Fruit Leaves: ಹಲವು ಮಾರಣಾಂತಿಕ ಕಾಯಿಲೆಗಳಿಗೆ ರಾಮಬಾಣ ಈ ಗಿಡಗಳ ಎಲೆಗಳು

Sun, 25 Dec 2022-6:55 pm,

ಮಾವಿನ ಎಲೆಗಳನ್ನು ರಕ್ತದೊತ್ತಡದಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಎಲೆಗಳನ್ನು ಜಗಿಯುವುದರಿಂದ ಬೊಜ್ಜು ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಗಳು ದೂರವಾಗುತ್ತವೆ. ಮಾವಿನ ಎಲೆಗಳು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಕೂಡ  ಪ್ರಯೋಜನಕಾರಿಯಾಗಿವೆ.  

ಸೀಬೇಹಣ್ಣಿನ ಎಲೆಗಳಲ್ಲಿ ಹಲವಾರು ಔಷಧೀಯ ಗುಣಗಳಿದ್ದು, ಅವು ಕೂಡ ಮಾರಕ ರೋಗಗಳನ್ನು ದೂರವಿಡುವ ಕೆಲಸ ಮಾಡುತ್ತವೆ. ಸೀಬೆ ಹಣ್ಣಿನ ಎಲೆಗಳು ಕೊಲೆಸ್ಟ್ರಾಲ್, ಮಧುಮೇಹ, ರಕ್ತದೊತ್ತಡ ಮತ್ತು ಜೀರ್ಣಕ್ರಿಯೆಯಂತಹ ಸಮಸ್ಯೆಗಳನ್ನು ನಿವಾರಿಸಲು ಕೆಲಸ ಮಾಡುತ್ತವೆ. ತೂಕ ತೂಕ ಇಳಿಕೆಗೂ ಕೂಡ ಅವು ಪರಿಣಾಮಕಾರಿಯಾಗಿವೆ.  

ಮಧುಮೇಹ ರೋಗಿಗಳಿಗೆ ಜಾಮೂನ್ ಎಲೆಗಳು ವರದಾನವಿದ್ದಂತೆ. ಜಾಮೂನ್‌ನ ಹಸಿರು ಎಲೆಗಳನ್ನು ಸೇವಿಸುವುದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಎಲೆಗಳು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹ ಸಹಾಯ ಮಾಡುತ್ತವೆ.  

ಪಪ್ಪಾಯಿ ಗಿಡದ ಎಲೆ ಪೋಷಕಾಂಶಗಳ ಆಗರವಾಗಿದೆ. ಡೆಂಗ್ಯೂ ನಂತಹ ಗಂಭೀರ ಕಾಯಿಲೆಗಳಲ್ಲಿ ಪಪ್ಪಾಯಿ ಎಲೆಗಳ ರಸವು ತುಂಬಾ ಪ್ರಯೋಜನಕಾರಿಯಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಪಪ್ಪಾಯಿ ಎಲೆಗಳು ಸಕ್ಕರೆ ನಿಯಂತ್ರಣ ಮತ್ತು ಜೀರ್ಣಕ್ರಿಯೆಗೆ ಸಹ ಪ್ರಯೋಜನಕಾರಿಯಾಗಿವೆ.  

ಪೀಚ್ ಎಲೆಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿವೆ. ಈ ಎಲೆಗಳು ಕೊಲೆಸ್ಟ್ರಾಲ್ ಮತ್ತು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪೀಚ್ ಎಲೆಗಳು ಚರ್ಮದ ಆರೋಗ್ಯಕ್ಕೂ ಕೂಡ ಪ್ರಯೋಜನಕಾರಿಯಾಗಿವೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link