ಈ ರಾಶಿಯಲ್ಲಿ ಗಜ ಲಕ್ಷ್ಮೀ ರಾಜಯೋಗ! ಭರಪೂರವಾಗಿರುತ್ತದೆ ಲಕ್ಷ್ಮೀ ಕಟಾಕ್ಷ
ಗಜಲಕ್ಷ್ಮಿ ಯೋಗ : ಗುರು ಗ್ರಹವು ಏಪ್ರಿಲ್ 22 ರಂದು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಸದ್ಯ ಗುರು ಮೀನ ರಾಶಿಯಲ್ಲಿದ್ದು, ಏಪ್ರಿಲ್‌ನಲ್ಲಿ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಆ ಸಮಯದಲ್ಲಿ ಚಂದ್ರ ಕೂಡಾ ಮೇಷ ರಾಶಿಯನ್ನು ಪ್ರವೇಶಿಸುವುದರಿಂದ ಗಜಲಕ್ಷ್ಮಿ ಯೋಗ ರೂಪುಗೊಳ್ಳುತ್ತದೆ.
ಗಜಲಕ್ಷ್ಮಿ ಯೋಗ ಪರಿಣಾಮ : ಗಜಲಕ್ಷ್ಮಿ ಯೋಗವು ಶನಿಯ ಸಾಡೇ ಸಾತಿಯ ಪ್ರಭಾವವನ್ನು ಕೂಡಾ ಕಡಿಮೆ ಮಾಡುತ್ತದೆ. ಈ ಯೋಗದ ಪ್ರಯೋಜನವು ಎಲ್ಲಾ ರಾಶಿಯವರ ಜೀವನದ ಮೇಲೆ ಕಂಡು ಬರುತ್ತದೆ. ಅದರಲ್ಲೂ ಗಜಲಕ್ಷ್ಮಿ ಯೋಗದ ರಚನೆಯು 3 ರಾಶಿಯವರಿಗೆ ಅಪಾರ ಪ್ರಮಾಣದ ಲಾಭವನ್ನು ನೀಡಲಿದೆ.
ಮೇಷ ರಾಶಿ : ಈ ರಾಶಿಯ ಉದ್ಯೋಗಾಕಾಂಕ್ಷಿಗಳು ಈ ಬಾರಿ ತಮ್ಮ ಮನಸ್ಸಿಗೆ ಬೇಕಾದ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ನೀವು ಯಾವ ಕೆಲಸವನ್ನು ಮಾಡಬೇಕು ಎಂದು ಅಂದುಕೊಳ್ಳುತ್ತಿರೋ ಆ ಕೆಲಸವನ್ನು ಈ ಸಮಯದಲ್ಲಿ ಮಾಡಿ ಮುಗಿಸಬಹುದು. ಆದಾಯ ಹೆಚ್ಚಲಿದೆ. ಅದೃಷ್ಟದ ಸಹಾಯದಿಂದ, ನೀವು ಮಾಡುವ ಎಲ್ಲಾ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ಪ್ರೇಮ ಜೀವನ ಚೆನ್ನಾಗಿರುತ್ತದೆ. ದಾಂಪತ್ಯ ಜೀವನದಲ್ಲೂ ಸಂತೋಷ ಇರುತ್ತದೆ.
ಮಿಥುನ ರಾಶಿ : ಈ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗವು ಅನೇಕ ಲಾಭಗಳನ್ನು ತರುತ್ತದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ವ್ಯಾಪಾರಿಗಳಿಗೆ ಭಾರೀ ಲಾಭವಾಗಲಿದೆ. ಬಡ್ತಿ ಪಡೆದು ವೇತನ ಹೆಚ್ಚಳವಾಗುವ ಅವಕಾಶ ಇರಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ.
ಧನು ರಾಶಿ: ಈ ರಾಶಿಯವರಿಗೆ ಕೂಡಾ ಗಜಲಕ್ಷ್ಮಿ ಯೋಗವು ಹಠಾತ್ ಆರ್ಥಿಕ ಲಾಭವನ್ನು ತರುತ್ತದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ. ಹೂಡಿಕೆಯಿಂದ ಲಾಭವಾಗಲಿದೆ. ವ್ಯಾಪಾರ ವ್ಯವಹಾರ ಕೈ ಹಿಡಿಯಲಿದೆ. ಯಾವುದೇ ಹೊಸ ಕೆಲಸ ಆರಂಭಿಸುವುದಾದರೂ ಇದು ಉತ್ತಮ ಸಮಯವಾಗಿರುತ್ತದೆ.
( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)