Anant Chaturdarshi Astro Tips: ಗಣೇಶ ವಿಸರ್ಜನೆಗೂ ಮುನ್ನ ಈ ವಿಶಿಷ್ಠ ಕೆಲಸ ಮಾಡಿದ್ರೆ, ಸುಖ-ಸಮೃದ್ಧಿ ಮನೆ ಸೇರುತ್ತವೆ
1. ಧನಪ್ರಾಪ್ತಿಗೆ ಈ ಉಪಾಯ ಅನುಸರಿಸಿ - ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ಗಣೇಶನಿಗೆ ಬೆಲ್ಲ ಮತ್ತು ಹಸುವಿನ ತುಪ್ಪದಲ್ಲಿ ತಯಾರಿಸಲಾಗಿರುವ ನೈವೇದ್ಯವನ್ನು ಅರ್ಪಿಸಿ. ಇದರಿಂದ ಬಡತನ ನಿವಾರಣೆಯಾಗಿ ಆದಾಯ ಹೆಚ್ಚುತ್ತದೆ.
2. ಮನಮೆಚ್ಚಿದ ಸಂಗಾತಿ ಪಡೆಯಲು ಈ ಉಪಾಯ ಅನುಸರಿಸಿ - ವಿವಾಹ ಕಾರ್ಯಗಳಲ್ಲಿ ಅಡಚಣೆಗಳು ಎದುರಾಗುತ್ತಿದ್ದರೆ, ಶ್ರೀಗಣೇಶನಿಗೆ ಅರಿಶಿಣದಲ್ಲಿ ಸಿಂಧೂರವನ್ನು ಬೆರೆಸಿ ಅರ್ಪಿಸಿ, ಬೇಗ ವಿವಾಹ ಮಾಡಿಸುವಂತೆ ಪಾರ್ಥನೆ ಸಲ್ಲಿಸಿ.
3. ವಾಣಿ ದೋಷ ನಿವಾರಣೆಯ ಉಪಾಯ - ಜಾತಕದಲ್ಲಿ ಬುಧ ಬಲಹೀನನಾಗಿದ್ದರೆ ವಾಣಿಗೆ ಸಂಬಂಧಿ ಸಮಸ್ಯೆಗಳಿರುತ್ತವೆ. ಉದಾಹರಣೆಗೆ ತೊದಲುವಿಕೆ, ಮಾತನಾಡುವಾಗ ಎಡಚುವಿಕೆ, ಅಸ್ಪಷ್ಟ ಉಚ್ಚಾರಣೆ, ಕಡಿಮೆ ಬುದ್ಧಿಮತ್ತೆ, ತಾರ್ಕಿಕ ಶಕ್ತಿಯ ಕೊರತೆ, ಇತ್ಯಾದಿ ಸಮಸ್ಯೆಗಳಿರುತ್ತವೆ. ಇದನ್ನು ಹೋಗಲಾಡಿಸಲು ಅನಂತ ಚತುರ್ದರ್ಶಿಯಂದು ಗಣೇಶ ವಿಸರ್ಜನೆಗೂ ಮುನ್ನ ಗಣಪತಿ ಬಪ್ಪಾಗೆ ಬಾಳೆಹಣ್ಣಿನ ಮಾಲೆಯನ್ನು ತಯಾರಿಸಿ ಅರ್ಪಿಸಿ. ಇದರಿಂದ ಜಾತಕದಲ್ಲಿ ಬುಧ ಬಲ ಹೆಚ್ಚಾಗುತ್ತದೆ ಮತ್ತು ಆತ ಶುಭ ಫಲಿತಾಂಶಗಳನ್ನು ನೀಡುತ್ತಾನೆ.
4. ಸುಖ-ಸಮೃದ್ಧಿ ಪ್ರಾಪ್ತಿಗಾಗಿ ಈ ಉಪಾಯ ಅನುಸರಿಸಿ - ಗಣೇಶ ವಿಸರ್ಜನೆಯ ದಿನ ಶ್ರೀಗಣೇಶನಿಗೆ ಸಂಪೂರ್ಣ ಭಕ್ತಿ ಭಾವದಿಂದ ಕರಿಕೆ ಮತ್ತು ಮೋದಕವನ್ನು ಅರ್ಪಿಸಿ. ನಂತರ ಸಹ ಕುಟುಂಬ ಪರಿವಾರದೊಂದಿಗೆ ಮೋದಕ ಪ್ರಸಾದವನ್ನು ಸೇವಿಸಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಾಗುತ್ತದೆ.
5. ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಂಪಾದಿಸಲು ಈ ಉಪಾಯ ಅನುಸರಿಸಿ - ಕೆಲಸ ಕಾರ್ಯಗಳಲ್ಲಿ ಎದುರಾಗುತ್ತಿರುವ ಅಡೆತಡೆಗಳ ನಿವಾರಿಸಲು ವಿಘ್ನವಿನಾಶಕ ಗಣೇಶನಿಗೆ 4 ತೆಂಗಿನ ಕಾಯಿಗಳ ಮಾಲೆಯನ್ನು ತಯಾರಿಸಿ ಅರ್ಪಿಸಿ. ಇದರಿಂದ ವರ್ಷಾನುವರ್ಷಗಳಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲು ಆರಂಭಿಸುತ್ತವೆ. ಇದರ ಜೊತೆಗೆ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ನಿಮಗೆ ಯಶಸ್ಸು ಸಿಗಲು ಆರಂಭಿಸುತ್ತದೆ.