ಗಜಕೇಸರಿ ರಾಜಯೋಗ: ಮೂರು ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ, ದಿಢೀರ್ ಧನಲಾಭ, ಮನೆ ಖರೀದಿ ಯೋಗ
ಇನ್ನೆರಡು ದಿನಗಳ ಬಳಿಕ ಜನವರಿ 09ರಂದು ವೃಷಭ ರಾಶಿಯಲ್ಲಿ ಚಂದ್ರನು ಗುರುವಿನೊಂದಿಗೆ ಸಂಧಿಸಿ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಗಜಕೇಸರಿ ರಾಜಯೋಗ ನಿರ್ಮಾಣವಾಗಲಿದೆ.
ಗಜಕೇಸರಿ ಯೋಗದ ಪರಿಣಾಮವಾಗಿ ಮೂರು ರಾಶಿಯವರ ಅದೃಷ್ಟ ಖುಲಾಯಿಸಲಿದ್ದು, ಅವರ ಜೀವನದ ಭಾಗ್ಯದ ಬಾಗಿಲುಗಳು ತೆರೆಯಲಿವೆ ಎನ್ನಲಾಗುತ್ತಿದೆ.
ವೃಷಭ ರಾಶಿ: ಸ್ವ ರಾಶಿಯಲ್ಲೇ ಗಜಕೇಸರಿ ರಾಜಯೋಗ ನಿರ್ಮಾಣವಾಗಲಿದ್ದು, ಈ ಸಮಯದಲ್ಲಿ ವೃಷಭ ರಾಶಿಯವರು ಪ್ರತಿ ಕ್ಷೇತ್ರದಲ್ಲೂ ಭಾರೀ ಯಶಸ್ಸನ್ನು ಕಾನುವಾರು. ಅದೃಷ್ಟದ ಬೆಂಬಲದಿಂದ ದಿಢೀರ್ ಧನಲಾಭವು ನಿಮ್ಮನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲಿದೆ.
ಧನು ರಾಶಿ: ಗಜಕೇಸರಿ ರಾಜಯೋಗವು ಈ ರಾಶಿಯವರ ಅದೃಷ್ಟವನ್ನು ಬೆಳಗಲಿದೆ. ಈ ಸಮಯದಲ್ಲಿ ಪೂರ್ವಜರ ಆಸ್ತಿಯಿಂದ ಭಾರೀ ಲಾಭವಾಗಲಿದೆ. ವೃತ್ತಿ-ವ್ಯವಹಾರದಲ್ಲೂ ಪ್ರಗತಿಯನ್ನು ಕಾಣುವಿರಿ.
ಕುಂಭ ರಾಶಿ: ಹೊಸ ವರ್ಷದಲ್ಲಿ ಮೊದಲ ಗಜಕೇಸರಿ ರಾಜಯೋಗವು ಈ ರಾಶಿಯವರ ಬದುಕಿನಲ್ಲಿ ಹೊಸ ಚೈತನ್ಯವನ್ನು ತರಲಿದೆ. ವೃತ್ತಿ ಮತ್ತು ವೈಯಕ್ತಿಕ ಬದುಕು ಎರಡರಲ್ಲೂ ಅದೃಷ್ಟದ ಬೆಂಬಲ ದೊರೆಯಲಿದೆ. ಹಣಕಾಸಿನ ಹರಿವು ಹೆಚ್ಚಾಗಿ ವಾಹನ, ಮನೆ ಖರೀದಿ ಯೋಗವೂ ಇದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.