Ganesh Chaturthi 2022: ಗಣೇಶನ ವಿಗ್ರಹ ಖರೀದಿಸುವಾಗ ಈ ಸಂಗತಿಗಳನ್ನು ನೆನಪಿನಲ್ಲಿಡಿ... ಇಲ್ದಿದ್ರೆ?
1. ನೃತ್ಯ ಮಾಡುತ್ತಿರುವ ಗಣೇಶನ ವಿಗ್ರಹವನ್ನು ತರಬೇಡಿ - ಮನೆಗೆ ಎಂದಿಗೂ ಕೂಡ ನೃತ್ಯ ಮಾಡುತ್ತಿರುವ ಗಣೇಶನ ವಿಗ್ರಹವನ್ನು ತರಬೇಡಿ. ಇಂತಹ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಥಾಪಿಸುವುದರಿಂದ ಮನೆಯಲ್ಲಿ ಕ್ಲೇಶ-ಕಲಹಗಳು ಉಂಟಾಗುತ್ತವೆ. ಅಷ್ಟೇ ಅಲ್ಲ ಇಂತಹ ಮೂರ್ತಿಯನ್ನು ಯಾರಿಗೂ ಕೂಡ ಉಡುಗೊರೆಯ ರೂಪದಲ್ಲಿ ಕೊಡಬೇಡಿ.
2. ಎಡಭಾಗದಲ್ಲಿ ಗಣೇಶನ ಸೊಂಡಿಲು - ಮನೆಗೆ ಗಣೇಶನ ವಿಗ್ರಹವನ್ನು ಖರೀದಿಸಿ ತರುವಾಗ ಗಣೇಶನ ಸೊಂಡಿ ಎಡಭಾಗಕ್ಕೆ ಇರಬೇಕು ಎಂಬುದನ್ನು ನೆನಪಿನಲ್ಲಿಡಿ. ಬಲಭಾಗದಲ್ಲಿ ಸೊಂಡಿಲು ಇರುವ ಗಣೇಶನ ವಿಗ್ರಹವನ್ನು ಪೂಜಿಸುವಲ್ಲಿ ವಿಶೇಷ ನಿಯಮಗಳನ್ನು ಅನುಸರಿಸಬೇಕು. ಹೀಗಾಗಿ ಅಂತಹ ವಿಗ್ರಹವನ್ನು ಮನೆಯಲ್ಲಿ ಪ್ರತಿಷ್ಠಾಪಿಸುವುದನ್ನು ತಪ್ಪಿಸಿ.
3. ಸೇಡಿ ಮಣ್ಣಿನ ಮೂರ್ತಿಯನ್ನು ಮಾತ್ರ ಪ್ರತಿಷ್ಠಾಪಿಸಿ - ಗಣೇಶನ ವಿಗ್ರಹ ಖರೀದಿಸುವಾಗ ಆ ವಿಗ್ರಹ ಸೇಡಿ ಮಣ್ಣಿನಿಂದ ತಯಾರಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಏಕೆಂದರೆ, ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಅಶುದ್ಧ ಸಾಮಗ್ರಿಗಳಿಂದ ತಯಾರಿಸಲಾಗಿರುವ ಮನೆಯಲ್ಲಿ ಪ್ರತಿಸ್ಥಾಪಿಸುವುದು ಅಶುಭ. ಇಕೋ ಫ್ರೆಂಡ್ಲಿ ವಿಗ್ರಹ ಪ್ರತಿಷ್ಠಾಪಿಸುವುದು ಇನ್ನೂ ಉತ್ತಮ. ಸ್ಥಳೀಯ ಮಾರುಕಟ್ಟೆ ಅಥವಾ ಆನ್ಲೈನ್ ಮಾರುಕಟ್ಟೆಯಿಂದಲೂ ಕೂಡ ನೀವು ಪರಿಸರ ಸ್ನೇಹಿ ಗಣೇಶ ವಿಗ್ರಹವನ್ನು ಖರೀದಿಸಬಹುದು.
4. ವಿರಾಜಮಾನನಾಗಿರುವ ಗಣೇಶನ ವಿಗ್ರಹವಿರಲಿ - ಯಾವಾಗಲು ವಿರಾಜಮಾನ ಸ್ಥಿತಿಯಲ್ಲಿರುವ ಗಣೇಶನ ಮೂರ್ತಿಯನ್ನು ಮನೆಗೆ ತಂದು ಪ್ರತಿಷ್ಠಾಪಿಸುವುದು ಉತ್ತಮ. ಕಚೇರಿಗಳಲ್ಲಿ ನಿಂತಿರುವ ಗಣೇಶನ ವಿಗ್ರಹ ಪ್ರತಿಷ್ಠಾಪಿಸುವುದು ಉತ್ತಮ.
5. ಈ ಜಾಗಗಳಲ್ಲಿ ಮೂರ್ತಿ ಪ್ರತಿಷ್ಠಾಪಾನೇ ಬೇಡ - ಗಣೇಶನ ವಿಗ್ರಹವನ್ನು ಮನೆಯಲ್ಲಿ ಸಿಕ್ಕ ಸಿಕ್ಕ ಜಾಗದಲ್ಲಿ ಪ್ರತಿಷ್ಠಾಪಿಸಬೇಡಿ. ಸ್ನಾನಗೃಹದ ಬಳಿ ಅಥವಾ ಬೆಡ್ ರೂಮ್ ನಲ್ಲಿ ಗಣೇಶನ ವಿಗ್ರಹವನ್ನು ಮರೆತೂ ಕೂಡ ಪ್ರತಿಷ್ಠಾಪಿಸಬೇಡಿ. ಇದು ಜೀವನದಲ್ಲಿ ಸಾಕಷ್ಟು ಸಂಕಷ್ಟಗಳಿಗೆ ಕಾರಣವಾಗುತ್ತದೆ.
6. ಸಂತಾನ ಪ್ರಾಪ್ತಿಗಾಗಿ ಬಾಲಗಣೇಶನ ವಿಗ್ರಹವನ್ನು ಮನೆಗೆ ತನ್ನಿ - ಸಂತಾನ ಸುಖ ಪಡೆಯಲು ಬಯಸುವ ಜಾತಕದವರು ಗಣೇಶನ ಬಾಲ ಸ್ವರೂಪಿ ವಿಗ್ರಹವನ್ನು ಮನೆಗೆ ತರಬೇಕು. ಹೀಗೆ ಮಾಡುವುದರಿಂದ ಸಂತಾನ ಪ್ರಾಪ್ತಿಯ ನಿಮ್ಮ ಬಯಗೆ ಶೀಘ್ರದಲ್ಲಿಯೇ ಈಡೇರಲಿದೆ.