`ಎಲ್ಇಡಿ ದೀಪಗಳುಳ್ಳ` ಗಣೇಶನ ವಿಗ್ರಹಗಳು ಮಾರುಕಟ್ಟೆಗೆ ಲಗ್ಗೆ, ರಿಮೋಟ್‌ನಿಂದ ಬದಲಾಗಲಿದೆ ಬಣ್ಣ
ಮುಂಬೈ, ಅಮೋಲ್ ಪೆಡ್ನೇಕರ್: ಗಣೇಶ ಹಬ್ಬಕ್ಕಾಗಿ ಈ ವರ್ಷ ಮುಂಬೈನಲ್ಲಿ ಎಲ್ಇಡಿ ದೀಪಗಳ ಗಣೇಶ ವಿಗ್ರಹವನ್ನು ತಯಾರಿಸಲಾಗಿದೆ. ಮುಂಬೈನ ಪ್ರಂಜಲ್ ಮೂರ್ತಿ ಕೇಂದ್ರದಲ್ಲಿ ವಿಶೇಷವಾದ ಎಲ್ಇಡಿ ದೀಪದ ಗಣೇಶ ವಿಗ್ರಹಗಳನ್ನು ತಯಾರಿಸಲಾಗಿದೆ.
ಗಣೇಶ ವಿಗ್ರಹದ ಎಲ್‌ಇಡಿ ಲೈಟಿಂಗ್ ರಿಮೋಟ್‌ನಿಂದ ಬದಲಾಗಲಿದೆ. ಆದ್ದರಿಂದ ನೀವು ರಿಮೋಟ್ ಕಂಟ್ರೋಲ್ ಅನ್ನು ಬಳಸುವ ಮೂಲಕ ಎಲ್ಇಡಿ ಲೈಟಿಂಗ್ ಬದಲಾಯಿಸಬಹುದು. ಇದರಲ್ಲಿ ಬಹು ಆಯ್ಕೆಗಳಿದ್ದು, ನೀವು ಪ್ರತಿದಿನ ಎಲ್ಇಡಿ ದೀಪಗಳನ್ನು ವಿವಿಧ ಬಣ್ಣಗಳಲ್ಲಿ ಇರಿಸಬಹುದು.
ಅಂದಹಾಗೆ, ಗಣೇಶಮೂರ್ತಿಯಲ್ಲಿ ಕೃತಕ ವಜ್ರಗಳನ್ನು ಇಡಲಾಗಿದೆ. ಇದರಿಂದಾಗಿ ಎಲ್ಇಡಿ ದೀಪಗಳು ಗಣೇಶನ ಮೂರ್ತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ನೀವು ಈ ಎಲ್ಇಡಿ ಗಣೇಶಮೂರ್ತಿಗಳನ್ನು ಬಳಸಲು ಬಯಸಿದರೆ ವಿವಿಧ ಗಾತ್ರದ ಗಣೇಶನ ವಿಗ್ರಹ ಇಲ್ಲಿ ಲಭ್ಯವಿದೆ.
ಈ ಎಲ್ಇಡಿ ಗಣೇಶಮೂರ್ತಿಯನ್ನು 4 ಸಾವಿರ ರೂಪಾಯಿಗಳಿಗೆ ಗ್ರಾಹಕರು ಖರೀದಿಸಬಹುದು. ಗಣೇಶ ವಿಗ್ರಹದ ಮೇಲೆ ಕೃತಕ ವಜ್ರದ ಅಲಂಕಾರ ಮತ್ತು ಎಲ್‌ಇಡಿ ದೀಪಗಳು ಇದರ ವಿಶೇಷ ಲಕ್ಷಣವಾಗಿದೆ ಎಂದು ಎಲ್‌ಇಡಿ ಗಣೇಶ ವಿಗ್ರಹ ತಯಾರಕರಾದ ಸಂಗೀತ ಚೌಧರಿ ತಿಳಿಸಿದ್ದಾರೆ.
'ಎಲ್ಇಡಿ ದೀಪಗಳುಳ್ಳ' ಗಣೇಶನ ವಿಗ್ರಹಗಳಿಗೆ ಗ್ರಾಹಕರಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಗಣೇಶ ಉತ್ಸವ ಸೇರಿದಂತೆ ಯಾವುದೇ ಮೆರವಣಿಗೆಯಲ್ಲಿ, ನೀವು ಬ್ಯಾಟರಿ ಬಳಸಿ ಈ ಎಲ್ಇಡಿ ಲೈಟಿಂಗ್ ಅನ್ನು ಬೆಳಗಿಸಬಹುದು.