Garuda Purana: ಗರುಡ ಪುರಾಣದ ಪ್ರಕಾರ ಸಾವು ಸಮೀಪಿಸಿದ ವ್ಯಕ್ತಿಗೆ ಈ ರೀತಿ ಅನುಭವವಾಗುತ್ತದೆ!

Wed, 22 May 2024-4:42 pm,

ಗರುಡ ಪುರಾಣದ ಪ್ರಕಾರ ಸಾವು ಸಮೀಪಿಸುವಾಗ ವ್ಯಕ್ತಿಗೆ ಅದರ ಸೂಚನೆ ಲಭಿಸುತ್ತದೆ. ಸಾವಿನ ಕೆಲವೇ ಸಮಯದ ಮೊದಲು ಆತ ತನ್ನ ಜೀವನದಲ್ಲಿ ಮಾಡಿದ ತಪ್ಪುಗಳು ಮತ್ತು ತನ್ನ ಬಾಲ್ಯದಿಂದ ಹಿಡಿದು ಇಲ್ಲಿಯವರೆಗಿನ ಬದುಕಿನ ಬಗ್ಗೆ ಮೆಲುಕು ಹಾಕಲು ಪ್ರಯತ್ನಿಸುತ್ತಾನೆ.

ಸಾವಿನ ಕೆಲವೇ ಕ್ಷಣಗಳ ಮೊದಲು ಯಾವುದೇ ಒಬ್ಬ ವ್ಯಕ್ತಿ ಕೆಲವೊಂದು ಅರ್ಥವೇ ಆಗದಂತಹ ಮಾತುಗಳನ್ನು ಆಡುತ್ತಾನೆ. ಕೆಲವರು ತಮ್ಮ ತಪ್ಪುಗಳ ಬಗ್ಗೆ ಪಶ್ಚಾತ್ತಾಪ ಪಟ್ಟುಕೊಂಡರೆ ಮತ್ತೆ ಕೆಲವರು ತಾವು ಮಾಡಿದ ಕರ್ಮಗಳನ್ನು ನೆನೆಸಿಕೊಳ‍್ಳುತ್ತಾರೆ. 

ಸಾವು ಸಮೀಪಿಸುವ ಸಂದರ್ಭದಲ್ಲಿ ಯಾವುದೇ ಒಬ್ಬ ವ್ಯಕ್ತಿಗೆ ಪೂರ್ವಜರು ಕನಸಿನಲ್ಲಿ ಬರುತ್ತಾರೆಂದು ನಂಬಲಾಗಿದೆ. ಕೆಲವೊಮ್ಮೆ ಪೂರ್ವಜರು ನಗುತ್ತಿರುವಂತೆ ಮತ್ತೆ ಕೆಲವರಿಗೆ ರೋಧಿಸುತ್ತಿರುವಂತೆ ಕಂಡುಬರುತ್ತದೆ.

ಸಾವು ಸಮೀಪ ಬಂದಾಗ ವ್ಯಕ್ತಿಯು ಯಮದೂತರನ್ನು ನೋಡುತ್ತಾನೆ. ಕೆಲವರು ಆತನನ್ನು ನೋಡಿ ನಕ್ಕರೆ ಮತ್ತೆ ಕೆಲವರು ಬೇಸರಗೊಳ್ಳುತ್ತಾರೆ.

ಸಾವು ಬಂದ ತಕ್ಷಣ ಒಂದು ಬಾಗಿಲು ತೆರೆಯುತ್ತದೆ. ಅಲ್ಲಿ ಕೆಲವರಿಗೆ ಜ್ವಾಲೆ ಕಂಡರೆ ಮತ್ತೆ ಕೆಲವರಿಗೆ ಪ್ರಕಾಶಮಾನವಾದ ಬೆಳಕು ಕಂಡುಬರುತ್ತದೆ. ಅವರವರ ಕರ್ಮಗಳಿಗೆ ಅನುಸಾರವಾಗಿ ಹೀಗೆ ಕಂಡುಬರುತ್ತದೆ ಎಂದು ಗರುಡಪುರಾಣದಲ್ಲಿ ವಿವರಿಸಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link