ಹಿತ್ತಲ ತುಂಬಾ ಹರಡಿಕೊಳ್ಳುವ ಈ ಪುಟ್ಟ ಗಿಡದ ಎಲೆ ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್!ಈ ಹೊತ್ತಿನಲ್ಲಿ ಸೇವಿಸಿ ನೋಡಿ
ಅಂಗೈಯಗಲದಷ್ಟು ಇರುವ ಈ ಸಸ್ಯ ಊಹಿಸಲಾರದಷ್ಟು ಪ್ರಯೋಜನವನ್ನು ನೀಡುತ್ತದೆ.ಕಳೆ ಗಿಡದಂತೆ ಕಾಣುವ ಈ ಗಿಡ ಮಧುಮೇಹ ಇದ್ದವರಿಗೆ ಅಮೃತವೇ ಸರಿ.
ನಾವಿಲ್ಲಿ ಹೇಳುತ್ತಿರುವುದು ನೆಲ ನೆಲ್ಲಿ ಗಿಡದ ಬಗ್ಗೆ.ಈ ಗಿಡ ಮಳೆಗಾಲದಲ್ಲಿ ಎಲ್ಲಿ ನೋಡಿದರೂ ಕಣ್ಣಿಗೆ ಬೀಳುತ್ತದೆ.ಇದು ಬ್ಲಡ್ ಶುಗರ್ ಅನ್ನು ಥಟ್ ಅಂತ ಕಡಿಮೆ ಮಾಡಿಬಿಡುತ್ತದೆ.
ನೆಲ ನೆಲ್ಲಿಕಾಯಿ ತನ್ನ ಹುಳಿ,ಕಹಿ ಮತ್ತು ಸಂಕೋಚಕ ಗುಣಲಕ್ಷಣಗಳಿಂದಾಗಿ ಹೆಚ್ಚಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಇದು ಚಯಾಪಚಯವನ್ನು ಸುಧಾರಿಸಿ, ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಮಟ್ಟವನ್ನು ನಾರ್ಮಲ್ ಮಾಡುತ್ತದೆ.
ನೆಲನೆಲ್ಲಿ ರಸ ಸೇವಿಸಿದ ತಕ್ಷಣ ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಸಮತೋಲನದಲ್ಲಿರಿಸಿ ಮಧುಮೇಹವನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇರಿಸುತ್ತದೆ.
ನೆಲನೆಲ್ಲಿ ಗಿಡವನ್ನು ತೊಳೆದು 4 ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದು ಅರ್ಧಭಾಗಕ್ಕೆ ಇಳಿಯುವಷ್ಟು ಕುದಿಸಿ ಸೋಸಿಕೊಂಡು ಕುಡಿಯಿರಿ. ಈ ಗಿಡವನ್ನು ಒಣಗಿಸಿ ಅದನ್ನು ನೀರಿನಲ್ಲಿ ಹಾಕಿ ಕುದಿಸಿಯೂ ಸೇವಿಸಬಹುದು.
ನೆಲನೆಲ್ಲಿ ಕಷಾಯವನ್ನು ನಾಲಗೆಗೂ ರುಚಿಯಾಗಿರುತ್ತದೆ.ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೆಚ್ಚು ಪರಿಣಾಮ .
ಸೂಚನೆ :ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.