ಮಧುಮೇಹಿಗಳು ಪ್ರತಿದಿನ ಈ ರೀತಿ ಬೆಳ್ಳುಳ್ಳಿ ಸೇವಿಸಿದ್ರೆ ಶುಗರ್ ಲೆವಲ್ ಹೆಚ್ಚಾಗೋದೇ ಇಲ್ಲ!
ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಮೂಳೆಗಳನ್ನು ಬಲಪಡಿಸುತ್ತದೆ. ವಯಸ್ಸಾದಂತೆ ಕಾಡುವ ಮೂಳೆ ಸವೆತದಿಂದ ರಕ್ಷಿಸುತ್ತದೆ.
ಬೆಳಗ್ಗೆ ಹೊಟ್ಟೆ ಶುಚಿಯಾಗದಿದ್ದರೆ ಅಥವಾ ಅಸಿಡಿಸಿ ಸಮಸ್ಯೆಯಿಂದ ಬಳಲುತ್ತಿದ್ದರೆ ಪ್ರತಿದಿನ ಬೆಳ್ಳುಳ್ಳಿ ಎಸಳು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ.
ಬೆಳ್ಳುಳ್ಳಿ ಎಸಳುಗಳನ್ನು ಪ್ರತಿದಿನ ಬೆಳಿಗ್ಗೆ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಹೃದ್ರೋಗದ ಅಪಾಯವು ಬಹಳ ನಿವಾರಣೆಯಾಗುತ್ತದೆ.
ಬೆಳ್ಳುಳ್ಳಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು. ದೇಹದಲ್ಲಿರುವ ಕಲ್ಮಶಗಳು ನಿವಾರಣೆಯಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಪ್ರತಿದಿನ ಕನಿಷ್ಠ 3-4 ಎಸಳು ಬೆಳ್ಳುಳ್ಳಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.