Holi 2023: ಹೋಳಿ ಹಬ್ಬದ ಬಳಿಕ ನಿರ್ಮಾಣಗೊಳ್ಳುತ್ತಿದೆ ಗಜಲಕ್ಷ್ಮಿ ರಾಜಯೋಗ, ಈ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ!

Fri, 03 Mar 2023-12:09 pm,

ಮೇಷ ರಾಶಿ- ಗಜಲಕ್ಷ್ಮಿ ರಾಜಯೋಗದಿಂದ ಮೇಷ ರಾಶಿಯ ಜನರಿಗೆ ಉತ್ತಮ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ನೌಕರಿಯ ಹುಡುಕಾಟದಲ್ಲಿ ನಿರತರಾದವರ ಹುಡುಕಾಟ ಅಂತ್ಯವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಪ್ರಶಂಶೆ ನಿಮ್ಮದಾಗಲಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿವೆ. ಪ್ರೇಮ ಸಂಬಂಧಕ್ಕೆ ಸಮಯ ತುಂಬಾ ಅನುಕೂಲಕರವಾಗಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ದಾಂಪತ್ಯ ಜೀವನ ಸುಖದಿಂದ ಕೂದಿರಲಿದೆ. ಭಾಗ್ಯದ ಸಾಥ್ ನಿಮಗೆ ಸಿಗಲಿದೆ. ಇದರಿಂದ ಎಲ್ಲಾ ಕೆಲಸಗಳಲ್ಲಿ ನಿಮಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಹಳೆ ಮತ್ತು ನೆನಗುದಿಗೆ ಬಿದ್ದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆದಾಯದಲ್ಲಿಯೂ ಕೂಡ ಹೆಚ್ಚಳವಾಗುವ ಸಾಧ್ಯತೆ ಇದೆ.  

ಮಿಥುನ ರಾಶಿ-  ಗಜಲಕ್ಷ್ಮಿ ರಾಜಯೋಗದ ಕಾರಣ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳವಾಗಲಿದೆ. ಹಳೆ ಹೂಡಿಕೆಗಳು ಕೂಡ ನಿಮಗೆ ಲಾಭ ನೀಡಲಿವೆ. ವ್ಯಾಪಾರದಲ್ಲಿ ಲಾಭದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಅಡೆತಡೆಗಳ ಹೊರತಾಗಿಯೂ ಮುಂದುವರೆಯುವ ಅವಕಾಶ ಸಿಗಲಿದೆ. ಸಮಾಜದಲ್ಲಿ ನಿಮ್ಮ ಘನತೆ-ಗೌರವ ಹೆಚ್ಚಾಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರಲಿದೆ. ಸಿಂಗಲ್ ಆಗಿರುವ ಜಾತಕದವರ ಜೀವನದಲ್ಲಿ ಹೊಸ ವ್ಯಕ್ತಿಯ ಎಂಟ್ರಿ ಸಾಧ್ಯತೆಗಳಿವೆ. ಅವರೊಂದಿಗೆ ಒಂದು ಗಟ್ಟಿ ಸಂಬಂಧ ನಿರ್ಮಿಸುವ ಆಲೋಚನೆ ನಿಮ್ಮ ಮನದಲ್ಲಿ ಬರಲಿದೆ.  

ಧನು ರಾಶಿ- ಗಜಲಕ್ಷ್ಮಿ ರಾಜಯೋಗ ಧನು ರಾಶಿಯ ಜಾತಕದವರಿಗೆ ಆಕಸ್ಮಿಕ ಧನಲಾಭ ನೀಡಲಿದೆ. ಏಕೆಂದರೆ ಗುರು ನಿಮ್ಮ ಜಾತಕದ ಪಂಚಮ ಭಾವದಲ್ಲಿ ಗೋಚರಿಸಲಿದ್ದಾನೆ. ಇದರಿಂದ ವ್ಯಾಪಾರಿಗಳಿಗೆ ಅವರ ವ್ಯಾಪಾರದಲ್ಲಿ ಅಪಾರ ಲಾಭ ಸಿಗುವ ಸಾಧ್ಯತೆ ಇದೆ. ಪ್ರೇಮ-ಸಂಬಂಧಗಳಲ್ಲಿ ಸುಮಧುರತೆ ಇರಲಿದೆ. ಶಿಕ್ಷಣದ ಕುರಿತು ಹೇಳುವುದಾದರೆ, ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಿ ವ್ಯಾಸಂಗ ಮಾಡುವುದರ ಕುರಿತು ಸೀರಿಯಸ್ಸಾಗಿ ಯೋಚಿಸಬಹುದು. ಅವರಿಗೆ ಸಮಯ ತುಂಬಾ ಅನುಕೂಲಕರವಾಗಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link