ನಾಳೆಯಿಂದ ಈ ರಾಶಿಯವರ ಜೀವನದಲ್ಲಿ ಹರಿಯುವುದು ಹಣದ ಹೊಳೆ

Mon, 06 Feb 2023-9:25 am,

ಮೇಷ ರಾಶಿ: ಮಕರ ರಾಶಿಯಲ್ಲಿ ಬುಧಾದಿತ್ಯ ಯೋಗದ ರಚನೆಯು ಮೇಷ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಉದ್ಯೋಗ ಹುಡುಕುತ್ತಿರುವವರ ಹುಡುಕಾಟ ಕೊನೆಯಾಗಲಿದೆ. ವೃತ್ತಿಜೀವನದಲ್ಲಿ ದೊಡ್ಡ ಅವಕಾಶ ಸಿಗಲಿದೆ. ಉದ್ಯಮಿಗಳ ಪಾಲಿಗೂ ಈ ಸಮಯ ಅನುಕೂಲಕರವಾಗಿರಲಿದೆ.  ಹೊಸ ಮನೆ ಅಥವಾ ಕಾರು ಖರೀದಿಸಳು ಇದು ಸರಿಯಾದ ಸಮಯ. 

ಕರ್ಕಾಟಕ ರಾಶಿ : ಬುಧ ಸಂಚಾರವು ಕರ್ಕಾಟಕ ರಾಶಿಯವರಿಗೆ ಉತ್ತಮ ಯಶಸ್ಸನ್ನು ತರಲಿದೆ. ಹಣಕಾಸಿನ ಪ್ರಯೋಜನವಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ,  ಈ ಸಮಯ ಉತ್ತಮವಾಗಿರಲಿದೆ. 

ಸಿಂಹ ರಾಶಿ : ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ರೂಪುಗೊಂಡ ಬುಧಾದಿತ್ಯ ಯೋಗವು ಸಿಂಹ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡಲಿದೆ. ಕೆಲಸದಲ್ಲಿ ಯಶಸ್ಸು, ಗೌರವ ಹೆಚ್ಚಾಗಲಿದೆ.  ದಾಯಾದಿಯಿಂದ ಲಾಭ ಪಡೆಯುವ ಅವಕಾಶವಿರುತ್ತದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.   

ತುಲಾ ರಾಶಿ : ಬುಧ ಸಂಕ್ರಮಣದಿಂದಾಗಿ ತುಲಾ ರಾಶಿಯವರಿಗೆ ಭಾರೀ ಆರ್ಥಿಕ ಲಾಭಗಳು ಆಗುವ ಸಾಧ್ಯತೆ ಇದೆ. ಆಸ್ತಿಗೆ ಸಂಬಂಧಿಸಿದ ಏನೇ ಕಿರಿ ಕಿರಿ ಇದ್ದರೂ ನಿವಾರಣೆಯಾಗುವುದು. ಈ ಸಮಯ ನಿಮ್ಮ ಪಾಲಿಗೆ ಅತ್ಯುತ್ತಮವಾಗಿರಲಿದೆ. ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಅಪಾರ ಲಾಭ ಗಳಿಸುವ ಸಾಧ್ಯತೆಗಳಿವೆ.

ಮೀನ ರಾಶಿ : ಮೀನ ರಾಶಿಯವರಿಗೆ ಬುಧ ಸಂಕ್ರಮಣ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ವೇತನ ಹೆಚ್ಚಾಗಲಿದೆ.  ನಿಮ್ಮ ಮನಸ್ಸಿನ ದೊಡ್ಡ ಬಯಕೆಯೊಂದು ಈಡೇರುವುದು. 

(  ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link