ಆಪರೇಶನ್ ಅಗತ್ಯವೇ ಇಲ್ಲ! ಈ ಹಣ್ಣುಗಳನ್ನು ಸೇವಿಸಿದರೆ ಕಿಡ್ನಿಯಿಂದ ಜಾರಿ ಬರುವುದು ಸ್ಟೋನ್ !ನೋವು ಕೂಡಾ ತಿಳಿಯುವುದಿಲ್ಲ
ಮೂತ್ರಪಿಂಡದಲ್ಲಿ ಶೇಖರಣೆಯಾಗುವ ಹೆಚ್ಚಿನ ಪ್ರಮಾಣದ ಖನಿಜಗಳು ಕಲ್ಲುಗಳನ್ನು ರೂಪಿಸುತ್ತವೆ. ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಹೊಂದಿರುವ ಆಹಾರವನ್ನು ಸೇವಿಸಿದರೆ ಕಿಡ್ನಿ ಸ್ಟೋನ್ ಸಮಸ್ಯೆ ಕಾಡುತ್ತದೆ.
ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಕಿಡ್ನಿ ಸ್ಟೋನ್ ಗಳನ್ನು ಹೋಗಲಾಡಿಸಬಹುದು.ಕೆಲವು ಹಣ್ಣುಗಳನ್ನು ಸೇವಿಸಿದರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಎಳ ನೀರು,ಕಲ್ಲಂಗಡಿ, ಖರ್ಬೂಜ ಮುಂತಾದ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇರುತ್ತದೆ. ಹಾಗಾಗಿ ನೀರು ಹೆಚ್ಚಿನ ಪ್ರಮಾಣದಲ್ಲಿ ಇರುವ ಈ ಹಣ್ಣುಗಳನ್ನು ಪ್ರತಿದಿನ ಸೇವಿಸಬೇಕು. ಏಕೆಂದರೆ ನೀರಿನಂಶವಿರುವ ಆಹಾರಗಳು ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.
ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ.ಕಿಡ್ನಿ ಸ್ಟೋನ್ ಗಳನ್ನು ಕರಗಿಸಲು ಇದು ಸಹಾಯ ಮಾಡುತ್ತದೆ.ಸಿಟ್ರಸ್ ಹಣ್ಣುಗಳು ಮತ್ತು ಜ್ಯೂಸ್ ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತವೆ. ಕಿತ್ತಳೆ,ಮೋಸಂಬಿ,ಮತ್ತು ದ್ರಾಕ್ಷಿಯನ್ನು ಸೇವಿಸಿದರೆ ಕಿಡ್ನಿ ಸ್ಟೋನ್ ಕರಗುವುದು.
ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ ಕ್ಯಾಲ್ಸಿಯಂ ಹೇರಳವಾಗಿರುವ ಪದಾರ್ಥಗಳನ್ನು ಸೇವಿಸಬೇಕು. ಇದಕ್ಕಾಗಿ ಕಪ್ಪು ದ್ರಾಕ್ಷಿ, ಅಂಜೂರದ ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.