ವರ್ಷದ ಕೊನೆಯ ಚಂದ್ರಗ್ರಹಣದಂದೇ ಗಜ ಕೇಸರಿ ಯೋಗ ! ಸಂಪತ್ತಿನಿಂದ ತುಂಬಿ ತುಳುಕುವುದು ಈ ರಾಶಿಯವರ ಜೀವನ
ವರ್ಷದ ಕೊನೆಯ ಚಂದ್ರಗ್ರಹಣ ಭಾರತದಲ್ಲಿ ಅಕ್ಟೋಬರ್ 28 ರಂದು ರಾತ್ರಿ 11:32 ಕ್ಕೆ ಪ್ರಾರಂಭವಾಗಿ, ಮುಂಜಾನೆ 03:36 ಕ್ಕೆ ಕೊನೆಗೊಳ್ಳುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, 30 ವರ್ಷಗಳ ನಂತರ ಸಂಭವಿಸುವ ಇಂಥಹ ಚಂದ್ರಗ್ರಹಣದ ವೇಳೆ ಗಜಕೇಸರಿ ಯೋಗವೂ ನಿರ್ಮಾಣವಾಗುತ್ತಿದೆ. ಇದು ನಾಲ್ಕುಅ ರಾಶಿಯವರನ್ನು ಶ್ರೀಮಂತವಾಗಿಸುತ್ತದೆ.
ವೃಷಭ ರಾಶಿ :ವೃಷಭ ರಾಶಿಯವರಿಗೆ, ಈ ಸಂಯೋಜನೆಯು ವೃತ್ತಿಪರ ಜೀವನದ ಎಲ್ಲಾ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ. ನೀವು ಬಯಸಿದ ಸ್ಥಾನಮಾನ ಮತ್ತು ಹಣವನ್ನು ಪಡೆಯುತ್ತೀರಿ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಕಾಣುವಿರಿ.
ಮಿಥುನ ರಾಶಿ :ಹಳೆಯ ರೋಗಗಳಿಂದ ಮುಕ್ತಿ ದೊರೆಯಲಿದೆ. ಹಿಂದಿನಿಂದಲೂ ಇದ್ದ ಮಾನಸಿಕ ಒತ್ತಡ ದೂರವಾಗಲಿದೆ. ಮನೆಯ ವೆಚ್ಚದಲ್ಲಿ ಕಡಿತವಾಗಿ ಹಣ ಉಳಿಸುವುದು ಸಾಧ್ಯವಾಗುತ್ತದೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ.
ಕನ್ಯಾರಾಶಿ :ಈ ಸಮಯವು ಕನ್ಯಾ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಹೊಸ ಉದ್ಯೋಗ ಪಡೆಯುವ ನಿಮ್ಮ ಆಸೆ ಈಡೇರಬಹುದು. ವ್ಯಾಪಾರವೂ ಚೆನ್ನಾಗಿ ನಡೆಯಲಿದೆ. ಆಸ್ತಿಯಲ್ಲಿ ಹೂಡಿಕೆ ಮಾಡಲು ಉತ್ತಮ ಸಮಯ.
ಕುಂಭ ರಾಶಿ : ಇಲ್ಲಿಯವರೆಗೆ ಇದ್ದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಪ್ರತಿಯೊಂದು ವಿಷಯದಲ್ಲೂ ನೀವು ಶುಭ ಫಲಿತಾಂಶಗಳನ್ನು ಪಡೆಯುವಿರಿ. ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ. ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)