ಗಜಲಕ್ಷ್ಮೀ ರಾಜಯೋಗದಿಂದ 2024ರ ಸಂವತ್ಸರ ಆರಂಭ: ಹೊಸ ವರ್ಷದಲ್ಲಿ ದೀಪದಂತೆ ಬೆಳಗಲಿದೆ ಈ ಜನರ ಭವಿಷ್ಯ, ಮಿಲಿಯನೇರ್ ಆಗೋದು ಗ್ಯಾರಂಟಿ

Mon, 27 Nov 2023-7:22 pm,

ಗುರು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು ಸುಮಾರು 13 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಪ್ರಸ್ತುತ ಗುರು ಗ್ರಹವು ಮೇಷ ರಾಶಿಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿದ್ದು ಡಿಸೆಂಬರ್ 31 ರಂದು ವೃಷಭ ರಾಶಿಯಲ್ಲಿ ನೇರವಾಗಿ ಚಲಿಸಲಿದೆ. ಈ ಸಂದರ್ಭದಲ್ಲಿ ಗಜಲಕ್ಷ್ಮಿ ರಾಜಯೋಗವು ರೂಪುಗೊಳ್ಳುತ್ತದೆ. 50 ವರ್ಷಗಳ ಸಂಭವಿಸುತ್ತಿರುವ ಯೋಗದಿಂದ 3 ರಾಶಿಗಳಿಗೆ ಮಂಗಳವುಂಟಾಗಲಿದೆ.

ಜ್ಯೋತಿಷ್ಯದ ಪ್ರಕಾರ, ಗಜಲಕ್ಷ್ಮಿ ರಾಜಯೋಗದ ಪ್ರಭಾವದಿಂದ ಬಾಳಲ್ಲಿ ಸಂತೋಷ, ಶಾಂತಿ, ಸಮೃದ್ಧಿ, ವೈಭವ ಇತ್ಯಾದಿಗಳು ಜೀವನದಲ್ಲಿ ಉಳಿಯುತ್ತವೆ. ಇನ್ನು ಯಾವ ರಾಶಿಯಲ್ಲಿ ಗಜಲಕ್ಷ್ಮಿ ಯೋಗವು ರೂಪುಗೊಳ್ಳುತ್ತದೆಯೋ ಆ ಜನರಿಗೆ ಶನಿಯ ಸಾಡೇ ಸಾತಿಯಿಂದ ಮುಕ್ತಿ ಸಿಗುವುದು ಮಾತ್ರವಲ್ಲ ಸಂಪತ್ತು ಮತ್ತು ಸಂತೋಷವು ಹೆಚ್ಚಾಗುತ್ತದೆ.

ವೃಷಭ ರಾಶಿ: ವೃಷಭ ರಾಶಿಯಲ್ಲಿ ಗುರುವಿನ ಸಂಚಾರವು ಕೆಲ ಜನರಿಗೆ ಅದೃಷ್ಟವನ್ನು ನೀಡಲಿದೆ. ಆರ್ಥಿಕ ಲಾಭ, ಬಡ್ತಿ ಮತ್ತು ಸಂಬಳದಲ್ಲಿ ಹೆಚ್ಚಳದ ಲಾಭವನ್ನು ಪಡೆಯಬಹುದು.

ಸಿಂಹ ರಾಶಿ: ಗುರು ಮಾರ್ಗಿ ಹಾಗೂ ಗಜಲಕ್ಷ್ಮಿ ರಾಜಯೋಗ ರಚನೆಯಾಗಿರುವುದರಿಂದ ಈ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಮಕ್ಕಳ ಕಡೆಯಿಂದ ಖುಷಿಯ ಸುದ್ದಿಗಳು ಬರಲಿದೆ. ಯಶಸ್ಸಿನ ಬಲವಾದ ಸೂಚನೆಗಳಿವೆ.

ಕರ್ಕ ರಾಶಿ : ಗುರುವಿನ ಪಥ ಮತ್ತು ಗಜಲಕ್ಷ್ಮಿ ರಾಜಯೋಗದಿಂದ ಕರ್ಕ ರಾಶಿಯ ಜನರು ಉತ್ತಮ ಲಾಭವನ್ನು ಪಡೆಯಬಹುದು. ಹೊಸ ವರ್ಷಕ್ಕೆ ಮುಂಚೆಯೇ ಗಜಲಕ್ಷ್ಮಿ ರಾಜಯೋಗವು ಅದೃಷ್ಟವನ್ನು ತರಲಿದೆ. ಆದಾಯದಲ್ಲಿ ಹೆಚ್ಚಳವಾಗುವ ಬಲವಾದ ಅವಕಾಶಗಳಿವೆ. ಜೊತೆಗೆ ಉದ್ಯೋಗದಲ್ಲಿ ಬಡ್ತಿ ಮತ್ತು ವರ್ಗಾವಣೆಯ ಸಂಭವವೂ ಇದೆ. ವ್ಯಾಪಾರದಲ್ಲಿಯೂ ಉತ್ತಮ ಲಾಭ ದೊರೆಯಲಿದೆ.

ಧನು ರಾಶಿ: ಗಜಲಕ್ಷ್ಮಿ ರಾಜಯೋಗವು ಈ ರಾಶಿಯವರಿಗೆ ವರದಾನವಾಗಲಿದೆ. ಗುರುವು ಈ ರಾಶಿಯ ಅಧಿಪತಿಯೂ ಹೌದು. ಹೀಗಾಗಿ ವ್ಯವಹಾರಕ್ಕೆ ಸಮಯ ಉತ್ತಮವಾಗಿರುತ್ತದೆ. ಮಕ್ಕಳಿಂದಲೂ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವ ಸಾಧ್ಯತೆಗಳಿವೆ. ಪ್ರತೀ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link