ನಿರಂತರ ಕೆಮ್ಮು, ಮೂಗು ಕಟ್ಟುವುದರಿಂದ ರಾತ್ರಿ ನಿದ್ದೆಗೆಡುತ್ತಿದೆಯೇ ? ತಲೆದಿಂಬು ಮತ್ತು ಪಾದದಡಿಯಲ್ಲಿ ಈ ವಸ್ತು ಇಟ್ಟು ಮಲಗಿ !
ಕೆಲವೊಮ್ಮೆ ಹಗಲು ಹೊತ್ತು ಅಷ್ಟಾಗಿ ಕಾಡದ ಕೆಮ್ಮು ರಾತ್ರಿಯಾಗುತ್ತಿದಂತೆಯೇ ವಿಪರೀತವಾಗಿ ಬಿಡುತ್ತದೆ.ಅದರಲ್ಲಿಯೂ ದಿಂಬಿಗೆ ತಲೆ ಕೊಡುತ್ತಿದ್ದಂತೆಯೇ ಎಡೆಬಿಡದೆ ಕಾಡಲು ಶುರುವಾಗುತ್ತದೆ.
ಹೀಗಾದಾಗ ನಿದ್ದೆ ಬರುವುದೇ ಇಲ್ಲ.ಮಕ್ಕಳಿಗೆ ಉಸಿರಾಟದ ಸಮಸ್ಯೆ ಉಂಟಾಗಿ ವಾಂತಿ ಕೂಡಾ ಆಗುತ್ತದೆ.
ಹೀಗಾದಾಗ ಮಲಗುವಾಗ ತಲೆದಿಂಬಿನ ಅಡಿಯಲ್ಲಿ ಬೆಳ್ಳುಳ್ಳಿ ಎಸಳುಗಳನ್ನು ಇಟ್ಟುಕೊಳ್ಳಿ. ಮಾತ್ರವಲ್ಲ ಒಂದು ಬಟ್ಟೆಯಲ್ಲೂ ಬೆಳ್ಳುಳ್ಳಿಯನ್ನು ಸುತ್ತಿ ಪಾದದ ಅಡಿಗೆ ಕೂಡಾ ಕಟ್ಟಬೇಕು.
ಹೀಗೆ ಮಾಡಿ ಮಲಗಿದರೆ ಕೆಮ್ಮು.ನೆಗಡಿ, ಮೂಗು ಕಟ್ಟುವುದು ಈ ಯಾವ ಸಮಸ್ಯೆಯೂ ಇಲ್ಲದೆ ರಾತ್ರಿ ಪೂರ್ತಿ ಚೆನ್ನಾಗಿ ನಿದ್ದೆ ಬರುತ್ತದೆ. ಉಸಿರಾಟದ ಸಮಸ್ಯೆ ಕೂಡ ಕಾಡುವುದಿಲ್ಲ.
ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎನ್ನುವ ಅಂಶ ಚೆನ್ನಾಗಿನಿದ್ದೆ ಬರುವಂತೆ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಔಷಧೀಯ ಗುಣ ಕಫ ಕರಗುವಂತೆ ಮಾಡುತ್ತದೆ.
ಬೆಳ್ಳುಳ್ಳಿಯಲ್ಲಿ ರೋಗ ನಿರೋಧಕ ಶಕ್ತಿಯನ್ನುಹೆಚ್ಚಿಸುವ ಶಕ್ತಿಯಿದೆ.ತಲೆದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಉಸಿರಾಟದ ಮೂಲಕ ಆ ಗುಣಗಳು ನಮ್ಮ ದೇಹ ಸೇರುತ್ತವೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.