ಹಾರ್ಟ್ ಬ್ಲಾಕೇಜ್ ಸಮಸ್ಯೆಗೆ ಅತ್ಯುತ್ತಮ ಔಷಧಿ ಈ ಮೂರು ಆಯುರ್ವೇದ ಪದಾರ್ಥ

Thu, 11 Jul 2024-3:04 pm,

ಹೃದಯಕ್ಕೆ ರಕ್ತವನ್ನು ಪೂರೈಕೆಯಲ್ಲಿ ಅಡಚಣೆಯಾಗುವಂತಹ ಸ್ಥಿತಿಯೇ ಹಾರ್ಟ್ ಬ್ಲಾಕೇಜ್. ಸಾಮಾನ್ಯವಾಗಿ ಕೊಲೆಸ್ಟ್ರಾಲ್ ಹೆಚ್ಚಳ, ಕಳಪೆ ಆಹಾರ, ವ್ಯಾಯಾಮದ ಕೊರತೆ, ಧೂಮಪಾನ ಸೇರಿದಂತೆ ಇದಕ್ಕೆ ಹಲವು ಕಾರಣಗಳಿವೆ. 

ಆದರೆ, ನಿಮ್ಮ ದೈನಂದಿನ ಆಹಾರದಲ್ಲಿ ಆಯುರ್ವೇದ ಗುಣಗಳಿಂದ ಹೇರಳವಾಗಿರುವ ಮೂರು ಪದಾರ್ಥಗಳನ್ನು ಬಳಸುವುದರಿಂದ ಹಾರ್ಟ್ ಬ್ಲಾಕೇಜ್ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು. ಅವುಗಳೆಂದರೆ... 

ಬೆಳ್ಳುಳ್ಳಿ ಎಲೆಗಳಲ್ಲಿ ಅಲಿಸಿನ್ ಎಂಬ ಅಂಶ ಹೇರಳವಾಗಿದ್ದು ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಿ ಪ್ಲೇಕ್‌ನಿಂದ ಅಪಧಮನಿಗಳು ಗಟ್ಟಿಯಾಗುವುದನ್ನು ತಡೆಯುತ್ತದೆ. ಇದರಿಂದಾಗಿ ಹಾರ್ಟ್ ಬ್ಲಾಕೇಜ್ ಸಮಸ್ಯೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಎನ್ನಲಾಗುತ್ತದೆ. 

ಪ್ರತಿ ಭಾರತೀಯ ಅಡುಗೆ ಮನೆಯಲ್ಲೂ ಸುಲಭವಾಗಿ ಲಭ್ಯವಿರುವ ಶುಂಠಿ ಕೇವಲ ಗಿಡಮೂಲಿಕೆಯಲ್ಲ, ಅಸಾಧಾರಣ ಔಷಧೀಯ ಗುಣಗಳ ಗಣಿ. ಶುಂಠಿ ಬಳಕೆಯಿಂದ ಕೊಲೆಸ್ಟ್ರಾಲ್ ನಿಯಂತ್ರಿಸಿ ರಕ್ತಹೆಪ್ಪುಗಟ್ಟುವಿಕೆಯನ್ನು ತಡೆಯಬಹುದು.   

ಅರಿಶಿನದಲ್ಲಿರುವ ಕರ್ಕ್ಯುಮಿನ್ ಅಂಶವೂ ಉರಿಯೂತ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದ್ದು ಇದು ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಿಸಿ, ಹೃದಯದ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡುತ್ತದೆ ಎನ್ನಲಾಗುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link