ವೈಕುಂಠ ಏಕಾದಶಿಗೂ ಮೊದಲೇ ಪ್ರಬಲ ರಾಜಯೋಗ: ಈ ರಾಶಿಯವರಿಗೆ ರಾತ್ರೋರಾತ್ರಿ ಲಕ್ಷಾಧಿಪತಿ ಯೋಗ!
ನಾಳೆ (ಜನವರಿ 10) ವೈಕುಂಠ ಏಕಾದಶಿ ಆಚರಣೆ ಇರಲಿದೆ. ಇಂದು (ಜನವರಿ 09) ಚಂದ್ರನು ವೃಷಭ ರಾಶಿಯಲ್ಲಿ ಗುರುವಿನೊಟ್ಟಿಗೆ ಸಂಯೋಗ ಹೊಂದಲಿದ್ದಾನೆ.
ಇಂದು ವೃಷಭ ರಾಶಿಯಲ್ಲಿ ಗುರು ಚಂದ್ರರ ಯುತಿಯಿಂದ ಪ್ರಬಲ ಗಜಕೇಸರಿ ಯೋಗ ನಿರ್ಮಾಣವಾಗುತ್ತಿದೆ. ಇದರಿಂದ, ಪುಣ್ಯ ದಿನ ವೈಕುಂಠ ಏಕಾದಶಿಗೂ ಮೊದಲೇ ಕೆಲವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ.
ವೃಷಭ ರಾಶಿ: ಗಜಕೇಸರಿ ರಾಜಯೋಗವು ಈ ರಾಶಿಯವರಿಗೆ ಭಾರೀ ಅದೃಷ್ಟದಿಂದ ವ್ಯವಹಾರದಲ್ಲಿ ಯಶಸ್ಸು, ಅಪಾರ ಸಂಪತ್ತನ್ನು ಕರುಣಿಸಲಿದೆ. ಹಣಕಾಸಿನ ಬಿಕ್ಕಟ್ಟಿನಿಂದ ಪರಿಹಾರ ಪಡೆಯುವಿರಿ.
ಮಿಥುನ ರಾಶಿ: ಗುರು ಚಂದ್ರರ ಸಂಯೋಗವು ಈ ರಾಶಿಯವರಿಗೆ ವೃತ್ತಿ ವ್ಯವಹಾರದಲ್ಲಿ ಬಂಪರ್ ಲಾಭವನ್ನು ನೀಡಲಿದೆ. ಹೊಸ ವ್ಯವಹಾರವನ್ನು ಆರಂಭಿಸಲು ಯೋಚಿಸುತ್ತಿರುವವರಿಗೆ ಸಕಾಲ. ಆರ್ಥಿಕ ಸ್ಥಿತಿಯಲ್ಲಿ ಉತ್ತಮವಾಗಿದ್ದು ಹಿಂದೆಂದೂ ಕಂಡಿರದಷ್ಟು ಹಣವನ್ನು ಗಳಿಸುವಿರಿ.
ಧನು ರಾಶಿ: ಗಜಕೇಸರಿ ಯೋಗವು ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ವ್ಯಾಪಾರದಲ್ಲಿ ಬಂಪರ್ ಆದಾಯವನ್ನು ನೀಡಲಿದೆ. ಪೂರ್ವಜರ ಆಸ್ತಿಯಿಂದ ಪ್ರಯೋಜನವನ್ನು ಪಡೆಯುವಿರಿ. ಹಣಕಾಸಿನ ಹರಿವು ಹೆಚ್ಚಾಗಿ ನಿಮ್ಮ ಸಮಸ್ಯೆಗಳು ಬಗೆಹರಿಯಲಿವೆ.
ಕುಂಭ ರಾಶಿ: ವೈಕುಂಠ ಏಕಾದಶಿಗೂ ಮೊದಲೇ ನಿರ್ಮಾಣವಾಗಿರುವ ಗಜಕೇಸರಿ ರಾಜಯೋಗವು ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸಲಿದೆ. ಹಿಡಿದ ಕೆಲಸಗಳಲ್ಲಿ ಭರ್ಜರಿ ಜಯ ಸಾಧಿಸುವಿರಿ. ಆದಾಯದ ಮೂಲಗಳು ಹೆಚ್ಚಾಗಿ, ಆರ್ಥಿಕ ಸಂಕಷ್ಟದಿಂದ ಪಾರಾಗುವಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.