ಗಣೇಶನಿಗೆ ಅತ್ಯಂತ ಪ್ರಿಯ ಈ ರಾಶಿಯವರು ! ವಿಘ್ನ ಇವರ ಬಳಿಯೂ ಸುಳಿಯದು ! ಇಟ್ಟ ಹೆಜ್ಜೆ ಗೆಲುವಿನತ್ತಲೇ ಸಾಗುವುದು
ಯಾವುದೇ ಶುಭ ಕಾರ್ಯವು ಸಾಮಾನ್ಯವಾಗಿ ಗಣೇಶನನ್ನು ಪೂಜಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಗಣೇಶನನ್ನು ವಿಘ್ನ ವಿನಾಶಕ ಎಂದೂ ಕರೆಯುತ್ತಾರೆ. ಗಣೇಶನ ಕೃಪೆಯಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತಿಗೆ ಕೊರತೆಯಾಗುವುದಿಲ್ಲ.
ಜ್ಯೋತಿಷ್ಯದಲ್ಲಿನ ದ್ವಾದಶ ರಾಶಿಗಳಲ್ಲಿ ನಾಲ್ಕು ರಾಶಿಯವರ ಮೇಲೆ ಗಣೇಶ ಸದಾ ಕೃಪಾ ದೃಷ್ಠಿ ಬೀರಿರುತ್ತಾನೆ. ಈ ರಾಶಿಯವರ ಮೇಲೆ ಗಣಪತಿ ಆಶೀರ್ವಾದ ಇದ್ದೇ ಇರುತ್ತದೆ. ಇದೇ ಕಾರಣದಿಂದ ಇವರ ಜೀವನದಲ್ಲಿ ಸಕಲ ಐಶ್ವರ್ಯ ಮನೆ ಮಾಡಿರುತ್ತದೆ.
ಕನ್ಯಾ ರಾಶಿ : ಕನ್ಯಾ ರಾಶಿಯವರ ಮೇಲೆ ಗಣೇಶನ ವಿಶೇಷ ಆಶೀರ್ವಾದವಿರುತ್ತ ದೆ. ಕನ್ಯಾ ರಾಶಿಯ ಅಧಿಪತಿ ಬುಧ. ಬುಧಗ್ರಹದ ಪ್ರಭಾವದಿಂದಾಗಿ ಕನ್ಯಾ ರಾಶಿಯವರು ಬುದ್ಧಿವಂತರು ಮತ್ತು ಅದೃಷ್ಟವಂತರಾಗಿರುತ್ತಾರೆ. ಕನ್ಯಾ ರಾಶಿಯವರ ಮೇಲೆ ಗಣಪತಿಯ ಕೃಪೆ ಸದಾ ಇರುತ್ತದೆ. ಈ ಜನರು ತಮ್ಮ ಬುದ್ಧಿಶಕ್ತಿಯಿಂದ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ. ಕನ್ಯಾ ರಾಶಿಯವರ ಮೇಲೆ ಗಣೇಶನ ವಿಶೇಷ ಕೃಪೆ ಇರುವುದರಿಂದ ಅವರ ಕೆಲಸದಲ್ಲಿ ಯಾವುದೇ ರೀತಿಯ ಅಡೆತಡೆಗಳು ಎದುರಾಗುವುದಿಲ್ಲ. ಆದ್ದರಿಂದಲೇ ಅವರು ಯಶಸ್ಸಿನ ಮೆಟ್ಟಿಲನ್ನು ಸುಲಭವಾಗಿ ಏರುತ್ತಾರೆ.
ಮಕರ ರಾಶಿಯವರ ಮೇಲೆ ಗಣೇಶನ ವಿಶೇಷ ಆಶೀರ್ವಾದವಿರುತ್ತದೆ. ಮಕರ ರಾಶಿಯವರು ಕಠಿಣ ಪರಿಶ್ರಮಿಗಳು ಮತ್ತು ಮುಕ್ತ ಮನಸ್ಸಿನವರು. ಇವರನ್ನು ಕಣ್ಣು ಮುಚ್ಚಿ ನಂಬಬಹುದು. ಮಕರ ರಾಶಿಯವರ ಮೇಲೆ ಗಣೇಶನ ಜೊತೆಗೆ, ಶನಿಯ ಆಶೀರ್ವಾದವೂ ಇರುತ್ತದೆ. ಈ ಕಾರಣದಿಂದಲೇ ಹೆಚ್ಚುವರಿ ಶ್ರಮವಿಲ್ಲದೆ ಇವರು ಎಲ್ಲಾ ಕಾರ್ಯಗಳನ್ನು ಪೂರೈಸಿ ಬಿಡುತಾರೆ. ಮಕರ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ.
ಮಿಥುನ ರಾಶಿ : ಮಿಥುನ ರಾಶಿಯವರ ಮೇಲೆ ಗಣಪತಿ ಸದಾ ದಯೆ ತೋರುತ್ತಾನೆ. ಮಿಥುನ ರಾಶಿಯ ಅಧಿಪತಿ ಕೂಡಾ ಬುಧ. ಬುಧವನ್ನು ವ್ಯಾಪಾರ, ಸಂವಹನ ಮತ್ತು ಬುದ್ಧಿವಂತಿಕೆಯ ಒಡೆಯ ಎನ್ನುತ್ತಾರೆ. ಮಿಥುನ ರಾಶಿಯವರು ತುಂಬಾ ತೀಕ್ಷ್ಣ ಮನಸ್ಸಿನವರು. ಇವರು ಕೈ ಹಾಕುವ ಎಲ್ಲಾ ಕಾರ್ಯದಲ್ಲಿ ಯಶಸ್ವಿಯಾಗುತ್ತಾರೆ. ಗಣೇಶನ ಆಶೀರ್ವಾದದಿಂದ ಈ ಜನರು ಜೀವನದಲ್ಲಿ ಸಾಕಷ್ಟು ಮುನ್ನಡೆಯುತ್ತಾರೆ ಮತ್ತು ಖ್ಯಾತಿಯನ್ನು ಗಳಿಸುತ್ತಾರೆ.
( ಸೂಚನೆ : ಇಲ್ಲಿ ಒದಗಿಸಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನು ಖಚಿತ ಪಡಿಸುವುದಿಲ್ಲ. )