Gardening in Monsoon: ಮಳೆಗಾಲದಲ್ಲಿ ಸಸ್ಯ ಗಿಡಗಳ ಆರೈಕೆಗೆ ಉಪಯುಕ್ತ ಟಿಪ್ಸ್ ಇಲ್ಲಿವೆ..

Thu, 29 Jul 2021-6:33 pm,

ಸಸ್ಯ ಗಿಡಗಳ ಆರೈಕೆ ಮಾಡುವ ಮುಖ್ಯ ಅಂಶವೆಂದರೆ ಹೆಚ್ಚು ನೀರು ಬಳಸದಿರುವುದು. ಅಗತ್ಯ ಪ್ರಮಾಣದ ನೀರು ಬಳಬೇಕು. ಅತಿಯಾಗಿ ಸಸ್ಯಗಳಿಗೆ ನೀರು ಹಾಕುವುದು ಮಣ್ಣಿನ ಫಲವತ್ತತೆಗೆ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ಸಸ್ಯಗಳು ಹೆಚ್ಚು ಕಾಲ ಉಳಿಯುವುದಿಲ್ಲ.

ಸಸ್ಯ ಗಿಡಗಳು ಸಮೃದ್ಧವಾಗಿ ಯಾವುದೇ ತೊಂದರೆಯಿಲ್ಲದೆ ಬೆಳೆಯಬೇಕೆಂದರೆ ಅದಕ್ಕೆ ಉತ್ತಮ ಪಾಟ್ ಗಳ ಅಗತ್ಯವಿರುತ್ತದೆ. ಹೀಗಾಗಿ ಬುಡದಲ್ಲಿ ರಂಧ್ರವಿರುವ ಮಡಿಕೆಗಳನ್ನು ಬಳಸಬೇಕಾಗುತ್ತದೆ. ಏಕೆಂದರೆ ಸಸ್ಯಗಳಿಗೆ ಹಾಕುವ ಹೆಚ್ಚುವರಿ ನೀರು ಆ ರಂಧ್ರದ ಮೂಲಕ ಹೊರಹೋಗುತ್ತದೆ.  ಒಂದು ವೇಳೆ ರಂಧ್ರವಿರದ ಮಡಿಕೆ ಬಳಸಿದರೆ ಹೆಚ್ಚುವರಿ ನೀರು ಸಂಗ್ರಹವಾಗಿ ಸಸ್ಯಗಳು ಕೊಳೆತು ಹೋಗಬಹುದು. ರಂಧ್ರವಿರುವ ಮಡಿಕೆಗಳು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದಿಂದ ಸಸ್ಯಗಿಡಗಳ ಸೂಕ್ಷ್ಮ ಬೇರುಗಳನ್ನು ರಕ್ಷಿಸುತ್ತವೆ.    

ಅನೇಕ ಬಾರಿ ಸಸ್ಯ ಗಿಡಗಳು ವಿಚಿತ್ರ ರೋಗಕ್ಕೆ ತುತ್ತಾಗುತ್ತವೆ. ಇದರಿಂದ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ. ಕಪ್ಪು ಚುಕ್ಕೆ ಶಿಲೀಂಧ್ರದಿಂದ ಉಂಟಾಗುವ ಸೋಂಕಿನಿಂದ ಎಲೆಗಳು ಉದುರಲು ಪ್ರಾರಂಭಿಸುತ್ತವೆ. ಸಂಪೂರ್ಣವಾಗಿ ಗಿಡಗಳೇ ಕೊಳೆತು ಹೋಗುವ ಹಾಗೆ ಸೋಂಕುಗಳು ಆವರಿಸುತ್ತವೆ. ಆಗಾಗ ಸೋಂಕಿನ ಬಗ್ಗೆ ಪರಿಶೀಲಿಸಿ ಅಗತ್ಯ ಆರೈಕೆ ಮಾಡಬೇಕು.  

ಯಾವುದೇ ಸಸ್ಯ ಗಿಡಗಳು ಸಮೃದ್ಧವಾಗಿ ಬೆಳೆಯಲು ಸರಿಯಾದ ವಾತಾವರಣ ಅಗತ್ಯ. ಸರಿಯಾದ ತೇವಾಂಶ, ಬಿಸಿ ಗಾಳಿ ಸಸ್ಯಗಳ ಬೆಳವಣಿಗೆಗೆ ಕಾರಣವಾಗುತ್ತದೆ. ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆಯಲ್ಲಿ ಸಸ್ಯಗಳು ಗಾಳಿಯಿಂದ ಇಂಗಾಲದ ಡೈಆಕ್ಸೈಡ್ ಪಡೆದುಕೊಂಡು ಆಮ್ಲಜನಕವನ್ನೂ ಹೊರಬೀಡುತ್ತವೆ. ಇಂದು ನಾವು ಉಸಿರಾಡುವ ಶುದ್ಧ ಗಾಳಿ ಸಸ್ಯ ಗಿಡಗಳ ಕೊಡುಗೆ ಎನ್ನುವುದನ್ನು ಮರೆಯದಿರಿ. ಹೀಗಾಗಿ ಸಾಧ್ಯವಾದಷ್ಟು ಗಿಡಗಳನ್ನು ಬೆಳೆಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.  

ಮಳೆಗಾಲ ಪ್ರಾರಂಭಕ್ಕೂ ಮುನ್ನ ಸಸ್ಯ ಗಿಡಗಳನ್ನು ಅಗತ್ಯಕ್ಕೆ ತಕ್ಕಷ್ಟು ಕಟಾವು ಮಾಡಬೇಕು. ಇದು ವಿವಿಧ ರೋಗಗಳಿಂದ ಸಸ್ಯಗಳನ್ನು ಕಾಪಾಡುತ್ತದೆ. ಅಲ್ಲದೆ ಗಿಡಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ನೋಡಲು ಮನಸ್ಸಿಗೆ ಮುದ ನೀಡುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link