Kiccha 46 : ಕಿಚ್ಚ 46 ಚಿತ್ರಕ್ಕೆ ಈ ಅಂದದ ಬಾಲೆಯೇ ನಾಯಕಿ.. ಈ ಸುಂದರಿ ಯಾರು ಗೊತ್ತೇ?

Thu, 01 Jun 2023-1:59 pm,

ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರ, ಕಿಚ್ಚ 46 ಅನ್ನು ತಮಿಳಿನ ಕಲೈಪುಲಿ ಎಸ್ ತನು ನಿರ್ಮಾಣ ಮಾಡುತ್ತಿರುವುದಾಗಿ ಇತ್ತೀಚೆಗೆ ಘೋಷಿಸಿದರು. 

ಸುದೀಪ್‌ ತಮಿಳಿನ ನಿರ್ಮಾಪಕರ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂಬುದನ್ನು ಬಿಟ್ಟರೆ  ಈ ಚಿತ್ರದ ಶೀರ್ಷಿಕೆಯಾಗಲಿ, ನಿರ್ದೇಶಕರಾಗಲಿ, ನಾಯಕಿಯಾಗಲಿ, ತಾರಾಗಣದ ಬಗ್ಗೆ ಆಗಲಿ ಯಾವುದೇ ಮಾಹಿತಿ ಬಹಿರಂಗವಾಗಿರಲಿಲ್ಲ. 

ಆದರೆ ಕಿಚ್ಚ ಮುಂದಿನ ಚಿತ್ರ ಯಾವುದೆಂದು ಅರಿತ ಸುದೀಪ್ ಅಭಿಮಾನಿಗಳಲ್ಲಿ ಆ ಚಿತ್ರದ ನಾಯಕಿ ಹಾಗೂ ನಿರ್ದೇಶಕರು ಯಾರು ಎಂಬ ಪ್ರಶ್ನೆಗಳು ಹುಟ್ಟುಕೊಂಡಿದ್ದವು.

ಇತ್ತೀಚಿನ ಸುದ್ದಿ ಏನೆಂದರೆ ಗದರ್ 2 ನಟಿ ಸಿಮ್ರತ್ ಕೌರ್ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಜೊತೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. 

ಕಿಚ್ಚ 46 ಸಿನಿಮಾದಲ್ಲಿ ಸುದೀಪ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link