ಪುಷ್ಪಾ..ಕಲ್ಕಿ..ದೇವರಾ ಅವತಾರದಲ್ಲಿ ಮೂಡಿಬಂತು ಗಣೇಶನ ವಿಗ್ರಹ! ಅದ್ಬುತ ವಿನ್ಯಾಸದೊಂದಿಗೆ ಮೂರ್ತಿಗಳು ಹೇಗಿವೆ ಗೊತ್ತಾ? ಫೋಟೋಸ್‌ ನೋಡಿ

Tue, 10 Sep 2024-8:11 am,

ದೇಶದೆಲ್ಲೆಡೆ ವಿನಾಯಕ ಚವಿತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕಳೆದ ಬಾರಿಯಂತೆ ಈ ಬಾರಿಯೂ ಹಲವೆಡೆ ವಿವಿಧ ಗಣಪತಿಗಳು ಮಂಟಪಗಳಲ್ಲಿ ಅರಳಿ ನಿಂತಿವೆ. ಪುಷ್ಪಾ 2, ಕಲ್ಕಿ, ದೇವರ, ಹನುಮಂತ, ಸಾಲಾರ್ ಹೀಗೆ ವಿಭಿನ್ನ ರೂಪದಲ್ಲಿ ಗಣೇಶನ ಮೂರ್ತಿಗಳು ಮೂಡಿಬಂದಿವೆ.

ಎನ್ ಟಿಆರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ದೇವರಾ. ಇದರಲ್ಲಿ ಎನ್ ಟಿಆರ್ ಪಾತ್ರ ತುಂಬಾ ಪವರ್ ಫುಲ್ ಆಗಿರುತ್ತದೆ. ಇದೀಗ ದೇವರಾ ರೂಪದಲ್ಲಿ ಗಣೇಶ ಮೂರ್ತಿ ಮೂಡಿಬಂದಿದ್ದು ಅಭಿಮಾನಿಗಳು ಇದನ್ನು ನೋಡಿ ಫಿದಾ ಆಗಿದ್ದಾರೆ.

ಇತ್ತೀಚೆಗಷ್ಟೇ ತೆರೆಕಂಡ ಕಲ್ಕಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೇ ವಿಷಯವನ್ನು ಮನಸಿನಲ್ಲಿಟ್ಟುಕೊಂಡು ತಮಿಳುನಾಡಿನಲ್ಲಿ ಭಕ್ತರು ಅಶ್ವತ್ಥಾಮನ ರೀತಿಯ ಗಣೇಶ ಮೂರ್ತಿಗಳನ್ನು ಸ್ಥಾಪಿಸಿದ್ದಾರೆ.

ಕಲ್ಕಿಯಂತೆ, ಪ್ರಭಾಸ್‌ ಅವರ ಸಲಾರ್‌ ಅವತಾರದಲ್ಲಿ ಗಣೇಶ ಮೂರ್ತಿಯನ್ನು ವಿನ್ಯಾಸಗೊಳಿಸಲಾಗಿದೆ. ಅನಂತಪುರದಲ್ಲಿ ಸಾಲಾರ್ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.

ತೇಜ ಸಜ್ಜ ನಾಯಕನಾಗಿ ನಟಿಸಿರುವ ಹನುಮಾನ್‌ ಸಿನಿಮಾ, ಈ ವರ್ಷದಲ್ಲಿ ತೆರೆಕಂಡ ಬ್ಲಾಕ್‌ ಬಸ್ಟರ್‌ ಸಿನಿಮಾಗಳಲ್ಲಿ ಒಂದು ಅಂತಲೇ ಹೇಳಬಹುದು. ಇದರಲ್ಲಿ ಹನುಮಂತನ ರೂಪದಲ್ಲಿ ಗಣೇಶನ ವಿಗ್ರಹ ಮೂಡಿಬಂದಿತ್ತು, ಈ ವಿಶೇಷ ಮೂರ್ತಿಯ ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿದ್ದರು.

ಕೆಲ ದಿನಗಳ ಹಿಂದೆ ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದಿತ್ತು. ಈ ಕ್ರಮದಲ್ಲಿ ಹಲವೆಡೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಭಾರತೀಯ ಕ್ರಿಕೆಟಿಗರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link