ಈ ಹಣ್ಣು ಸೇವಿಸಿದರೆ ಸರಾಗವಾಗಿ ಕಿಡ್ನಿಯಿಂದ ಹೊರ ಬರುತ್ತದೆ ಸ್ಟೋನ್ ! ನೋವು ಕೂಡಾ ಕಡಿಮೆಯಾಗುವುದು !
ಕಿಡ್ನಿಯಲ್ಲಿ ರೂಪುಗೊಳ್ಳುವ ಕಲ್ಲು ಬೇರೆ ಬೇರೆ ಗಾತ್ರದಲ್ಲಿ ಇರುತ್ತದೆ. ಇದನ್ನು ಕೆಲವು ಆಹಾರದ ಮೂಲಕವೇ ಕರಗಿಸುವುದು ಸಾಧ್ಯವಾಗುತ್ತದೆ. ಅದರಲ್ಲಿಯೂ ಕೆಲವು ಹಣ್ಣುಗಳನ್ನು ನಿತ್ಯ ಸೇವಿಸಿದರೆ ಕಿಡ್ನಿ ಸ್ಟೋನ್ ಕಿಡ್ನಿಯಿಂದ ಸರಾಗವಾಗಿ ಕೆಳಗೆ ಜಾರಿ ಮೂತ್ರದ ಮೂಲಕ ಹೊರ ಹೋಗುತ್ತದೆ ಎನ್ನಲಾಗುತ್ತದೆ.
ಕಲ್ಲಂಗಡಿ ಮತ್ತು ಖರ್ಬುಜ ಹಣ್ಣುಗಳು ಬೇಸಿಗೆ ಸಮಯದಲಿ ಹೇರಳವಾಗಿ ಸಿಗುತ್ತದೆ. ಈ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ಇರುತ್ತದೆ. ಈ ಹಣ್ಣುಗಳನ್ನು ನಿತ್ಯ ಸೇವಿಸುತ್ತಾ ಬಂದರೆ ಕಿಡ್ನಿ ಸ್ಟೋನ್ ಪುಡಿಯಾಗುತ್ತದೆಯಂತೆ.
ಕಿತ್ತಳೆ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಇರುತ್ತದೆ. ಇದೊಂದು ಸಿಟ್ರೆಸ್ ಹಣ್ಣು. ಹಾಗಾಗಿ ಇದು ಹೆಚ್ಚಿನ ಪ್ರಮಾಣದಲ್ಲಿ ಸಿಟ್ರಿಕ್ ಆಸಿಡ್ ಹೊಂದಿರುತ್ತದೆ. ಇದೆ ಕಾರಣದಿಂದ ಇದು ಕಿಡ್ನಿ ಸ್ಟೋನ್ ಕರಗಲು ಸಹಾಯ ಮಾಡುತ್ತದೆ.
ಕಪ್ಪು ದ್ರಾಕ್ಷಿಯಲ್ಲಿ ಕೂಡಾ ನೀರಿನ ಅಂಶವೂ ಹೆಚ್ಚಾಗಿರುತ್ತದೆ. ಜೊತೆಗೆ ವಿಟಮಿನ್ ಸಿ ಕೂಡಾ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದರ ಸೇವನೆ ಕೂಡಾ ಕಲ್ಲು ಕರಗಲು ಸಹಾಯ ಮಾಡುತ್ತದೆ.
ಈ ಹಣ್ಣುಗಳನ್ನು ಸೇವಿಸುವುದರಿಂದ ಕಿಡ್ನಿ ಸ್ಟೋನ್ ಗಾತ್ರ ಚಿಕ್ಕದಾಗುತ್ತದೆ. ಹೀಗೆ ಕರಗಿದ ಕಲ್ಲು ಮೂತ್ರದ ಮೂಲಕ ಕೆಳಗೆ ಜಾರಿ ದೇಹದಿನದ ಹೊರ ಬರಳು ಸಹಾಯವಾಗುತ್ತದೆ. (ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)