April 27 ರಂದು ಗಜಲಕ್ಷ್ಮಿ ರಾಜಯೋಗ ನಿರ್ಮಾಣ, ಈ ರಾಶಿಗಳ ಜನರ ಭಾಗ್ಯೋದಯ ಪಕ್ಕಾ, ಅಪಾರ ಧನಪ್ರಾಪ್ತಿಯ ಯೋಗ!
ಮೇಷ ರಾಶಿ: ಮೇಷ ರಾಶಿಯ ಜಾತಕದವರ ಪಾಲಿಗೆ ಗಜಲಕ್ಷ್ಮಿ ರಾಜಯೋಗ ಅತ್ಯಂತ ಶುಭ ಫಲಪ್ರದ ಸಾಬೀತಾಗಲಿದೆ. ಏಕೆಂದರೆ ಗುರುಗ್ರಹ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಉದಯಿಸುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆತ್ಮ ವಿಶ್ವಾಸದಲ್ಲಿ ಅಪಾರ ಹೆಚ್ಚಳ ಉಂಟಾಗಲಿದೆ. ಕಾರ್ಯಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಕೌಟುಂಬಿಕ ವಾತಾವರಣ ಅನುಕೂಲಕರವಾಗಿರಲಿದೆ. ಇನ್ನೊಂದೆಡೆ ನಿಮ್ಮ ಪಾಲಿಗೆ ಈ ಅವಧಿಯಲ್ಲಿ ಆದಾಯದ ಹೊಸ ಮೂಲಗಳು ನಿರ್ಮಾಣಗೊಳ್ಳುತ್ತಿವೆ. ದೀರ್ಘಕಾಲದಿಂದ ನಿಮಗೆ ಬರಬೇಕಾದ ಹಣ ನಿಮ್ಮತ್ತ ಮರಳ್ಳಲಿದೆ. ಅವಿವಾಹಿತರಿಗೆ ವಿವಾಹ ಸಂಬಂಧ ಕುದುರುವ ಸಾಧ್ಯತೆ ಇದೆ. ನೌಕರ ವರ್ಗದ ಜನರಿಗೆ ನೌಕರಿಯಲ್ಲಿ ಪದೋನ್ನತಿಯ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ.
ವೃಷಭ ರಾಶಿ: ಗುರು ಏಪ್ರಿಲ್ 22 ರಂದು ಮೇಷ ರಾಶಿಯಲ್ಲಿ ಗೋಚರಿಸಲಿದ್ದಾನೆ ಮತ್ತು ಏಪ್ರಿಲ್ 27 ರಂದು ಆತನ ಉದಯ ನೆರವೇರಲಿದೆ. ಗುರುವಿನ ಈ ಉದಯದ ಬಳಿಕ ರೂಪುಗೊಳ್ಳುತ್ತಿರುವ ಈ ಗಜಲಕ್ಷ್ಮಿ ರಾಜಯೋಗ ವೃಷಭ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಎಕೆಂದರ ಗುರುವಿನ ಈ ಉದಯ ನಿಮ್ಮ ಗೋಚರ ಜಾತಕದ ಆದಾಯದ ಭಾವದಲ್ಲಿ ನೆರವೇರುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳ ಉಂಟಾಗಲಿದೆ, ಇನ್ನೊಂದೆಡೆ ನಿಮ್ಮ ರಾಶ್ಯಾಧಿಪನಾಗಿರುವ ಶುಕ್ರ ಕೂಡ ಏಪ್ರಿಲ್ 6 ರಿಂದ ಸ್ವರಾಶಿಯ ಲಗ್ನಭಾವದಲ್ಲಿ ವಿರಾಜಮಾನನಾಗಿದ್ದಾನೆ. ಇದರಿಂದ ಮಾಲವ್ಯ ರಾಜಯೋಗ ನಿರ್ಮಾಣಗೊಂಡಿದೆ. ಇದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಒಂದು ರೀತಿಯ ವಿಶಿಷ್ಟ ಹೊಳಪು ನೋಡಲು ಸಿಗಲಿದೆ. ಬಾಳಸಂಗಾತಿಯ ಜೊತೆಗಿನ ನಿಮ್ಮ ಸಂಬಂಧದಲ್ಲಿ ಗಟ್ಟಿತನ ಕಂಡುಬರಲಿದ್ದು, ಬಾಳಸಂಗಾತಿಯ ಉನ್ನತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇನ್ನೊಂದೆಡೆ ಈ ಅವಧಿಯಲ್ಲಿ ನಿಮಗೆ ನಿಮ್ಮ ಹಳೆ ಹೂಡಿಕೆಗಳಿಂದ ಅಪಾರ ಧನಲಾಭ ಉಂಟಾಗುವ ಎಲ್ಲಾ ಸಾಧ್ಯತೆಗಳಿವೆ. ಅವಿವಾಹಿತರಿಗೆ ವಿವಾಹ ಪ್ರಸ್ತಾವನೆಗಳು ಬರಬಹುದು.
ತುಲಾ ರಾಶಿ: ಗುರು ಗ್ರಹದ ಗೋಚರ ಹಾಗೂ ಉದಯ ಎರಡೂ ಕೂಡ ತುಲಾ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಲಾಭಕಾರಿ ಸಾಬೀತಾಗಲಿದೆ. ಏಕೆಂದರೆ ಗುರು ನಿಮ್ಮ ಜಾತಕದ ಪಂಚಮ ಭಾವದಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ಸಂತಾನದ ಕಡೆಯಿಂದ ಶುಭ ಸಮಾಚಾರ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಜೊತೆಗೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವಿರಿ. ಇದರಿಂದ ಸಮಾಜದಲ್ಲಿ ನಿಮ್ಮ ಘನತೆ-ಗೌರವ ಹೆಚ್ಚಾಗಲಿದೆ ಮತ್ತು ನಿಮ್ಮ ಸಾಮಾಜಿಕ ವ್ಯಾಪ್ತಿ ಕೂಡ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಕೆಲ ವಿಶೇಷ ವ್ಯಕ್ತಿಗಳ ಜೊತೆಗೆ ನಿಮ್ಮ ಭೇಟಿ ಸಂಭವಿಸಬಹುದು. ವಿದ್ಯಾರ್ಥಿಗಳ ಪಾಲಿಗೆ ಈ ಸಮಯ ಅತ್ಯಂತ ಅನುಕೂಲಕರವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿಮಗೆ ಯಶಸ್ಸು ಸಿಗಬಹುದು. ಯಾವುದಾದರೊಂದು ಉನ್ನತ ಕೋರ್ಸ್ ಗೆ ನೀವು ದಾಖಲಾತಿಯನ್ನು ಪಡೆಯಬಹುದು. ಪ್ರೇಮ ಸಂಬಂಧಗಳಲ್ಲಿ ನಿಮಗೆ ಯಶಸ್ಸು ಸಿಗುವ ನಿರೀಕ್ಷೆಗಳಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)