12 ವರ್ಷದ ಬಳಿಕ ಈ 5 ರಾಶಿಗಳಿಗೆ ಗಜಕೇಸರಿ ಯೋಗ.. ಲಕ್ಷ್ಮಿ ಅನುಗ್ರಹದಿಂದ ಸಂಪತ್ತು ವೃದ್ಧಿ.. ವೃತ್ತಿಯಲ್ಲಿ ಅಪಾರ ಲಾಭ, ಶ್ರೀಮಂತಿಕೆ ಬರುವ ಕಾಲ ದೂರವಿಲ್ಲ!
gaja kesari yoga effect: ಗುರು ಗ್ರಹವು ಮೇ 14 ರಂದು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಮೇ 28 ರಂದು ಚಂದ್ರ ಮತ್ತು ಗುರು ಗ್ರಹದ ಸಂಯೋಗ ನಡೆಯಲಿದೆ. ಇದು ಗಜಕೇಸರಿ ಯೋಗವನ್ನು ರೂಪಿಸುತ್ತದೆ. ಗಜಕೇಸರಿ ಯೋಗವನ್ನು ಅತ್ಯಂತ ಮಂಗಳಕರ ಯೋಗವೆಂದು ಹೇಳಲಾಗುತ್ತದೆ.
ಕನ್ಯಾ ರಾಶಿ : ವ್ಯಾಪಾರದಲ್ಲಿ ಲಾಭ ಪಡೆಯುವಿರಿ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ವೃತ್ತಿಯಲ್ಲಿ ಬಡ್ತಿ ಜೊತೆಗೆ ಸಂಬಳ ಹೆಚ್ಚಾಗುವ ಸಾಧ್ಯತೆಯಿದೆ.
ತುಲಾ ರಾಶಿ : ವೃತ್ತಿಯಲ್ಲಿ ಉನ್ನತಿ ಕಾಣುವಿರಿ. ಪ್ರತಿ ಕೆಲಸದಲ್ಲಿ ಯಶಸ್ಸನ್ನು ಸಾಧಿಸಬಹುದು. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ. ನೀವು ಮಾಡುವ ಕೆಲಸವನ್ನು ಪ್ರಶಂಸಿಸಬಹುದು.
ಸಿಂಹ ರಾಶಿ : ಅಪಾರ ಆರ್ಥಿಕ ಲಾಭವಾಗಲಿದೆ. ಪೂರ್ವಿಕರ ಆಸ್ತಿ ನಿಮ್ಮದಾಗಬಹುದು. ವ್ಯಾಪಾರ ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಧನಲಾಭ ವಾಗಲಿದೆ.
ಮಿಥುನ ರಾಶಿ : ವ್ಯಾಪಾರದಲ್ಲಿ ಲಾಭ ಪಡೆಯುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಉನ್ನತಿ ಸಾಧಿಸಬಹುದು. ಆರೋಗ್ಯ ಉತ್ತಮವಾಗಿರಲಿದೆ.
ಕುಂಭ ರಾಶಿ : ಅಂದುಕೊಂಡ ಕೆಲಸ ಈಡೇರಲಿದೆ. ವೃತ್ತಿಯಲ್ಲಿ ಪ್ರಗತಿ ಕಾಣುವಿರಿ. ಆರ್ಥಿಕವಾಗಿ ಸದೃಢರಾಗಲಿದ್ದೀರಿ. ವಾಹನ ಖರೀದಿ ಯೋಗವಿದೆ. ಆರ್ಥಿಕ ಲಾಭವಾಗಲಿದೆ.
(ಗಮನಿಸಿ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಇದನ್ನು Zee ಕನ್ನಡ ನ್ಯೂಸ್ ಪರಿಶೀಲಿಸಿಲ್ಲ.)