ಈ ರಾಶಿಯಲ್ಲಿ ಗಜಕೇಸರಿ ರಾಜಯೋಗದ ವೈಭವ: ಪ್ರತಿ ಕೆಲಸದಲ್ಲೂ ಗೆಲುವಿನದ್ದೇ ರಾಜ್ಯಭಾರ! ಅಷ್ಟದಿಕ್ಕಿನಿಂದಲೂ ಅರಸಿ ಬರುವುದು ಅಷ್ಟೈಶ್ವರ್ಯ

Sat, 27 Jul 2024-9:10 pm,

ಗಜಕೇಸರಿ ರಾಜಯೋಗ ಆಗಸ್ಟ್ ಮೊದಲ ವಾರದಿಂದ ರೂಪುಗೊಳ್ಳಲಿದೆ. ಈ ವಾರ ಗುರು ಮತ್ತು ಚಂದ್ರನ ಸಂಯೋಗವು ವೃಷಭ ರಾಶಿಯಲ್ಲಿ ಇರುವುದರಿಂದ ಗಜಕೇಸರಿ ಯೋಗವು ಪರಿಣಾಮಕಾರಿಯಾಗಿ ಪ್ರಭಾವ ಬೀರಲಿದೆ.   

ಜ್ಯೋತಿಷ್ಯದ ಪ್ರಕಾರ, ಗಜಕೇಸರಿ ರಾಜಯೋಗವು ಸಂಪತ್ತು ಮತ್ತು ಗೌರವವನ್ನು ತರುತ್ತದೆ. ಈ ಯೋಗದ ಪ್ರಭಾವದಿಂದ, ವೃಷಭ, ಮಿಥುನ, ಕರ್ಕ, ಮಕರ ರಾಶಿಯವರಿಗೆ ಆಗಸ್ಟ್ ಮೊದಲ ವಾರ ಸಂಪತ್ತಿನ ಸುಧೆಯೇ ಹರಿದುಬರಲಿದೆ. ಗುರು ಮತ್ತು ಚಂದ್ರನ ಮಂಗಳಕರ ಅಂಶದೊಂದಿಗೆ, ಪ್ರಗತಿಯ ಬಾಗಿಲು ತೆರೆಯಲಿದೆ.  

ಈ ರಾಶಿಯವರಿಗೆ ಆಗಸ್ಟ್ ಮೊದಲ ವಾರ ಸಂಪತ್ತು ಸಿಗಲಿದೆ. ವ್ಯಾಪಾರದಲ್ಲಿ ಯಶಸ್ಸು ಮತ್ತು ಪ್ರಗತಿಯನ್ನು ಕಾಣುತ್ತೀರಿ. ಇಷ್ಟೇ ಅಲ್ಲ ನಿಮ್ಮ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಗಳು ನಿಮ್ಮ ಸಾಮರ್ಥ್ಯ ಅಥವಾ ಪ್ರತಿಭೆಯನ್ನು ಮೆಚ್ಚಲಿದ್ದಾರೆ.  

ಆಗಸ್ಟ್ ಮೊದಲ ವಾರದಲ್ಲಿ ಗಜಕೇಸರಿ ಯೋಗದ ಪ್ರಭಾವದಿಂದ ಮಿಥುನ ರಾಶಿಯವರಿಗೆ ಯಶಸ್ಸು ಸಿಗಲಿದೆ. ಸಾಹಿತ್ಯ ಮತ್ತು ಸಂಗೀತದಲ್ಲಿ ಆಸಕ್ತಿ ಇರುವವರಿಗೆ ಲಾಭವಾಗಲಿದೆ. ಆಸ್ತಿ, ಮನೆ ಮತ್ತು ಕುಟುಂಬದ ವಿಷಯಗಳಲ್ಲಿ ಸಂತಸ ಇರಲಿದೆ. ದಿಢೀರ್‌ ಧನಲಾಭವಾಗಲಿದೆ.   

ಗಜಕೇಸರಿ ರಾಜಯೋಗದ ಲೆಕ್ಕಾಚಾರದ ಪ್ರಕಾರ ಆಗಸ್ಟ್ ಮೊದಲ ವಾರವು ನಿಮಗೆ ಪ್ರಯೋಜನಕಾರಿಯಾಗಿರಲಿದೆ. ನಿಮ್ಮ ಹಣಕಾಸಿನ ಸ್ಥಿತಿಯು ಸ್ವಲ್ಪ ಬಲವಾಗಲಿದೆ. ಆಸ್ತಿ ಅಥವಾ ಬೆಲೆಬಾಳುವ ವಸ್ತು ಖರೀದಿಸುತ್ತೀರಿ. ಮದುವೆ ಯೋಗವೂ ನಿಮಗಿದೆ.   

ಈ ವಾರವು ಮಕರ ರಾಶಿಯ ಜನರ ಜೀವನದಲ್ಲಿ ಪ್ರಗತಿಯ ಹೊಸ ಮಾರ್ಗಗಳನ್ನು ತೆರೆಯುತ್ತದೆ. ನೀವು ಮಾಡುತ್ತಿರುವ ಪ್ರತಿ ಕೆಲಸದಲ್ಲೂ ಜಯ ಸಾಧಿಸುತ್ತೀರಿ. ಸಂಗಾತಿಯೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ.   

ಸೂಚನೆ: ಪ್ರಿಯ ಓದುಗರೇ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link