ವರ್ಷಾಂತ್ಯಕ್ಕೆ ಗಜಕೇಸರಿ ಯೋಗದ ಜೊತೆಗೆ ಗುರುಪುಷ್ಯ ಯೋಗ, ಧನಕುಬೇರ ಕೃಪೆಯಿಂದ ಈ ಜನರ ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಅಪಾರ ಹೆಚ್ಚಳ!
ಹಿಂದೂ ಪಂಚಾಂಗದ ಪ್ರಕಾರ ಪುಷ್ಯ ನಕ್ಷತ್ರ ಡಿಸೆಂಬರ್ 29 ಬೆಳಗ್ಗೆ 1 ಗಂಟೆ 5 ನಿಮಿಷಕ್ಕೆ ಗಂಟೆಗೆ ಆರಂಭ ಗೊಳ್ಳುತ್ತಿದ್ದು, ಡಿಸೆಂಬರ್ 30ರ ಬೆಳಗ್ಗೆ 7 ಗಂಟೆ 12 ನಿಮಿಷದವರೆಗೆ ಇರಲಿದೆ. ಪುಷ್ಯ ನಕ್ಷತ್ರ ಗುರುವಾರದ ದಿನ ಬೀಳುತ್ತಿದೆ. ಇದೆ ಕಾರಣದಿಂದ ಇದನ್ನು ಗುರು ಪುಷ್ಯ ನಕ್ಷತ್ರ ಎಂದು ಕರೆಯಲಾಗುತ್ತದೆ, ಈ ದಿನ ಖರೀದಿಗೆ ಅತ್ಯುತ್ತಮವಾಗಿದೆ. ಈ ದಿನ ಮಾಡುವ ಖರೀದಿ ಹಲವು ಪಟ್ಟು ಹೆಚ್ಚು ಫಲಗಳನ್ನು ನೀಡುತ್ತದೆ. ಇದಲ್ಲದೆ ಗಜಕೇಸರಿ ಯೋಗ ಕೂಡ ರೂಪುಗೊಳ್ಳುತ್ತಿದ್ದು, ಇದನ್ನು ಮತ್ತಷ್ಟು ವಿಶೇಷವಾಗಿಸುತ್ತದೆ. ಈ ಯೋಗಗಳು ಯಾವ ರಾಶಿಗಳಿಗೆ ಅದೃಷ್ಟವನ್ನು ತರಲಿವೆ ತಿಳಿದುಕೊಳ್ಳೋಣ ಬನ್ನಿ,
ಮೇಷ ರಾಶಿ: ನಿಮ್ಮ ಜಾತಕದ ಪ್ರಥಮ ಭಾವದಲ್ಲಿ ಅಂದರೆ ಭಾಗ್ಯದ ಸ್ಥಾನದಲ್ಲಿ ಗುರು ತನ್ನ ನೇರನಡೆ ಅನುಸರಿಸುತ್ತಿದ್ದಾನೆ. ಇದರಿಂದ ಗುರುಪುಷ್ಯಯೋಗ ಮತ್ತು ಗಜಕೇಸರಿ ಯೋಗಗಳು ನಿಮಗೆ ವಿಶೇಷ ಲಾಭಗಳನ್ನು ನೀಡಲಿವೆ. ಇದರಿಂದ ಹೊಸ ವರ್ಷ ಹಲವು ಖುಷಿಗಳಿಂದ ಕೂಡಿರಲಿದೆ. ದೀರ್ಘಾವಧಿಯಿಂದ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದೆ. ನೌಕರ ವರ್ಗದ ಜನರ ಕುರಿತು ಹೇಳುವುದಾದರೆ, ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದ್ದು, ಮೇಲಾಧಿಕಾರಿಗಳು ನಿಮ್ಮ ಕೆಲಸದಿಂದ ಪ್ರಸನ್ನರಾಗಲಿದ್ದಾರೆ. ಇದರಿಂದ ನಿಮಗೆ ದೊಡ್ಡ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಬಿಸ್ನೆಸ್ ಕುರಿತು ಹೇಳುವುದಾದರೆ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲಗಳು ಸಿಗಲಿವೆ. ಬಿಸ್ನೆಸ್ ನಲ್ಲಿ ಮಹತ್ವದ ಡೀಲ್ ಸೈನ್ ಮಾಡುವ ಸಾಧ್ಯತೆ ಇದೆ. ಇದಲ್ಲದೆ ನೀವು ಹಲವು ಮಹತ್ವಪೂರ್ಣ ನಿರ್ಣಯಗಳನ್ನು ಕೈಗೊಳ್ಳುವಿರಿ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ. ಕುಟುಂಬಸ್ಥರ ಜೊತೆಗೆ ನೀವು ಉತ್ತಮ ಕಾಲವನ್ನು ಕಳೆಯುವಿರಿ.
ಸಿಂಹ ರಾಶಿ: ಸಿಂಹ ರಾಶಿಯ ಜಾತಕದವರ ನವಮ ಭಾವದಲ್ಲಿ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ. ಇದರಿಂದ ದೀರ್ಘಕಾಲದಿಂದ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ತಂದೆ ಅಥವಾ ಗುರುವಿನ ಜೊತೆಗೆ ಏರ್ಪಟ್ಟ ಭಿನ್ನಾಭಿಪ್ರಾಯಗಳು ಶಮನಗೊಳ್ಳಲಿವೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಆದ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ. ಗುರುಪುಷ್ಯ ಯೋಗ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಅಪಾರ ಸುಧಾರಿಸಲಿದೆ. ಹಣಕಾಸಿನ ಮುಗ್ಗಟ್ಟಿನಿಂದ ಮುಕ್ತಿ ಸಿಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗೆ ಯಶಸ್ಸು ಸಿಗಲಿದೆ.
ಧನು ರಾಶಿ: ಹೊಸ ವರ್ಷ ಧನು ರಾಶಿಗಳ ಜನರಿಗೆ ಅತ್ಯಂತ ಉತ್ತಮ ಸಾಬೀತಾಗಲಿದೆ. ನಿಮ್ಮ ರಾಶಿಗೆ ಗುರು ಅಧಿಪತಿಯಾಗಿದ್ದಾನೆ ಮತ್ತು ಆತ ನಿಮ್ಮ ಜಾತಕದ ಪಂಚಮ ಭಾವದಲ್ಲಿ ಗಜಕೇಸರಿಯೋಗ ರೂಪಿಸುತ್ತಿದ್ದಾನೆ. ಇದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಇದರಿಂದ ನೀವು ಹಲವು ಕೆಲಸಗಳಲ್ಲಿ ಯಶಸ್ಸು ಸಂಪಾದಿಸುವಿರಿ. ಕೌಟುಂಬಿಕ ಜೀವನದಲ್ಲಿ ತಲೆದೂರಿರುವ ಸಮಸ್ಯೆಗಳು ನಿವಾರಣೆಯಾಗಲಿವೆ. ವಿದ್ಯಾರ್ಥಿಗಳಿಗೂ ಕೂಡ ಲಾಭ ಸಿಗಲಿದೆ. ಒಂದು ವೇಳೆ ನೀವು ಹೂಡಿಕೆಗಾಗಿ ಯೋಜನೆ ರೂಪಿಸುತ್ತಿದ್ದರೆ, ಈ ಅವಧಿ ನಿಮ್ಮ ಪಾಲಿಗೆ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಹಣಕಾಸಿನ ಸ್ಥಿತಿ ಬಲಿಷ್ಠವಾಗಿರಲಿದೆ, ಇದರಿಂದ ನಿಮಗೆ ಸಾಲಭಾಧೆಯಿಂದ ಕೂಡ ಮುಕ್ತಿ ಸಿಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)