ಒಲಂಪಿಕ್ಸ್‌ನಲ್ಲಿ ಭಾಗವಹಿಸಲು ಮಗನಿಗಾಗಿ ತನ್ನ ಚಿನ್ನಭರಣ ಮಾರಿದ ತಾಯಿ..ದೇಶದ ಕೀರ್ತಿ ಬೆಳಗಲು ವಿದೇಶಕ್ಕೆ ಹಾರಿದ ಧೀರ..!

Tue, 23 Jul 2024-11:38 am,

ಭಾರತೀಯ ಸೇನೆಯ ಹವಾಲ್ದಾರ್ ಧೀರಜ್ ಬೊಮ್ಮದೇವರ  ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದ ಧೀರಜ್‌ ಇದೇ ಮೊದಲ ಭಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿದ್ದು, ದೇಶಕ್ಕೆ ಚಿನ್ನದ ಪದಕ ಗೆದ್ದುಕೊಡುವ ತವಕದಲ್ಲಿದ್ದಾರೆ. ಧೀರಜ್ ಬೊಮ್ಮದೇವರ ಅವರಿಗೆ ಪ್ಯಾರಿಸ್ ಒಲಿಂಪಿಕ್ಸ್ ತಲುಪುವ ಪಯಣ ಅಷ್ಟೇನು ಸುಲಭವಾಗಿರಲಿಲ್ಲ. ಅವರು ಇದರಲ್ಲಿ ಪಾಲ್ಗೊಳ್ಳಲು ಏನೆಲ್ಲಾ ಕಷ್ಟ ಅನುಬವಿಸಿದ್ದಾರೆ ಎಂದು ತಿಳಿಯಲು ಮುಂದೆ ಓದಿ...

ಧೀರಜ್ ಕೇವಲ ನಾಲ್ಕನೇ ವಯಸ್ಸಿನಲ್ಲಿರುವಾಗ ಅವರ ಪೋಷಕರು ಅವರನ್ನು ಮಾಜಿ ಭಾರತೀಯ ಬಿಲ್ಲುಗಾರ ಚೆರುಕುರಿ ಲೆನಿನ್ ಅವರ ಅಕಾಡೆಮಿಗೆ ಸೇರಿಸುತ್ತಾರೆ.ಇಲ್ಲಿಂದ ಬಿಲ್ಲುಗಾರನಾಗುವ ಪಯಣವನ್ನು ಧೀರಜ್‌ ಆರಂಭಿಸುತ್ತಾರೆ. ಆದರೆ, ಮಧ್ಯದಲ್ಲಿಯೇ ಅವರ ಕೋಚ್ ಲೆನಿನ್ ಹಾಗು ಅವರ ಸಹೋದರಿ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ ಇದು ಧೀರಜ್‌ನ ಕುಟುಂಬವನ್ನು ಆಳವಾಗಿ ಬಾಧಿಸುತ್ತದೆ.  

ಈ ಘಟನೆಯ ನಂತರ, ಧೀರಜ್ ತಂದೆಯ ವ್ಯಾಪಾರ ಕುಸಿಯುತ್ತದೆ, ಮನೆಯಲ್ಲಿ ತೀವ್ರ ಆರ್ಥಿಕ ತೊಂದರೆ ಉಂಟಾಗುತ್ತದೆ. ಈ ಸವಾಲುಗಳ ಹೊರತಾಗಿಯೂ, ಧೀರಜ್ ಅವರ ತಾಯಿ ಅವರ ಬಿಲ್ಲುಗಾರಿಕೆ ಕನಸನ್ನು ನನಸಾಗಿಸಲು ದೊಡ್ಡ ತ್ಯಾಗ ಮಾಡಲು ಮುಂದಾಗುತ್ತಾರೆ. ಧೀರಜ್‌ಗೆ ಉತ್ತಮ ಬಿಲ್ಲು ಮತ್ತು ಬಾಣವನ್ನು ಖರೀದಿಸಲು ಧೀರಜ್‌ನ ತಾಯಿ 2017 ರಲ್ಲಿ ತನ್ನ ಎಲ್ಲಾ ಆಭರಣಗಳನ್ನು ಮಾರಾಟ ಮಾಡಿ ಧೀರಜ್‌ ಅವರಿಗೆ ಬಿಲ್ಲು ಬಾಣ ಕೊಡಿಸುತ್ತಾರೆ.   

ಇದಕ್ಕೂ ಮುನ್ನ ಧೀರಜ್ ಟೋಕಿಯೊ 2020ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಕಳೆದುಕೊಂಡಿದ್ದು, ಈಗ ಪ್ಯಾರಿಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ಅವರ ಗುರಿಯಾಗಿದೆ. ವೈಯಕ್ತಿಕ ಕೀರ್ತಿಗೆ ಮಾತ್ರವಲ್ಲದೆ ತಾಯಿಯ ತ್ಯಾಗವನ್ನು ಗೌರವಿಸಲು ಅವರು ಪದಕ ಗೆಲ್ಲಬೇಕು. "ನಾನು ಪ್ಯಾರಿಸ್‌ನಲ್ಲಿ ಚಿನ್ನದ ಪದಕ ಗೆದ್ದು ನನ್ನ ತಾಯಿಯ ಆಭರಣಗಳನ್ನು ಹಿಂದಿರುಗಿಸಬೇಕು" ಎಂದು ಧೀರಜ್ ಹೇಳಿದ್ದಾರೆ.  

ಧೀರಜ್ ಅವರ ತಂದೆ ಅವರ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಏಕೆಂದರೆ ಅವರು ಯಾವಾಗಲೂ ಧೀರಜ್‌ಗೆ ಬೆಂಬಲ ನೀಡುತ್ತಾರೆ ಮತ್ತು ಅವರ ಸಾಮರ್ಥ್ಯಗಳ ಬಗ್ಗೆ ಭರವಸೆ ಇಡುತ್ತಾ ಬಂದಿದ್ದಾರೆ. ಕುಟುಂಬದ ಈ ಬೆಂಬಲವು ಧೀರಜ್‌ಗೆ ಯಾವುದೇ ಅಡೆತಡೆಯಿಲ್ಲದೆ ತನ್ನ ಕೌಶಲ್ಯಗಳನ್ನು ಸಂಪೂರ್ಣವಾಗಿ ಪೂರೈಸಲು ಸಹಾಯ ಮಾಡುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link