ಬಿಳಿಕೂದಲನ್ನು ಕೇವಲ 10 ನಿಮಿಷದಲ್ಲಿ ಬುಡದಿಂದಲೇ ಪರ್ಮನೆಂಟ್ ಆಗಿ ಕಪ್ಪಾಗಿಸುತ್ತೆ ಬೆಳ್ಳುಳ್ಳಿ ಸಿಪ್ಪೆ!
ಅನೇಕ ಜನರು ತಮ್ಮ ಕೂದಲನ್ನು ತಕ್ಷಣವೇ ಕಪ್ಪಾಗಿಸಲು ರಾಸಾಯನಿಕ ಬಣ್ಣಗಳನ್ನು ಬಳಸುತ್ತಾರೆ. ಅಂತಹ ರಾಸಾಯನಿಕ ಬಣ್ಣಗಳು ನಿಮ್ಮ ಕೂದಲನ್ನು ಕೆಲವೇ ನಿಮಿಷಗಳಲ್ಲಿ ಕಪ್ಪಾಗಿಸಿದರೂ ಅದು ಕೂದಲಿಗೆ ಹಲವಾರು ರೀತಿಯ ಹಾನಿಯನ್ನುಂಟುಮಾಡುವ ಸಾಧ್ಯತೆಯಿದೆ.
ನೈಸರ್ಗಿಕ ವಿಧಾನಗಳನ್ನು ಬಳಸಿಕೊಂಡು ನಿಮ್ಮ ಕೂದಲನ್ನು ಕಪ್ಪಾಗಿಸಬಹುದು. ಅದರಲ್ಲಿ ಒಂದು ವಿಧಾನ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆ. ಇವುಗಳನ್ನು ಬಳಸಿಕೊಂಡು ಕೆಲವೇ ನಿಮಿಷಗಳಲ್ಲಿ ಬಿಳಿಕೂದಲನ್ನು ಪರ್ಮನೆಂಟ್ ಆಗಿ ಕಪ್ಪಾಗಿಸಬಹುದು.
ಗ್ಯಾಸ್ ಮೇಲೆ ಕಬ್ಬಿಣದ ಪ್ಯಾನ್ ಇಟ್ಟು, ಅದಕ್ಕೆ, ಒಂದು ಹಿಡಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳನ್ನು ಸೇರಿಸಿ. ಅದರ ಬಣ್ಣ ಕಪ್ಪು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಈಗ ಅದಕ್ಕೆ ಬೆಲ್ಲವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಎಲ್ಲಾ ಮೂರು ವಸ್ತುಗಳನ್ನು ಚೆನ್ನಾಗಿ ಹುರಿದ ನಂತರ, ತಣ್ಣಗಾಗಲು ಬಿಡಿ.
ಇದನ್ನು ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ತಯಾರಿಸಿದ ಪುಡಿಗೆ ತೆಂಗಿನ ಎಣ್ಣೆ ಅಥವಾ ಎಳ್ಳು ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಈ ತಯಾರಿಸಿದ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ. ಸುಮಾರು 10 ರಿಂದ 15 ನಿಮಿಷಗಳ ಕಾಲ ಬಿಡಿ. ನಂತರ ಕೂದಲನ್ನು ತೊಳೆಯಿರಿ. ಇದರಿಂದ ನಿಮ್ಮ ಬಿಳಿ ಕೂದಲು ಕಪ್ಪಾಗುವುದು ಮಾತ್ರವಲ್ಲದೆ, ಕೂದಲಿನ ಬಲವನ್ನು ನೀಡುತ್ತದೆ. ಈ ಪರಿಹಾರವನ್ನು ತಿಂಗಳಿಗೆ 2 ರಿಂದ 3 ಬಾರಿ ಪ್ರಯತ್ನಿಸುವುದರಿಂದ, ನಿಮ್ಮ ಕೂದಲು ಕ್ರಮೇಣ ನೈಸರ್ಗಿಕವಾಗಿ ಕಪ್ಪಾಗುತ್ತದೆ.
ಕೂದಲು ಬಿಳಿಯಾಗುವ ಸಮಸ್ಯೆಯನ್ನು ನಿವಾರಿಸಲು, ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳನ್ನು ಬಳಸಬಹುದು. ಆದರೆ ಅಲರ್ಜಿಯಂತಹ ಸಮಸ್ಯೆ ಹೊಂದಿದ್ದರೆ ಇದನ್ನು ಬಳಕೆ ಮಾಡಬೇಡಿ. ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ.