Garuda Purana: ಯಾವುದೇ ವ್ಯಕ್ತಿಗೆ ಸಾವಿನ ಸೂಚನೆ ನೀಡುವ 5 ಲಕ್ಷಣಗಳು; ಗರುಡ ಪುರಾಣದಲ್ಲಿ ಏನು ಹೇಳಲಾಗಿದೆ ಗೊತ್ತಾ?
ಯಾವುದೇ ಒಬ್ಬ ವ್ಯಕ್ತಿಯು ತನ್ನ ಸಾವಿಗೂ ಮೊದಲು ತನ್ನ ಜೀವನದ ಹಳೆಯ ದಿನಗಳನ್ನು ಮೆಲುಕು ಹಾಕಲು ಪ್ರಾರಂಭಿಸುತ್ತಾನಂತೆ. ಅದರ ಮೂಲಕ ಅವನು ತನ್ನ ಜೀವನದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾನೆಂದು ಹೇಳಲಾಗಿದೆ.
ಮನುಷ್ಯನಿಗೆ ಮರಣ ಸಮೀಪಿಸುವಾಗ ಆತನಿಗೆ ತಾನು ಮಾಡಿದ ಎಲ್ಲಾ ಕೆಟ್ಟ ಕಾರ್ಯಗಳ ಅರಿವಾಗುತ್ತದಂತೆ. ಆತ ಇದೇ ವಿಚಾರವಾಗಿ ತನ್ನ ಪಾಪ-ಪುಣ್ಯ ಕಾರ್ಯಗಳ ಬಗ್ಗೆ ನೆನಪಿಸಿಕೊಳ್ಳುತ್ತಾನಂತೆ.
ಸಾವಿಗೂ ಮೊದಲು ಕೈಯಲ್ಲಿರುವ ರೇಖೆಗಳು ಕೂಡ ಆ ವ್ಯಕ್ತಿಗೆ ಸ್ಪಷ್ಟವಾಗಿ ಕಾಣಿಸುವುದಿಲ್ಲ. ವ್ಯಕ್ತಿಯು ಸಾವಿನ ಸಮೀಪದಲ್ಲಿರುವಾಗ ಚಿತ್ರ-ವಿಚಿತ್ರವಾಗಿ ಮಾತನಾಡುತ್ತಾನಂತೆ.
ಗರುಡ ಪುರಾಣದಲ್ಲಿ ಹೇಳಿದಂತೆ ಯಾವುದೇ ಒಬ್ಬ ವ್ಯಕ್ತಿಯು ಸತ್ತಾಗ ಅವನು ನಿಗೂಢವಾದ ಬಾಗಿಲನ್ನು ನೋಡುತ್ತಾನಂತೆ. ಕೆಲವರು ಜ್ವಾಲೆಗಳನ್ನು ನೋಡುತ್ತಾರಂತೆ.
ಯಾವುದೇ ವ್ಯಕ್ತಿಯು ಸಾವಿನ ಸಮೀಪದಲ್ಲಿದ್ದಾಗ ಅವನು ಯಮದೂತನನ್ನು ನೋಡುತ್ತಾನಂತೆ. ಕಾರಣವಿಲ್ಲದೆ ನಗುತ್ತಿರುತ್ತಾನಂತೆ. ಆ ವ್ಯಕ್ತಿಗೆ ಪಿತೃಗಳು ಕಾಣಿಸುತ್ತಾರಂತೆ. ಆತನಿಗೆ ಮಾಯಾ ಬಾಗಿಲು ಕಾಣಿಸುವುದದಂತೆ.