Indian Cricketers: ಕೊಹ್ಲಿಯಿಂದ ಬುಮ್ರಾವರೆಗೆ ತಮಗಿಂತ ಹಿರಿಯರನ್ನು ವಿವಾಹವಾದ ಭಾರತೀಯ ಕ್ರಿಕೆಟಿಗರಿವರು
ಸುರೇಶ್ ರೈನಾ (Suresh Raina) 3 ಏಪ್ರಿಲ್ 2015 ರಂದು ಪ್ರಿಯಾಂಕಾ ಚೌಧರಿಯನ್ನು (Priyanka Chaudhary) ವಿವಾಹವಾದರು. ಪ್ರಿಯಾಂಕಾ 18 ಜೂನ್ 1986 ರಂದು ಜನಿಸಿದ್ದಾರೆ, ರೈನಾ 27 ನವೆಂಬರ್ 1986 ರಂದು ಜನಿಸಿದರು. ಇದರ ಪ್ರಕಾರ, ಇಬ್ಬರ ವಯಸ್ಸಿನಲ್ಲಿ 5 ತಿಂಗಳು ಮತ್ತು 9 ದಿನಗಳ ಅಂತರವಿದೆ.
ಟೀಮ್ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli) ಬಾಲಿವುಡ್ (Bollywood) ನಟಿ ಅನುಷ್ಕಾ ಶರ್ಮಾ (Anushka Sharma) ಅವರನ್ನು 2017 ರಲ್ಲಿ ವಿವಾಹವಾದರು. ವಿರಾಟ್ ಅನುಷ್ಕಾ ಗಿಂತ ಸುಮಾರು 6 ತಿಂಗಳು ಚಿಕ್ಕವರು.
ಇದನ್ನೂ ಓದಿ- Virat Kohli, Anushka Sharma ಅವರ ಐಷಾರಾಮಿ ಮನೆಯ INSIDE ಫೋಟೋಸ್
ಭಾರತದ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಅವರು 1995 ರಲ್ಲಿ ಅಂಜಲಿ ಮೆಹ್ತಾ (Anjali Mehta) ಅವರನ್ನು ವಿವಾಹವಾದರು, ಅವರು ಮಾಸ್ಟರ್ ಬ್ಲಾಸ್ಟರ್ ಗಿಂತ 6 ವರ್ಷ ಹಿರಿಯರು.
ಇದನ್ನೂ ಓದಿ- Sachin Tendulkar: ಮಾಸ್ಟರ್-ಬ್ಲಾಸ್ಟರ್ ಅವರ 100 ಕೋಟಿ ಮೌಲ್ಯದ ಐಷಾರಾಮಿ ಮನೆಯ ಸುಂದರ ಲುಕ್
ಟೀಮ್ ಇಂಡಿಯಾದ 'ಗಬ್ಬರ್' ಖ್ಯಾತಿಯ ಶಿಖರ್ ಧವನ್ (Shikhar Dhawan) ಮತ್ತು ಆಯೆಷಾ ಮುಖರ್ಜಿ (Ayesha Mukherjee) ಅವರು 2009 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ನಂತರ 2012 ರಲ್ಲಿ ವಿವಾಹವಾದರು. ಆಗ ಆಯೆಷಾ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದರು ಮತ್ತು ತಮ್ಮ ಮೊದಲ ವಿವಾಹದಿಂದ ವಿಚ್ಛೇದನ ಪಡೆದಿದ್ದರು. ಈ ಇಬ್ಬರ ನಡುವೆ ಸುಮಾರು 10 ವರ್ಷಗಳ ಅಂತರವಿದೆ. ಅಷ್ಟೇ ಅಲ್ಲ, ಧವನ್ ಆಯೆಷಾ ಅವರ ಹಿರಿಯ ಮಗಳಿಗಿಂತ ಕೇವಲ 15 ವರ್ಷ ದೊಡ್ಡವರು.
ಇದನ್ನೂ ಓದಿ- Anil Kumble ಇಂದ ರಿಕಿ ಪಾಂಟಿಂಗ್‌ರವರೆಗೆ ಐಪಿಎಲ್‌ನ ಈ 'ಗುರುಗಳ' ಸಂಬಳ ಎಷ್ಟೆಂದು ತಿಳಿದರೆ ಶಾಕ್ ಆಗ್ತೀರ
ಹಾರ್ದಿಕ್ ಪಾಂಡ್ಯ (Hardik Pandya) 2020 ರಲ್ಲಿ ಸೆರ್ಬಿಯಾದ ಪ್ರಜೆ ಮತ್ತು ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ (Natasa Stankovic) ಅವರೊಂದಿಗೆ ವಿವಾಹವಾದರು. ನತಾಶಾ ಹಾರ್ದಿಕ್ ಗಿಂತ 1 ವರ್ಷ 7 ತಿಂಗಳು ಹಿರಿಯರು.
ಜಸ್ಪ್ರೀತ್ ಬುಮ್ರಾ (Jasprit Bumrah) 2021 ರ ಮಾರ್ಚ್ 15 ರಂದು ಸ್ಪೋರ್ಟ್ಸ್ ಆಂಕರ್ ಸಂಜನಾ ಗಣೇಶನ್ (Sanjana Ganesan) ಅವರನ್ನು ವಿವಾಹವಾದರು. ಬುಮ್ರಾ ಸಂಜನಾಕ್ಕಿಂತ 2 ವರ್ಷ 7 ತಿಂಗಳು ಕಿರಿಯರು.