಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತಿದೆ. ಮೀನ ರಾಶಿಯಲ್ಲಿ ಗುರು, ಸೂರ್ಯ ಮತ್ತು ಬುಧದ ಸಂಯೋಗವು ರೂಪುಗೊಳ್ಳುತ್ತಿದೆ. ಇದು 3 ರಾಶಿಯವರಿಗೆ ಆರ್ಥಿಕ ಲಾಭವನ್ನು ನೀಡಲಿದೆ. 

ವೃಶ್ಚಿಕ ರಾಶಿ : ತ್ರಿಗ್ರಾಹಿ ಯೋಗವು ವೃಶ್ಚಿಕ ರಾಶಿಯವರಿಗೆ  ದೊಡ್ಡ ಮಟ್ಟದ ಪ್ರಯೋಜನಗಳನ್ನು ನೀಡಲಿದೆ. ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಮಟ್ಟದ ಪ್ರಗತಿಯನ್ನು ಸಾಧಿಸಲಿದ್ದಾರೆ. ಹೊಸ ಉದ್ಯೋಗದ ಆಫರ್ ಬರಲಿದೆ. ಇರುವ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ. ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಲಿದ್ದೀರಿ. ನಿಮಗೆ ಅರಿವಿಲ್ಲದ ಮೂಲಗಳಿಂದಲೂ ಹಣ ಹರಿದು ಬರುತ್ತದೆ. 

ಧನು ರಾಶಿ : ಸೂರ್ಯ, ಗುರು ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ರೂಪುಗೊಂಡ ತ್ರಿಗ್ರಾಹಿ ಯೋಗವು ಧನು ರಾಶಿಯವರಿಗೆ ಹೆಚ್ಚಿನ ಲಾಭವನ್ನು  ನೀಡಲಿದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಹಣಕಾಸಿನ ಪ್ರಯೋಜನವಾಗಲಿದೆ. ಹೊಸ ಮನೆ, ವಾಹನ, ಬಟ್ಟೆ-ಆಭರಣ ಅಥವಾ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಯೋಗವಿದೆ. ನೀವು ಮಾಡುವ ಕೆಲಸಕ್ಕೆ ತಾಯಿ ಬೆನ್ನೆಲುಬಾಗಿ ನಿಲ್ಲಲಿದ್ದಾರೆ. 

ಮೀನ ರಾಶಿ : ಮೀನ ರಾಶಿಯಲ್ಲಿಯೇ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತಿದೆ. ಆದುದರಿನದ ಮೀನ ರಾಶಿಯವರ ಮೇಲೆ ಇದರ ಪರಿಣಾಮ ಕೂಡಾ ಹೆಚ್ಚಾಗಿರುತ್ತದೆ.  ನಿಮ್ಮ ವ್ಯಕ್ತಿತ್ವದಲ್ಲಿ ಅದ್ಭುತವಾದ ಸುಧಾರಣೆ ಕಂಡುಬರುತ್ತದೆ. ಅದು ಜನರನ್ನು ನಿಮ್ಮ ಕಡೆಗೆ ಆಕರ್ಷಿಸುತ್ತದೆ. ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸುವುದಾದರೆ ಇದು ಉತ್ತಮ ಸಮಯ. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರುವುದು.  ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link