Gajalakshmi Rajyog: 12 ವರ್ಷಗಳ ಬಳಿಕ ಗುರು-ಶುಕ್ರ ಯುತಿಯಿಂದ ಗಜಲಕ್ಷ್ಮಿ ರಾಜಯೋಗ, ಈ ರಾಶಿಯವರಿಗೆ ಅಷ್ಟೈಶ್ವರ್ಯ ಪ್ರಾಪ್ತಿ

Wed, 29 May 2024-7:00 am,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸುಮಾರು 12 ವರ್ಷಗಳ ಬಳಿಕ ವೃಷಭ ರಾಶಿಯಲ್ಲಿ ಗುರು-ಶುಕ್ರರ ಮೈತ್ರಿಯಿಂದ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಕೆಲವು ರಾಶಿಯವರಿಗೆ ಆಚ್ಛೇದಿನ್ ಆರಂಭವಾಗಲಿದ್ದು ಅಷ್ಟೈಶ್ವರ್ಯ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಗಜಲಕ್ಷ್ಮಿ ರಾಜಯೋಗದಿಂದ ಮೇಷ ರಾಶಿಯ ಜನರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಗಳಿಸಲಿದ್ದಾರೆ. ಗುರು ಗೌರವವನ್ನು ನೀಡಿದರೆ, ಶುಕ್ರ ಸುಖ-ಸೌಕರ್ಯ, ಐಷಾರಾಮಿ ಜೀವನವನ್ನು ನೀಡಲಿದ್ದಾನೆ. 

ವೃಷಭ ರಾಶಿಯಲ್ಲಿ ಗುರು-ಶುಕ್ರರ ಯುತಿಯಿಂದ ರೂಪುಗೊಳ್ಳಲಿರುವ ಗಜಲಕ್ಷ್ಮೀ ರಾಜಯೋಗವು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ವೃತ್ತಿ ಬದುಕಿನಲ್ಲಿ ಹೊಸ ಹೊಸ ಅವಕಾಶಗಳು ದೊರೆಯಲಿದೆ. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ.

ಗಜಲಕ್ಷ್ಮಿ ರಾಜಯೋಗವು ಧನು ರಾಶಿಯವರಿಗೆ ಒಳ್ಳೆಯ ದಿನಗಳನ್ನು ತರಲಿದೆ. ತಾಯಿ ಲಕ್ಷ್ಮಿ ಅನುಗ್ರಹದಿಂದ ಹಣಕಾಸಿನ ಬಿಕ್ಕಟ್ಟು ಬಗೆಹರಿಯಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಕೆಲವು ಹೊಸ ಕೆಲಸವನ್ನು ಪ್ರಾರಂಭಿಸುತ್ತೀರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link